ಶೀಘ್ರದಲ್ಲೇ ಬಜಾಜ್ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶ!

By Web Desk  |  First Published Jul 25, 2019, 4:42 PM IST

ಚೇತಕ್ ಸ್ಕೂಟರ್ ಸ್ಥಗಿತಗೊಳಿಸಿದ ಬಳಿಕ ಬಜಾಜ್ ಕಂಪನಿ ಸ್ಕೂಟರ್ ನಿರ್ಮಾಣ ಬಿಟ್ಟು ಬೈಕ್‌ನತ್ತ ಗಮನ ಕೇಂದ್ರಕರಿಸಿ ಯಶಸ್ವಿಯಾಗಿತ್ತು. ಇದೀಗ ಬಜಾಜ್ ಮತ್ತೆ ಸ್ಕೂಟರ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ.
 


ಮುಂಬೈ(ಜು.25): ಬಜಾಜ್ ಆಟೋ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದಲ್ಲಿ ತೊಡಗಿರುವ ಬಜಾಜ್, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಬಜಾಜ್ ಅರ್ಬನೈಟ್ ಹೆಸರಿನಲ್ಲಿ ನೂತನ ಸ್ಕೂಟರ್ ಬಿಡುಗಡೆಯಾಗಲಿದೆ. ಸದ್ಯ ರೋಡ್ ಟೆಸ್ಟ್ ಪೂರ್ಣಗೊಳಿಸಿರುವ ಬಜಾಜ್ ಅರ್ಬನೈಟ್ ಸ್ಕೂಟರ್, ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಜಾಜ್ CT100 ಬೈಕ್ ಬಿಡುಗಡೆ!

Tap to resize

Latest Videos

undefined

ನಿರ್ಮಾಣ ಹಂತದಲ್ಲಿರುವ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗೋ ಸಾಧ್ಯತೆ ಇದೆ. ಚೇತಕ್ ಸ್ಕೂಟರ್ ಬಳಿಕ ಬಜಾಜ್ ಬೈಕ್‌ನತ್ತ ಗಮನ ಕೇಂದ್ರಿಕರಿಸಿ ಯಶಸ್ವಿಯಾಗಿತ್ತು. ಪಲ್ಸಾರ್, ಡಿಸ್ಕವರ್, ಡೊಮಿನಾರ್, ಅವೆಂಜರ್, ಸಿಟಿ100 ಸೇರಿದಂತೆ ಹಲವು  ಬೈಕ್‌ಗಳು ಭಾರತದಲ್ಲಿ ಜನಪ್ರಿಯವಾಗಿದೆ. ಚೇತಕ್  ಬೈಕ್ ಸ್ಥಗಿತಗೊಂಡ ಬಳಿಕ ಇದೇ ಮೊದಲ ಬಾರಿಗೆ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಬಜಾಜ್  ಸಜ್ಜಾಗಿದೆ.

ಇದನ್ನೂ ಓದಿ: ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!

ಎಲೆಕ್ಟ್ರಿಕ್ ವಾಹನಗಳಿಗೆ ಭಾರತ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದೆ. ಎಲೆಕ್ಟ್ರಿಕ್ ವಾಹನದ ಮೇಲಿನ GST ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿದೆ. ಈ ಸಾಲಿಗೆ ಬಜಾಜ್ ಕೂಡ ಸೇರಲಿದೆ. 

click me!