
ನವದೆಹಲಿ(ಏ.10): ಬಜಾಜಾ ಪಲ್ಸಾರ್ ಬೈಕ್‌ಗಳಲ್ಲಿ 150 ಹಾಗೂ 180 ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಪಲ್ಸಾರ್ 180 ಸ್ಥಗಿತಗೊಂಡಿದೆ. ಇನ್ಮುಂದೆ ಬಜಾಜ್ ಪಲ್ಸಾರ್ 180 ಬೈಕ್ ಖರೀದಿಗೆ ಅವಕಾಶವಿಲ್ಲ. ಆದರೆ ಇದರ ಬದಲಾಗಿ ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಪಲ್ಸಾರ್ 180F ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: ABS ತಂತ್ರಜ್ಞಾನದ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಪಟ್ಟಿ ಬಿಡುಗಡೆ!
ಪಲ್ಸಾರ್ 180 ಬೈಕ್‌ಗೆ ಬದಲಿಯಾಗಿ ಪಲ್ಸಾರ್ 180F ಬೈಕ್ ಎಂದು ಬಜಾಜ್ ಘೋಷಿಸಿದೆ. ಬಜಾಜ್ 180F ಬೈಕ್ ಹಾಗೂ 220F ಬೈಕ್‌ಗೆ ಹಲವು ಹೋಲಿಕೆಗಳಿವೆ. 180F ಶೈಲಿ, ವಿನ್ಯಾಸ ಎಲ್ಲವೂ 220F ಬೈಕ್ ಹೋಲುತ್ತೆ. ಪಲ್ಸಾರ್ 180F ಬೈಕ್ 178 cc ಏರ್- ಕೂಲ್ಡ್,ಕಾರ್ಬರ್ಟರ್ಡ್ ಮೋಟಾರ್ ಹೊಂದಿದ್ದು, 17 bhp(@8,500 rpm) ಪವರ್ ಹಾಗೂ 14 Nm(@6,500 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಇದನ್ನೂ ಓದಿ: ಬಜಾಜ್ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?
ಪಲ್ಸಾರ್ 180F ಬೈಕ್ ಬೆಲೆ 86,490 ರೂಪಾಯಿ (ಏಕ್ಸ್ ಶೋ ರೂಂ). ಆನ್ ರೋಡ್ ಬೆಲೆ ಸರಿಸುಮಾರು 1 ಲಕ್ಷ ರೂಪಾಯಿ. ಇತರ 180CC ಬೈಕ್‌ಗಳಾದ ಸುಜುಕಿ ಜಿಕ್ಸರ್, ಟಿವಿಎಸ್ ಅಪಾಚೆ, ಹೊಂಡಾ ಸಿಬಿ ಹೊರ್ನೆಟ್ ಬೈಕ್‌ಗಳಿಗೆ ಹೋಲಿಸಿದರೆ ಪಲ್ಸಾರ್ 180F ಬೆಲೆ ಕಡಿಮೆ.