BGauss ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ, ಮಾರಾಟ ಆರಂಭ!

By Suvarna News  |  First Published Jul 20, 2020, 2:31 PM IST

ಭಾರತದ BGauss ಸ್ಟಾರ್ಟ್ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ ಪಡಿಸಿದೆ. A2 ಹಾಗೂ B8 ಎರಡು ವೇರಿಯೆಂಟ್  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಮಾರಾಟವೂ ಆರಂಭಗೊಂಡಿದೆ. ನೂತನ ಸ್ಕೂಟರ್ ವಿಶೇಷತೆ, ಮೈಲೇಜ್ ಹಾಗೂ ಬೆಲೆ ಮಾಹಿತಿ ಇಲ್ಲಿದೆ.


ನವದೆಹಲಿ(ಜು.20): ಕೊರೋನಾ ವೈರಸ್ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಕಂಪನಿಗಳು ಇದೀಗ ಒಂದರ ಮೇಲೊಂದರಂತೆ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ BGauss ಸ್ಟಾರ್ಟ್ ಅಪ್ ಕಂಪನಿಯ 2 ವೇರಿಯೆಂಟ್ ಮಾರಾಟ ಆರಂಭಗೊಂಡಿದೆ. A2  ಸ್ಕೂಟರ್  ಬೆಲೆ 52,499 ರೂಪಾಯಿ ಹಾಗೂ B8 ಸ್ಕೂಟರ್ ಬೆಲೆ  62,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

ಮೇಡ್ ಇನ್ ಇಂಡಿಯಾ ಜೆಮೊಪೈ ಮಿಸೋ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆ!.

Latest Videos

undefined

A2 ಸ್ಕೂಟರ್‌ನಲ್ಲಿ 2 ವೇರಿಯೆಂಟ್ ಹಾಗೂ B8 ಸ್ಕೂಟರ್‌ನಲ್ಲಿ 3 ವೇರಿಯೆಂಟ್ ಲಭ್ಯವಿದೆ.  5 ವೇರಿಯೆಂಟ್ ಸ್ಕೂಟರ್ ಬೆಲೆ ಇಲ್ಲಿದೆ.

A2 Lead Acid    52,499 ರೂಪಾಯಿ 
A2 Lithium-Ion    67,999 ರೂಪಾಯಿ 

B8 Lead Acid    62,999 ರೂಪಾಯಿ 
B8 Lithium-Ion    82,999 ರೂಪಾಯಿ 
B8 LI Technology 88,999 ರೂಪಾಯಿ 

ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!

ಬೇಸ್ ಮಾಡೆಲ್ A2 ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 92 ಕಿ.ಮೀ ಮೈಲೇಜ್ ನೀಡಲಿದೆ ಈ ಸ್ಕೂಟರ್ ಗರಿಷ್ಠ ವೇಗ 21 ಕಿ.ಮೀ ಪ್ರತಿ ಗಂಟೆಗೆ. ಲಿಥಿಯಂ ಐಯಾನ್ ಬ್ಯಾಟರಿ 2 ಗಂಟೆ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಆದರೆ ಲೀಡ್ ಆ್ಯಸಿಡ್ ಬ್ಯಾಟರಿ 7 ರಿಂದ 8 ಗಂಟೆ ಸಂಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುತ್ತದೆ. 

click me!