Automobile ಉದ್ಯಮ 2022ರಲ್ಲಿ ಕಠಿಣ ಸವಾಲುಗಳನ್ನು ಎದುರಿಸಲಿದೆ : ರಾಜೀವ್‌ ಚಾಬಾ!

By Suvarna News  |  First Published Dec 26, 2021, 4:54 PM IST

"2022 ರಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ದೊಡ್ಡ ಸವಾಲೆಂದರೆ ವ್ಯಾಪಾರ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳುವುದು ಮತ್ತು ವಿವಿಧ ಸವಾಲುಗಳ ನಡುವೆ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವುದು" ಎಂದು ಎಂಜಿ ಮೋಟಾರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿದ್ದಾರೆ


Auto Desk: 2022 ರಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ದೊಡ್ಡ ಸವಾಲೆಂದರೆ ವ್ಯಾಪಾರ ಕಾರ್ಯಾಚರಣೆಗಳನ್ನು (Operations) ಉಳಿಸಿಕೊಳ್ಳುವುದು ಮತ್ತು ಜಾಗತಿಕ ಸೆಮಿಕಂಡಕ್ಟರ್ ಕೊರತೆ (Semiconductor) ಸೇರಿದಂತೆ ವಿವಿಧ ಸವಾಲುಗಳ ನಡುವೆ ಆರ್ಥಿಕ ಸ್ಥಿರತೆಯನ್ನು (Financial Health) ಖಚಿತಪಡಿಸಿಕೊಳ್ಳುವುದು ಎಂದು  ಎಂಜಿ ಮೋಟಾರ್ (MG Motor) ಇಂಡಿಯಾ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಟಿ ಟೈಮ್ಸ್‌ ವರದಿ ಮಾಡಿದೆ. ಪ್ರಸ್ತುತ, ದೇಶೀಯ ಮಾರುಕಟ್ಟೆಯು ಬೇಡಿಕೆ ಹೆಚ್ಚಾಗಿದೆ, ಆದರೆ ಇದು ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದ ಪ್ರಭಾವಿತವಾಗಿದ್ದು, ಇದರಿಂದ ಉತ್ಪಾದನಾ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದೆ.

"ಕೊರೋನಾ ನಂತರದ ಕಾಲವು ಉದ್ಯಮಕ್ಕೆ ಅನನ್ಯ ಸವಾಲುಗಳನ್ನು ಹಾಕಿದೆ. ವ್ಯಾಪಾರ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳುವುದು ಮತ್ತು ಸಂಸ್ಥೆ ಮತ್ತು ಅದರ ಮಧ್ಯಸ್ಥಗಾರರ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಉದ್ಯಮವು ಆರ್ಥಿಕ ಸಂಕಷ್ಟದ ಹೊರತಾಗಿ ಉತ್ತಮ ಬೆಳವಣಿಗೆ ಕಂಡಿದೆ. ನಾವು ಎಚ್ಚರಿಕೆಯ ಆಶಾವಾದದೊಂದಿಗೆ 2022 ರ ಕಡೆಗೆ ನೋಡುತ್ತಿದ್ದೇವೆ."ಎಂದು ಎಂಜಿ ಮೋಟಾರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ (Rajeev Chaba) ಹೇಳಿದ್ದಾರೆ.

Tap to resize

Latest Videos

undefined

ಕೋವಿಡ್‌ 19 ಆಟೋಮೊಬೈಲ್‌ ಉದ್ಯಮದ ಮೇಲೆ ಪರಿಣಾಮ!

ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ 2022 ರಲ್ಲಿ ಪರಿಸ್ಥಿತಿಯು ಅಸ್ಥಿತವಾಗಿ ಉಳಿಯಲಿದೆ. ಕೋವಿಡ್‌ 19, ಜಾಗತಿಕ ಸೆಮಿಕಂಡಕ್ಟರ್ ಕೊರತೆ, ಸರಕು ಸಾಗಣೆ ವೆಚ್ಚ ಮತ್ತು ಅನೇಕ ಇತರ ವೆಚ್ಚದ ಪರಿಣಾಮಗಳಿಂದಾಗಿ ಆಟೋಮೊಬೈಲ್‌ ಉದ್ಯಮದ ಮೇಲೆ ಪರಿಣಾಮ ಬೀಳಲಿದೆ. ಕಂಪನಿಯು ತನ್ನ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಮತ್ತು ಕಾಯುವ ಸಮಯವನ್ನು ಮತ್ತಷ್ಟು ಕಡಿಮೆ ಮಾಡಲು ಕಾರ್ಖಾನೆ ಸಾಮರ್ಥ್ಯವನ್ನು ಹೆಚ್ಚಿಸಲು ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಚಾಬಾ ತಿಳಿಸಿದ್ದಾರೆ. 

"ಕಂಪನಿಯು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿದೆ ಮತ್ತು ಭಾರತದಲ್ಲಿ MG ಕುಟುಂಬವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 24,152 ಯುನಿಟ್‌ಗಳಿಗಿಂತ 37,723 ಯುನಿಟ್‌ಗಳ (ಜನವರಿ-ನವೆಂಬರ್ 2021) ರಿಟೇಲ್‌ ವ್ಯಾಪಾರದೊಂದಿಗೆ ನಾವು ವರ್ಷದಿಂದ ಇಲ್ಲಿಯವರೆಗೆ ಶೇಕಡಾ 56 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ZS EV ತಿಂಗಳಿಗೆ ಸರಾಸರಿ 700 ಬುಕಿಂಗ್‌

ಈಗಾಗಲೇ ಉತ್ಪಾದನ ಘಟಕಗಳ ಮೇಲೆ ಸೆಮಿಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆಯ ಪ್ರಭಾವ ಬೀರಿದ್ದು ಮುಂದಿನ ತ್ರೈಮಾಸಿಕದಲ್ಲಿ ಹಾಗೆಯೇ ಉಳಿಯಲಿದೆ. ಹೆಕ್ಟರ್ ಮತ್ತು ಆಸ್ಟರ್‌ನಂತಹ (Hector and Astor)ಮಾದರಿಗಳನ್ನು ಮಾರಾಟ ಮಾಡುವ ವಾಹನ ತಯಾರಕ ಸಂಸ್ಥೆಯು ದೇಶದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳ (Electric Vehicle) ಶ್ರೇಣಿಯನ್ನು ವಿಸ್ತರಿಸಲು‌ ಎದುರು ನೋಡುತ್ತಿದೆ.

"ವಿಶಾಲವಾದ ಗ್ರಾಹಕರ ವಿಭಾಗಗಳಿಗೆ ಉದ್ಯಮ ವಿಸ್ತರಿಸುವ ನಮ್ಮ ಪ್ರಯತ್ನದಲ್ಲಿ, ನಾವು ಎರಡನೇ EV ಅನ್ನು ದೇಶಕ್ಕೆ ತರುತ್ತೇವೆ. ಈ ಬೆನ್ನಲ್ಲೇ EVಗಳ ಬಳಕೆಯಲ್ಲಿ ಸರ್ಕಾರದ ಸ್ಪಷ್ಟತೆ ಕೂಡ ನಮಗೆ ಸಹಾಯಕವಾಗಲಿದೆ. ಈ ಕನಸು ಶೀಘ್ರದಲ್ಲೇ ನನಸಾಗಲಿದೆ. ಕಂಪನಿಯ ZS EV ತಿಂಗಳಿಗೆ ಸರಾಸರಿ 700 ಬುಕಿಂಗ್‌ಗಳೊಂದಿಗೆ ಭಾರತದಲ್ಲಿ ಗ್ರಾಹಕರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ" \ ಎಂದು  ಚಾಬಾ ತಿಳಿಸಿದ್ದಾರೆ.

ಇದನ್ನೂ ಓದಿ:

1) Flex Fuel Engines: ದೇಶವನ್ನು ಪೆಟ್ರೋಲ್‌, ಡೀಸೆಲ್ ಬಳಕೆಯಿಂದ ಮುಕ್ತ ಮಾಡಲು ಗಡ್ಕರಿ‌ ಹೊಸ ಪ್ಲ್ಯಾನ್!

2) Dual Mode Vehicle: ರಸ್ತೆ ಮತ್ತು ರೈಲು ಹಳಿಗಳೆರಡರ ಮೇಲೂ ಓಡಲಿದೆ ಜಪಾನ್‌ನ ಮಿನಿ ಬಸ್!‌

3) Electric Vehicle Converter : ಹಳೇ ವಾಹನ ಆತಂಕ ಬೇಡ, ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಇದೆ ಮಾನ್ಯತೆ ಪಡೆದ ಘಟಕ!

click me!