ದುಬಾರಿ ಬೆಂಟ್ಲಿ ಕಾರಿಗೆ ಟ್ಯಾಂಕ್ ರೂಪ- ಇದು ವಿಶ್ವದ ವಿಚಿತ್ರ ಕಾರು!

By Web Desk  |  First Published May 15, 2019, 11:32 AM IST

ಕಾರು ಮಾಡಿಫೈ ಮಾಡಿ ಬಳಕೆ ಮಾಡುವವ ಸಂಖ್ಯೆ ಹೆಚ್ಚು. ಕೆಲವೊಮ್ಮೆ ವಿಚಿತ್ರವಾಗಿ ಮಾಡಿಫಿಕೇಶನ್ ಮಾಡಿ ಎಲ್ಲರ ಗಮನಸೆಳೆಯುತ್ತಾರೆ. ಇದೀಗ ದುಬಾರಿ ಬೆಂಟ್ಲಿ ಕಾರಿಗೆ ವಿಚಿತ್ರ ರೂಪ ನೀಡಿ ಸುದ್ದಿಯಾಗಿದೆ.


ರಷ್ಯಾ(ಮೇ.15): ಬೆಂಟ್ಲಿ ಕಾರುಗಳು ವಿಶ್ವದ ದುಬಾರಿ ಹಾಗೂ ಐಷಾರಾಮಿ ಕಾರುಗಳು.  ಆದರೆ ಇದೇ ದುಬಾರಿ ಕಾರನ್ನು ಮಾಡಿಫೈ ಮಾಡಿ ಹೊಸ ರೂಪ ನೀಡಲಾಗಿದೆ. ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಚಕ್ರದ ಬದಲು ಟ್ಯಾಂಕ್ ವಾಹನಗಳಲ್ಲಿರುವ ಚೈನ್ ಅಳವಡಿಸಿ ಹೊಸ ರೂಪ ನೀಡಲಾಗಿದೆ. ಇಷ್ಟೇ ಅಲ್ಲ ಈ ಚೈನ್‌ಗೆ ತಕ್ಕಂತೆ ಎಂಜಿನ್  ಕೂಡ ಬದಲಾಯಿಸಲಾಗಿದೆ. 

Tap to resize

Latest Videos

 ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಎಂಜಿನ್ ತೆಗೆದು  ಟೊಯೊಟಾ 4.3-ಲೀಟರ್ V8 ಎಂಜಿನ್ ಬಳಸಲಾಗಿದೆ. ಈ ಕಾರು ಮಾಡಿಫೈ ಮಾಡಲು ನಿರಂತರ 9 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. 

ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ  ಬೆಲೆ 3.58 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).  ಈ ದುಬಾರಿ ಕಾರನ್ನು ಮಾಡಿಫೈ ಮಾಡಿ ಈ ರೀತಿ ಮಾಡಲಾಗಿದೆ. 
 

click me!