ಕಡಿಮೆ ಬೆಲೆಯ ಅವನ್ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ!

Published : Mar 22, 2019, 04:53 PM IST
ಕಡಿಮೆ ಬೆಲೆಯ ಅವನ್ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ!

ಸಾರಾಂಶ

ಅವನ್ ಮೋಟಾರ್ಸ್ ಇ ಟ್ರೆಂಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಈ ಸ್ಕೂಟರ್ ಬುಕಿಂಗ್ ಕೂಡ ಆರಂಭಗೊಂಡಿದೆ. ಇಲ್ಲಿದೆ ಅವನ್ ಇ ಟ್ರೆಂಡ್ ಸ್ಕೂಟರ್ ಕುರಿತ ಮಾಹಿತಿ.

ಬೆಂಗಳೂರು(ಮಾ.22): ಅವನ್ ಮೋಟಾರ್ಸ್ ನೂತನ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅವನ್ ಮೋಟಾರ್ಸ್ ಈಗಾಗಲೇ Xero ಹಾಗೂ Xero+ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಟ್ರೆಂಡ್ ಸ್ಕೂಟರ್ ಲಾಂಚ್ ಮಾಡಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 56,900 ರೂಪಾಯಿ.

 

 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಅಲೋಯ್ ವೀಲ್ಹ್ -ಬೆಲೆ ಬಹಿರಂಗ!

ಬೇಸ್ ವೆರಿಯೆಂಟ್ ಬೆಲೆ 56,900 ರೂಪಾಯಿ. ಇನ್ನು ಟಾಪ್ ಮಾಡೆಲ್ ಬೆಲೆ 81,269 ರೂಪಾಯಿ. 16 ಇಂಚಿನ ಅಲೋಯ್ ವೀಲ್ಹ್, ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಟ್ರೆಂಡ್ ಸ್ಕೂಟರ್‌ನಲ್ಲಿ ಎರಡು ಬ್ಯಾಟರಿ ಬಳಲಸಾಗಿದೆ. ಮೊದಲ ಬ್ಯಾಟರಿಯಿಂದ 60 ಕಿ.ಮೀ ಹಾಗೂ ಎರಡನೇ ಬ್ಯಾಟರಿ ಸೇರಿ ಒಟ್ಟು 110 ಕಿ.ಮೀ ರೇಂಜ್ ಪ್ರಯಾಣ ಮಾಡಬಹುದು. ಗರಿಷ್ಠ ವೇಗ 45KMPH. 

 

 

ಇದನ್ನೂ ಓದಿ: ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!

ಪುಣೆ ಮೂಲದ ಅವನ್ ಮೋಟಾರ್ಸ್ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಅವನ್ ಮೋಟಾರ್ಸ್  ಡೀಲರ್‌ಶಿಪ್ ಹೊಂದಿದೆ. ಮಹಾರಾಷ್ಟ್ರದಲ್ಲೇ 30 ಡೀಲರ್‌ಶಿಪ್ ಹೊಂದಿದೆ. ಪ್ರತಿ ತಿಂಗಳು 1,000 ಸ್ಕೂಟರ್ ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ.
 

PREV
click me!

Recommended Stories

50 ಸಾವಿರ ರೂ.ಗೆ ಎಲೆಕ್ಟ್ರಿಕ್ ಸ್ಕೂಟರ್.. ದಿನಾ ಚಿಂತೆಯಿಲ್ಲದೆ ಕಾಲೇಜು, ಆಫೀಸ್‌ಗೆ ಹೋಗ್ಬೋದು!
Mahindra XUV 7XO: ಡಾಲ್ಬಿ ವಿಷನ್, ಅಟ್ಮಾಸ್ ಸೌಂಡ್! ಭಾರತದಲ್ಲೇ ಮೊದಲ ಬಾರಿಗೆ ಬಂದ ಕಾರಿದು!