ಬಜಾಜ್ ಪಲ್ಸಾರ್ 150 ಬೆಲೆ ಏರಿಕೆ; ಇಲ್ಲಿದೆ ನೂತನ ದರ ಪಟ್ಟಿ!

Published : Jul 30, 2019, 06:12 PM IST
ಬಜಾಜ್ ಪಲ್ಸಾರ್ 150 ಬೆಲೆ ಏರಿಕೆ; ಇಲ್ಲಿದೆ ನೂತನ ದರ ಪಟ್ಟಿ!

ಸಾರಾಂಶ

ಭಾರತದ ಜನಪ್ರಿಯ ಬಜಾಜ್ ಪಲ್ಸಾರ್ ಬೈಕ್ ಬೆಲೆಯಲ್ಲಿ ಬದಲಾವಣೆಯಾಗಿದೆ. ಪಲ್ಸಾರ್ 150 ಬೈಕ್‌ನ ಮೂರೂ ವೇರಿಯೆಂಟ್ ಬೆಲೆ ಹೆಚ್ಚಾಗಿದೆ. ಹಳೇ ಬೆಲೆ ಹಾಗೂ ನೂತನ ದರ ಪಟ್ಟಿ ಇಲ್ಲಿದೆ.

ಮುಂಬೈ(ಜು.30): ಬಜಾಜ್ ಪಲ್ಸಾರ್ 150 ಬೈಕ್ ಬೆಲೆ ಏರಿಕೆಯಾಗಿದೆ. ಪಲ್ಸಾರ್ ಬೈಕ್‌ನಲ್ಲಿ 150 ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ 150 ಬೈಕ್ ಬೆಲೆ ಬದಲಾವಣೆಯಾಗಿದೆ. 3 ವೇರಿಯೆಂಟ್ ಬೈಕ್ ಬೆಲೆ 499 ರೂಪಾಯಿಂದ ಗರಿಷ್ಠ  2,950 ರೂಪಾಯಿ ವರೆಗೆ ಏರಿಕೆಯಾಗಿದೆ. 

ಇದನ್ನೂ ಓದಿ: ಆ್ಯಕ್ಟೀವಾ ಅಲ್ಲ, ಹೀರೋ ಸ್ಪ್ಲೆಂಡರ್ ಭಾರತದ ನಂ.1 ದ್ವಿಚಕ್ರ ವಾಹನ!

ಬಜಾಜ್ ಪಲ್ಸಾರ್ ನಿಯಾನ್ ಬೈಕ್ ಬೆಲೆ ಗರಿಷ್ಠ ಏರಿಕೆ ಕಂಡಿದೆ. ಇನ್ನು ಪಲ್ಸಾರ್ 150 ಕ್ಲಾಸಿಕ್ ಡ್ರಂ ಹಾಗೂ ಪಲ್ಸಾರ್ 150 ಡಿಸ್ಕ್ ಬ್ರೇಕ್ ವೇರಿಯೆಂಟ್ ಬೈಕ್ ಬೆಲೆಗಳಲ್ಲಿ 499 ರೂಪಾಯಿ ಹೆಚ್ಚಳವಾಗಿದೆ.  149.5 cc SOHC, 2-ವೇಲ್ವ್, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, ಟ್ವಿನ್ ಸ್ಪಾರ್ಕ್ DTS-i ಎಂಜಿನ್ ಹೊಂದಿದ್ದು,  14 PS ಪವರ್ ಹಾಗೂ  13.4 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಬಜಾಜ್ ಪಲ್ಸಾರ್ 150 ಬೈಕ್ ಬೆಲೆ(ಎಕ್ಸ್ ಶೋ ರೂಂ)

ಪಲ್ಸಾರ್ 150ಹೊಸ ಬೆಲೆಹಳೇ ಬೆಲೆ
150 NEON71,200 ರೂ68,250 ರೂ
150 ಕ್ಲಾಸಿಕ್ ಡ್ರಂ84,960 ರೂ84,461 ರೂ
150 ಟ್ವಿನ್ ಡಿಸ್ಕ್88,838 ರೂ88,339 ರೂ

 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ