ಕ್ಯಾಬ್ ಡ್ರೈವರ್‌ಗೆ ಹೆಲ್ಮೆಟ್‌ನಿಂದ ಥಳಿತ -ಬೈಕ್ ಸವಾರನಿಗೆ ಜೈಲು ಶಿಕ್ಷೆ!

By Web Desk  |  First Published Dec 11, 2018, 8:33 PM IST

ವಾಹನ ಟಚ್ ಆಯ್ತು ಎಂದು ರಸ್ತೆ ಮಧ್ಯೆದಲ್ಲಿ ಹೊಡೆದಾಟ ಮಾಡುವವರಿಗೆ ಎಚ್ಚರಿಕೆ ಕರೆ ಗಂಟೆ. ಹೀಗೆ  ಹೆಲ್ಮೆಟ್‌ನಿಂದ ಹೊಡೆದ ಬೈಕ್ ಸವಾರ ಇದೀಗ ಜೈಲುಪಾಲಾಗಿದ್ದಾನೆ. ಇಲ್ಲಿದೆ ಹೆಚ್ಚಿನ ವಿವರ.


ಮುಂಬೈ(ಡಿ.11): ಕ್ಯಾಬ್ ಚಾಲಕನಿಗೆ ಹೆಲ್ಮೆಟ್‌ನಿಂದ ಥಳಿಸಿದ ಬೈಕ್ ಸವಾರನಿಗೆ ಬರೋಬ್ಬರಿ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. 2015ರಲ್ಲಿ ನಡೆದ ಪ್ರಕರಣ ತೀರ್ಪು ಇದೀಗ ಹೊರಬಿದ್ದಿದ್ದು, ಬೈಕ್ ಸವಾರ ಜೈಲುಪಾಲಾಗಿದ್ದಾನೆ.

ಕ್ಯಾಬ್ ಚಾಲಕ ಸುರೇಂದ್ರನಾಥ್ ದುಬೆ ಮನೆಗೆ ತೆರಳುತ್ತಿದ್ದ ವೇಳೆ, ಎದುರಿನಿಂದ ವೇಗವಾಗಿ ಬಂದ ಬೈಕ್ ಸವಾರ ಅಲ್ಪೇಶ್ ಗಾಂಧಿ ಅಪಘಾತ ಮಾಡಿದ್ದ. ತಕ್ಷಣವೇ ಕ್ಯಾಬ್ ಚಾಲಕ ಬ್ರೇಕ್ ಹಾಕಿದರೂ ಕಾರು ಬೈಕ್‌ಗೆ ತಾಗಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿರಲಿಲ್ಲ.

Latest Videos

ಬೈಕ್‌ನಿಂದ  ಇಳಿದು ಬಂದ ಅಲ್ಪೇಶ್ ಗಾಂಧಿ ತನ್ನ ಹೆಲ್ಮೆಟ್‌ನಿಂದ ಕ್ಯಾಬ್ ಚಾಲಕನಿಗೆ  ಥಳಿಸಿದ್ದಾನೆ. ಇದರಿಂದ ಕ್ಯಾಬ್ ಚಾಲಕನ ತಲೆ ಒಡೆದು ತೀವ್ರ ರಕ್ತಸ್ರಾವವಾಗಿತ್ತು. ಪ್ರಕರಣದಿಂದ ಪೊಲೀಸ್ ಠಾಣೆ ಮೆಟ್ಟೇಲೇರಿದ ಕ್ಯಾಬ್ ಚಾಲಕ ದೂರು ದಾಖಲಿಸಿದ್ದ.

ಸಾಕ್ಷಿ, ವೈದ್ಯಕೀಯ ವರದಿ, ಸಿಸಿಟಿವಿ ಆಧಾರದ ಮೇಲೆ ಬೈಕ್ ಸವಾರನಿಗೆ ಒಂದು ವರ್ಷ ಜೈಲು ಶಿಕ್ಷೆ, 10,000 ರೂಪಾಯಿ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ ರಸ್ತೆ ಮಧ್ಯೆ ಹೊಡೆದಾಟವನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.
 

click me!