ಮರ್ಸಡೀಸ್ ಬೆಂಜ್ EQC ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಬಿಡುಗಡೆ; 471 ಕಿ.ಮೀ ಮೈಲೇಜ್!

By Suvarna NewsFirst Published Jun 21, 2020, 7:32 PM IST
Highlights

ಬಹುನಿರೀಕ್ಷಿತ ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಗೆ ರೆಡಿಯಾಗಿದೆ. 471 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು ಬಿಡುಗಡೆ ಹಲವು ಕಾರಣಗಳಿಂದ 2 ಬಾರಿ ಮುಂದೂಡಲಾಗಿತ್ತು. ಇದೀಗ ನೂತನ ಕಾರು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.
 

ನವದೆಹಲಿ(ಜೂ.21): ಕಳೆದ ವರ್ಷ ಬಿಡುಗಡೆ ಮಾಡಬೇಕಿದ್ದ ಮರ್ಸಡೀಸ್ ಬೆಂಜ್  EQC ಎಲೆಕ್ಟ್ರಿಕ್, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಕೊರೋನಾ ಕಾರಣ ಮತ್ತೆ ಬೆಂಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಮಾಡಿದೆ

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!.

ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ  EQC ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ, ನೂತನ ಕಾರು 450 ರಿಂದ 471 ಕಿ.ಮೀ ಮೈಲೇಜ್ ನೀಡಲಿದೆ. ಮೋಟಾರ್  402 bhp ಪವರ್ ಹಾಗೂ 765 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಕಾರಿನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಮೂಲಕ 4 ವೀಲ್ ಡ್ರೈವ್ ಅನುಭವ ನೀಡಲಿದೆ.

ನಾಳೆ 6ನೇ ಆವೃತ್ತಿ ಮರ್ಸಿಡೀಸ್ ಬೆಂಜ್ ಕ್ಲಾಸಿಕ್ ಕಾರು ರ‍್ಯಾಲಿ!..

ನೂತನ ಮರ್ಸಡೀಸ್ ಬೆಂಜ್ EQC ಎಲೆಕ್ಟ್ರಿಕ್ ಕಾರಿನ ಗರಿಷ್ಠ ವೇಗ 180 ಕಿ.ಮೀ ಪ್ರತಿ ಗಂಟೆಗೆ. 100 ಕಿ.ಮೀ ವೇಗಕ್ಕೆ 5.1 ಸೆಕೆಂಡ್ ತೆಗೆದುಕೊಳ್ಳಲಿದೆ. ನೂತನ ಮರ್ಸಡೀಸ್ ಬೆಂಜ್ EQC ಎಲೆಕ್ಟ್ರಿಕ್ ಕಾರಿನ ಬೆಲೆ 1.25 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

click me!