ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಹೊಂಡಾ ಜಾಝ್- ಏನಿದರ ವಿಶೇಷತೆ!

By Web DeskFirst Published May 1, 2019, 8:52 PM IST
Highlights

ಹೊಂಡಾ ಜಾಝ್ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ನೂತನ ಕಾರಿನ ವಿಶೇಷತೆ ಏನು? ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರಿಗಿಂತ ನೂತನ ಕಾರು ಭಿನ್ನ ಹೇಗೆ? ಇಲ್ಲಿದೆ ವಿವರ.

ನವದಹೆಲಿ(ಮೇ.01): ಹೊಂಡಾ ಜಾಝ್ ಕಾರು ಫ್ಯಾಮಿಲಿ ಕಾರು ಎಂದೇ ಹೆಸರುವಾಸಿ. ಹೆಚ್ಚು ಸ್ಪೇಸ್, ಆಕರ್ಷಕ ಲುಕ್ ಹೊಂದಿರುವ ಹ್ಯಾಚ್‌ಬ್ಯಾಕ್ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಅಪ್‌ಡೇಟೆಡ್, ಹೆಚ್ಚುವರಿ ಫೀಚರ್ಸ್ ಹಾಗೂ ಆಕರ್ಷಕ ಲುಕ್‌‍ನೊಂದಿಗೆ ಹೊಂಡಾ ಜಾಝ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ 1 ಲಕ್ಷ ರೂ ಸಬ್ಸಿಡಿ ಘೋಷಿಸಿದ ಸರ್ಕಾರ!

ನೂತನ ಜಾಝ್ ಈ ಹಿಂದಿನ ಜಾಝ್ ಕಾರಿಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿದೆ. ನೂತನ ಜಾಝ್ ಉದ್ದ 3,990mm, ಇದು ಹಳೇ ಜಾಝ್‌ಗಿಂತ 35 mm ಹೆಚ್ಚಾಗಿದೆ. ಕಾರಿನೊಳಗಿನ ಶೋಲ್ಡರ್ ರೂಂ ಕೂಡ ಈ  ಹಿಂದಿನ ಮಾಡೆಲ್ ಕಾರಿಗಿಂತ ಸ್ಥಳವಕಾಶ ಹೊಂದಿದೆ. ಇನ್ನು ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಅಪ್‌ಡೇಟೆಡ್ ಫೀಚರ್ಸ್ ಈ ಕಾರಿನಲ್ಲಿದೆ.

ಇದನ್ನೂ ಓದಿ: ಪೊಲೀಸರ ಎಡವಟ್ಟು-ಹೆಲ್ಮೆಟ್ ಹಾಕದ ಕಾರು ಚಾಲಕನಿಗೆ ದಂಡ!

ಸದ್ಯ ಜಾಝ್ 2 ಎಂಜಿನ್ ವೇರಿಯೆಂಟ್ ಲಭ್ಯವಿದೆ. ನೂತನ ಜಾಝ್ 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  i-VTEC, i-DTEC ಹಾಗೂ 1.0 ಲೀಟರ್ ಟರ್ಬೋಚಾರ್ಜ್‌ಡ್ ಎಂಜಿನ್ ಕಾರು ಲಭ್ಯವಿದೆ. ನೂತನ ಜಾಝ್ ಕಾರು ಮಾರುತಿ ಬಲೆನೊ, ಹ್ಯುಂಡೈ ಐ20 ಹಾಗೂ ಟಾಟಾ ಅಲ್ಟ್ರೋಜ್ ಕಾರಿಗೆ ಪ್ರತಿಸ್ಪರ್ದಿಯಾಗಿ ಬಿಡುಗಡೆಯಾಗಲಿದೆ. 2020ರಲ್ಲಿ ನೂತನ ಹೊಂಡಾ ಜಾಝ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ನೂನತ ಕಾರಿನ  ಬೆಲೆ ಬಹಿರಂಗವಾಗಿಲ್ಲ.  ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರಿನ ಬೆಲೆ 7.40 ಲಕ್ಷ ರೂಪಾಯಿಂದ 9.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

click me!