2 ತಿಂಗಳಲ್ಲಿ ಹ್ಯುಂಡೈ ವೆನ್ಯೂ ಕಾರು ದಾಖಲೆ; ಆತಂಕದಲ್ಲಿ ಮಾರುತಿ!

Published : Jul 30, 2019, 04:21 PM ISTUpdated : Jul 30, 2019, 04:36 PM IST
2 ತಿಂಗಳಲ್ಲಿ ಹ್ಯುಂಡೈ ವೆನ್ಯೂ ಕಾರು ದಾಖಲೆ; ಆತಂಕದಲ್ಲಿ ಮಾರುತಿ!

ಸಾರಾಂಶ

ಹ್ಯುಂಡೈ ವೆನ್ಯೂ ಕಾರು ಭಾರತದ SUV ಕಾರುಗಳ ಪೈಕಿ ಹೊಸ ಇತಿಹಾಸ ಬರೆಯುವತ್ತ ಸಾಗಿದೆ. ಬಿಡುಗಡೆಯಾದ 2 ತಿಂಗಳಲ್ಲಿ ವೆನ್ಯೂ ಕಾರು ಹೊಸ ದಾಖಲೆ ಬರೆದಿದೆ. ಮಾರುಕಟ್ಟೆಯಲ್ಲಿ ವೆನ್ಯೂ ಕಾರಿನ ವೇಗ ಮಾರುತಿ ಬ್ರೆಜಾ ಕಾರಿಗೆ ಆತಂಕ ತಂದಿದೆ. 

ನವದೆಹಲಿ(ಜು.30): ಭಾರತದಲ್ಲಿ ಸಬ್‌ ಕಾಂಪಾಕ್ಟ್ SUV ಕಾರುಗಳಲ್ಲಿ ಮಾರುತಿ ಸುಜುಕಿ ಬ್ರೆಜಾ ಕಾರು ಮುಂಚೂಣಿಯಲ್ಲಿದೆ. ಬ್ರೆಜಾ ಬಿಡುಗಡೆಯಾದ ಬಳಿಕ  ಪ್ರತಿಸ್ಪರ್ಧಿಯಾಗಿ ಹಲವು SUV ಕಾರುಗಳ ಬಿಡುಗಡೆಯಾಗಿದೆ. ಆದರೆ ಬ್ರೆಜಾಗೆ ಪೈಪೋಟಿ ನೀಡುವಲ್ಲಿ ವಿಫಲವಾಗಿತ್ತು. ಎರಡು ತಿಂಗಳ ಹಿಂದೆ ಹ್ಯುಂಡೈ ವೆನ್ಯೂ ಕಾರು ಮಾರುಕಟ್ಟೆ ಪ್ರವೇಶಿಸಿದೆ. ವೆನ್ಯೂ ಆಗಮನದ ಬಳಿಕ ಮಾರುತಿ ಬ್ರಿಜಾ ಕಾರಿಗೆ ತೀವ್ರ ಹೊಡೆತ ಬಿದ್ದಿದೆ. ಇದೀಗ 2 ತಿಂಗಳಲ್ಲಿ ಹ್ಯುಂಡೈ ವೆನ್ಯೂ ದಾಖಲೆ ಬರೆದಿದೆ. ಇದು ಬ್ರೆಜಾ ಕಾರಿಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ: ಹ್ಯುಂಡೈ ವೆನ್ಯೂ ಪೈಪೋಟಿ; ಮಾರುತಿ ಬ್ರೆಜಾ ಕಾರಿಗೆ ಭರ್ಜರಿ ಆಫರ್!

ಮೇ 21ಕ್ಕೆ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ 60 ದಿನಗಳಲ್ಲಿ ಬರೋಬ್ಬರಿ 50,000 ಕಾರು ಬುಕ್ ಆಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕ್ ಆದ SUV ಕಾರು ಅನ್ನೋ ಹೆಗ್ಗಳಿಗೆ ವೆನ್ಯೂ ಪಾತ್ರವಾಗಿದೆ.  ಇನ್ನು 2 ಲಕ್ಷಕ್ಕೂ ಅಧಿಕ ಮಂದಿ ಶೋ ರೂಂ, ವೆಬ್‌ಸೈಟ್ ಹಾಗೂ ಫೋನ್ ಮೂಲಕ ವೆನ್ಯೂ ಕಾರಿನ ಕುರಿತು ಮಾಹಿತಿ ಪಡೆದಿದ್ದಾರೆ. 

ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

ವೆನ್ಯೂ ಕಾರಿನ ಬೆಲೆ 6.50 ಲಕ್ಷ ರೂಪಾಯಿಂದ ಆರಂಭವಾಗಲಿದ್ದು, ಟಾಪ್ ಮಾಡೆಲ್ ಬೆಲೆ 11ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕನೆಕ್ಟ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.  1.0 ಲೀಟರ್, 1.2 ಲೀಟರ್ ಹಾಗೂ 1.4 ಲೀಟರ್ ವೆರಿಯೆಂಟ್ ಲಭ್ಯವಿದೆ.  1.0 ಲೀಟರ್, 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು,  118 bhp ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 82 bhp ಪವರ್  ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.  1.4 ಲೀಟರ್, ಡೀಸೆಲ್ ಎಂಜಿನ್ , 4 ಸಿಲಿಂಡರ್ ಹೊಂದಿದ್ದು,  90 hp ಪವರ್ ಹಾಗೂ 220 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ