ಹ್ಯುಂಡೈ ಎಲೆಕ್ಟ್ರಿಕ್ ಕೋನಾ ಬಿಡುಗಡೆಯಾದ ಬೆನ್ನಲ್ಲೇ ಇದೀಗ i10 ಕಾರು ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಮಾಡಲು ಹ್ಯುಂಡೈ ರೆಡಿಯಾಗಿದೆ. ಹೊಸ ಫೀಚರ್ಸ್ ಹಾಗೂ ಹಲವು ಬದಲಾವಣೆಗಳೊಂದಿಗೆ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.
ನವದೆಹಲಿ(ಜು.24): ಹ್ಯುಂಡೈ ಕಂಪನಿ ಗರಿಷ್ಠ ಪ್ರಮಾಣದಲ್ಲಿ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಎಲೆಕ್ಟ್ರಿಕ್ ಕೋನಾ ಹಾಗೂ ವೆನ್ಯೂ SUV ಕಾರು ಬಿಡುಗಡೆ ಮಾಡಿರುವ ಹ್ಯುಂಡೈ, ಇದೀಗ Next-gen ಹ್ಯುಂಡೈ i10 ಕಾರಿನ ಅಪ್‌ಡೇಟೆಡ್ ವರ್ಶನ್ ಬಿಡುಗಡೆಯಾಗಲಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಹ್ಯುಂಡೈ ಐ10 ಕಾರು ಮಾರುಕಟ್ಟೆ ಪ್ರವೇಶಿಸಲಿದೆ.
undefined
ಇದನ್ನೂ ಓದಿ: ಹ್ಯುಂಡೆ ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!
Next-gen ಹ್ಯುಂಡೈ i10 ಕಾರು ಭಾರತ ಹಾಗೂ ಯುರೋಪ್‌ನಲ್ಲಿ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ. ಮೂಲಗಳ ಪ್ರಕಾರ ಆಗಸ್ಟ್ 20ಕ್ಕೆ ನೂತನ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ನೂತನ ಕಾರಿನ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ವೆನ್ಯೂ ಮಾದರಿ ಗ್ರಿಲ್ ಅಳವಡಿಸಲಾಗಿದ್ದು, ಮುಂಭಾಗದ ಶೈಲಿಯಲ್ಲಿ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಇನೋವಾ ಕಾರಿಗೆ ಪ್ರತಿಸ್ಪರ್ಧಿ; MG ಹೆಕ್ಟರ್ 7 ಸೀಟ್ ಕಾರು ಅನಾವರಣ!
ನೂತನ ನಿಯಮಕ್ಕೆ ಅನುಗುಣವಾಗಿ ಹ್ಯುಂಡೈ i10 ಕಾರು ಬಿಡುಗಡೆಯಾಗಲಿದೆ. ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಏರ್‌ಬ್ಯಾಗ್, ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ, ಸ್ಪೀಡ್ ಅಲರ್ಟ್ ನಿಯಮ ಪಾಲಿಸಲಿದೆ. ಇನ್ನು BS-VI ಎಮಿಶನ್ ಎಂಜಿನ್ ಹೊಂದಿದೆ. ನೂತನ ಕಾರಿನ ಬೆಲೆ ಬಹಿರಂಗವಾಗಿಲ್ಲ.