ಬರುತ್ತಿದೆ ಕಡಿಮೆ ಬೆಲೆಯ ಬಜಾಜ್ ಡೊಮಿನಾರ್; KTM 250 ಎಂಜಿನ್ ಬಳಕೆ!

Suvarna News   | Asianet News
Published : Feb 29, 2020, 06:56 PM IST
ಬರುತ್ತಿದೆ ಕಡಿಮೆ ಬೆಲೆಯ ಬಜಾಜ್ ಡೊಮಿನಾರ್; KTM 250 ಎಂಜಿನ್ ಬಳಕೆ!

ಸಾರಾಂಶ

ಭಾರತದಲ್ಲಿ ಸ್ಪೋರ್ಟ್ಸ್ ಬೈಕ್ , ಹೆಚ್ಚಿನ ಸಿಸಿ ಎಂಜಿನ್ ಬೈಕ್‌ಗೆ ಭಾರಿ ಬೇಡಿಕೆ ಇದೆ.  ಇದಕ್ಕೆ ತಕ್ಕಂತೆ ಬಜಾಜ್ ಇದೀಗ ಕಡಿಮೆ ಬೆಲೆಯ ಡೊಮಿನಾರ್ ಬೈಕ್ ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಈ ಬೈಕ್‌ಗೆ KTM 250 ಬೈಕ್ ಎಂಜಿನ್ ಬಳಕೆ ಮಾಡುತ್ತಿದೆ. ನೂತನ ಬೈಕ್ ವಿವರ ಇಲ್ಲಿದೆ.   

ನವದೆಹಲಿ(ಫೆ.29): ಬಜಾಜ್ ಆಟೋ ಲಿಮಿಟಿಡೆ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ಬಜಾಜ್ ಕಂಪನಿಯ ಡೊಮಿನಾರ್ 400 ಬೈಕ್ ಜನಪ್ರಿಯವಾಗಿದೆ. ಇದೀಗ ಕಡಿಮೆ ಬೆಲೆಯಲ್ಲಿ ಡೋಮಿನಾರ್ 250 ಬೈಕ್ ಬಿಡುಗಡೆ ಮಾಡಲು ಬಜಾಜ್ ರೆಡಿಯಾಗಿದೆ. ಮುಂದಿನ ತಿಂಗಳು ನೂತನ ಡೊಮಿನಾರ್ 250 ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: BS6 ಹೊಂಡಾ ಶೈನ್ 125 ಸಿಸಿ ಬೈಕ್ ಲಾಂಚ್, ಬೆಲೆ 67 ಸಾವಿರ!.

ನೂತನ ಡೊಮಿನಾರ್ 250 ಬೈಕ್‌ಗೆ KTM ಡ್ಯೂಕ್ 250 ಎಂಜಿನ್ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ KTM ಡ್ಯೂಕ್ ಬಜಾಜ್ ಜೊತೆ ಸಹಯೋಗ ಹೊಂದಿದೆ. ಹೀಗಾಗಿಯೇ ಬಜಾಜ್ ಪಲ್ಸಾರ್  NS 200 ಹಾಗೂ RS200 ಬೈಕ್, ಕೆಟಿಎಂ ಡ್ಯೂಕ್ 200 ಬೈಕ್ ಎಂಜಿನ್ ಬಳಸಲಾಗಿದೆ. ಇನ್ನು ಡೊಮಿನಾರ್ 400 ಬೈಕ್ ಕೂಡ, ಕೆಟಿಎಂ ಡ್ಯೂಕ್ 390 ಬೈಕ್ ಎಂಜಿನ್ ಬಳಸಿದೆ.

ಇದನ್ನೂ ಓದಿ: ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ಸಿದ್ಧತೆ!

ಬಜಾಜ್ ಡೊಮಿನಾರ್ 250 ಬೈಕ್ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಅಂದರೆ 250 ಸಿಸಿ ಬೈಕ್ ಸೆಗ್ಮೆಂಟ್ ಪೈಕಿ ಬಜಾಜ್ ಡೊಮಿನಾರ್ ಕಡಿಮೆ ಬೆಲೆಯ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಬಜಾಜ್ ಹೇಳಿದೆ.

ಬಜಾಜ್ ಡೊಮಿನಾರ್ 250, ಕೆಟಿಎಂ ಎಂಜಿನ್ ಆಗಿರುವುದರಿಂದ 248.8cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 30PS ಪವರ್ ಹಾಗೂ 24Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಟ್ರಾನ್ಸ್‌ಮಿಶನ್ ಹೊಂದಿರಲಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ