ಫ್ಲೈಓವರ್ ಹೈ-ವೇಯಲ್ಲಿ ಹೊಸ ಸ್ಪೀಡ್ ಲಿಮಿಟ್, ಮಿತಿ ಹೆಚ್ಚಾದರೆ ದುಬಾರಿ ದಂಡ!

Suvarna News   | Asianet News
Published : Feb 29, 2020, 06:10 PM ISTUpdated : Feb 29, 2020, 06:49 PM IST
ಫ್ಲೈಓವರ್ ಹೈ-ವೇಯಲ್ಲಿ ಹೊಸ ಸ್ಪೀಡ್ ಲಿಮಿಟ್, ಮಿತಿ ಹೆಚ್ಚಾದರೆ ದುಬಾರಿ ದಂಡ!

ಸಾರಾಂಶ

ನಗರಗಳಲ್ಲಿನ ಫ್ಲೈ ಓವರ್ ಹಾಗೂ ಹೈವೇಗಳಲ್ಲಿ ನಿಗದಿಪಡಿಸಿರುವ ಸ್ಪೀಡ್ ಲಿಮಿಟ್ ಬದಲಾಗಿದೆ. ಹಳೇ ಸ್ಪೀಡ್ ಲಿಮಿಟ್ ಪ್ರಕಾರ ಡ್ರೈವಿಂಗ್ ಮಾಡಿದರೆ ದಂಡಕ್ಕೆ ಗರಿಯಾಗಬೇಕಾಗುತ್ತದೆ. ಎಲ್ಲೆಲ್ಲಿ ಹೊಸ ಸ್ಪೀಡ್ ಲಿಮಿಟ್ ನಿಗದಿ ಮಾಡಲಾಗಿದೆ ಕುರಿತ ವಿವರ ಇಲ್ಲಿದೆ. 

ಮುಂಬೈ(ಫೆ.29): ನಗರ ಹಾಗೂ ಹೈ-ವೇ ರಸ್ತೆಗಳಲ್ಲಿ ಸುರಕ್ಷತೆ ಹಾಗೂ ಅಪಘಾತಗಳನ್ನು ತಗ್ಗಿಸಲು ವೇಗದ ಮಿತಿ ನಿಗದಿಪಡಿಸಿರುತ್ತಾರೆ. ನಗರದ ಫ್ಲೈ ಓವರ್, ಸೇತುವೆಗಳ ಮೇಲೂ ಸ್ಪೀಡ್ ಲಿಮಿಟ್ ಹಾಕಿರುತ್ತಾರೆ. ಇದೀಗ ನಗರ ಪ್ರದೇಶದ ಫ್ಲೈ ಓವರ್, ಸೇತುವೆ ಹಾಗೂ ಹೈವೇಗಳಲ್ಲಿನ ವೇದ ಮಿತಿ ಬದಲಾಯಿಸಲಾಗಿದೆ. ಈ ಮೂಲಕ ಅಪಘಾತಗಳನ್ನು ತಗ್ಗಿಸಲು ಮುಂಬೈ ಟ್ರಾಫಿಕ್ ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ವಿಶ್ವದ ಅತೀ ದೊಡ್ಡ ಜಿನೆವಾ ಮೋಟಾರು ಶೋ ಕ್ಯಾನ್ಸಲ್!

ಮುಂಬೈ ನಗರಗಳಲ್ಲಿನ ಫ್ಲೈ ಓವರ್, ಸೇತುವೆ ಹಾಗೂ ಹೈ-ವೇಗಳಲ್ಲಿನ ವೇಗದ ಮಿತಿ ಬದಲಾಗಿದೆ. ಮೋಟಾರು ವಾಹನ ಕಾಯ್ದೆ ಅಡಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಂಬೈ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಆಯುಕ್ತ ಪ್ರವೀಣ್ ಪದ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!

ಬಾಂದ್ರಾ ಸೀ ಲಿಂಕ್, ಈಸ್ಟರ್ನ್ ಫ್ರೀ ವೆಗಳಲ್ಲಿ 80 ಕಿ.ಮೀ ಪ್ರತಿ ಗಂಟೆಗೆ ಇದ್ದ ವೇಗದ ಮಿತಿಯನ್ನು ಇದೀಗ 70ಕ್ಕೆ ಇಳಿಸಲಾಗಿದೆ. ಸಿಯೋನ್ ಪನ್ವೇಲ್ ಹೈವೇ, ಸಾಂತಾಕ್ರೂಸ್ ಚೆಂಬೂರ್ ಲಿಂಕ್ ರೋಡ್, ಲಾಲ್‌ಬಾಗ್ ಫ್ಲೈಓವರ್‌ಗಳಲ್ಲಿ ವೇಗದ ಮಿತಿಯನ್ನು 70ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಎಕ್ಸ್‌ಪ್ರೆಸ್ ಹೈವೇ ಟೋಲ್ ದರ ಹೆಚ್ಚಳ; ಸರ್ಕಾರದ ಶಾಕ್!

ಜೆಜೆ ಫ್ಲೈ ಓವರ್‌ನಲ್ಲಿ ಗರಿಷ್ಠ 65 ಕಿ.ಮೀ ಪ್ರತಿಗಂಟೆಗೆ ಹಾಗೂ ತಿರುವುಗಳಲ್ಲಿ 35 ಕಿ.ಮೀ ಪ್ರತಿಗಂಟೆಗೆ ನಿಗಧಿ ಪಡಿಸಲಾಗಿದೆ. ಇನ್ನು ಖ್ಯಾತ ಮರಿನ್ ಡ್ರೈವ್ ರಸ್ತೆಯಲ್ಲಿ ಗಂಟೆಗೆ 65 ಕಿ.ಮಿ ವೇಗದ ಮಿತಿ ನಿಗದಿ ಪಡಿಸಲಾಗಿದೆ ಎಂದು ಮುಂಬೈ ಟ್ರಾಫಿಕ್ ಪೊಲೀಸ್ ಹೇಳಿದೆ.

"

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ