ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!

By Web Desk  |  First Published Jul 8, 2019, 9:52 AM IST

ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!| ಹೊಸ ನಿಯಮದಂತೆ ಕನಿಷ್ಠ 5000 ರು., ಗರಿಷ್ಠ 23000 ರು.ದಂಡ


ಮುಂಬೈ[ಜು.08]: ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿರುವ 26 ಸ್ಥಳಗಳ ಸಮೀಪ ಅಕ್ರಮವಾಗಿ ವಾಹನ ಪಾರ್ಕಿಂಗ್ ಮಾಡಿದರೆ ಭಾರೀ ದಂಡ ವಿಧಿಸುವ ನಿಯಮ ಮುಂಬೈನಲ್ಲಿ ಭಾನುವಾರದಿಂದ ಜಾರಿ ಆಗಿದೆ.

ಮೊದಲ ದಿನವೇ ಹೀಗೆ ಅಕ್ರಮವಾಗಿ ಪಾರ್ಕ್ ಮಾಡಿದ್ದ 60ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸ್ ವಾಹನಗಳು ಎತ್ತಿಕೊಂಡುಹೋಗಿವೆ. ಈ ಪೈಕಿ 9 ಕಾರುಗಳ ಮಾಲೀಕರು ತಲಾ 10,000 ರು. ದಂಡ ಕಟ್ಟಿ ಕಾರು ಬಿಡಿಸಿಕೊಂಡು ಹೋಗಿದ್ದಾರೆ. ಉಳಿದ ಮಾಲೀಕರು ದಂಡದ ಜೊತೆ, ವಿಳಂಬ ಶುಲ್ಕ ಕಟ್ಟಿ ಕಾರು ಬಿಡಿಸಿಕೊಳ್ಳಬೇಕಿದೆ.

Tap to resize

Latest Videos

ಹೊಸ ನಿಯಮದಂತೆ ಕನಿಷ್ಠ 5000 ರು., ಗರಿಷ್ಠ 23000 ರು.ದಂಡ ವಿಧಿಸಲಾಗುವುದು.

click me!