ಪ್ರಯಾಣಿಕರನ್ನು ನಿರ್ಲಕ್ಷಿಸಿದ್ರೆ ಆಟೋ ಚಾಲಕರ ಲೈಸೆನ್ಸ್ ರದ್ದು!

By Web Desk  |  First Published Aug 12, 2019, 5:01 PM IST

ಪ್ರಯಾಣಿಕರ ಕೂಗನ್ನು ಆಟೋ ಚಾಲಕರು ನಿರ್ಲಕ್ಷ್ಯಿಸಿದರೆ ಅಪಾಯ ತಪ್ಪಿದ್ದಲ್ಲ. ಇದೀಗ ಪ್ರಯಾಣಿಕರ ರೈಡ್ ನಿಕಾರಿಸಿದರೆ ಆಟೋ ಚಾಲಕರಿ ಭಾರಿ ದಂಡ ತೆರಬೇಕಾಗುತ್ತೆ. ಈ ಕುರಿತ ಹೆಚ್ಚಿನ ವಿವರ


ಮುಂಬೈ(ಆ.12): ಆಟೋ ರಿಕ್ಷಾಗಳ ಮೇಲೆ  ಪ್ರಯಾಣಿಕರ ಕೂಗಿಗೆ ಧನಿಯಾಗುವುದಿಲ್ಲ ಅನ್ನೋ ಆರೋಪಗಳಿವೆ. ಹಲವು ಬಾರಿ ಇದಕ್ಕೆ ಪುರಾವೆಗಳು ಸಿಕ್ಕಿವೆ. ಇದೀಗ ಪ್ರಯಾಣಿಕರು ಕರೆದಾಗ ಅಲ್ಲಿಗೆ ಬರಲ್ಲ, ಆಗಲ್ಲ ಅನ್ನೋ ಹಾಗಿಲ್ಲ. ಒಂದು ವೇಳೆ ಆಟೋ ಚಾಲಕ ಪ್ರಯಾಣಿಕರ ರೈಡ್ ನಿರಾಕರಿಸಿದರೆ, ಭಾರಿ ಮೊತ್ತದ ದಂಡ ಹಾಗೂ ಲೈಸೆನ್ಸ್ ಕೂಡ ರದ್ದಾಗಲಿದೆ.

ಇದನ್ನೂ ಓದಿ: ಆಟೋ ಚಾಲಕರಿಗೆ ಕಾನೂನು ಪಾಠ ಮಾಡಿದ ಪಿಎಸ್‌ಐ

Latest Videos

undefined

ಮುಂಬೈನಲ್ಲಿಈ ನಿಯಮವಿದೆ. ಪ್ರಯಾಣಿಕರು ಕರೆದಾಗ, ಸಾಧ್ಯವಿಲ್ಲ ಅನ್ನೋಹಾಗಿಲ್ಲ. ಇಷ್ಟೇ ಅಲ್ಲ ಅಲ್ಲಿಗೆ ಮೀಟರ್ ಹಾಕಲು ಸಾಧ್ಯವಿಲ್ಲ. 200 ಕೊಡಿ, 300 ಕೊಡಿ ಎಂದು ತೋಚಿದ ರೇಟ್ ಹೇಳುವ ಹಾಗಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಆಟೋ ರಿಕ್ಷಾ ಚಾಲಕರು ಭಾರಿ ಮೊತ್ತದ ದಂಡ ಪಾವತಿಸಿಬೇಕು. ಇಷ್ಟೇ ಅಲ್ಲ ಲೈಸೆನ್ಸ್ ಕೂಡ ರದ್ದಾಗಲಿದೆ.

ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ಮುಂಬೈ ಥಾಣೆ ಬಳಿ ಪ್ರಯಾಣಿಕರ ರೈಡ್ ನಿರಾಕರಿಸಿದ 918 ಆಟೋ ಚಾಲಕರ ಮೇಲೆ ಪ್ರಕರಣ ದಾಖಲಾಗಿದೆ. ಆಟೋ ಪ್ರಯಾಣಿಕರು ದೂರು ದಾಖಲಿಸಿದರೆ ಸಾಕು, ವಿಶೇಷ ತಂಡ  ತನಿಖೆ ನಡೆಸಲಿದೆ. ಈ ಮೂಲಕ ಆಟೋ ಪ್ರಯಾಣಿಕರಿಗೆ ಯಾವದೇ ರೀತಿ ಸಮಸ್ಯೆಗಳು ಆಗಬಾರದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

click me!