ಮಾರುತಿ ಸುಜುಕಿ ನೂತನ XL6 ಕಾರು ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 22 ರಂದು ಮಾರುತಿ XL6 ಕಾರು ಬಿಡುಗಡೆಯಾಗಲಿದೆ. ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಈ ಕಾರಿನ ವಿಶೇಷ, ಬೆಲೆ ಕುರಿತ ಮಾಹಿತಿ ಇಲ್ಲಿದೆ.
ನವದೆಹಲಿ(ಆ.11): ಭಾರತದ ಕಾರು ಮಾರುಕಟ್ಟೆ ಸಂಕಷ್ಟ ಎದುರಿಸುತ್ತಿದೆ. ಎಲ್ಲಾ ಆಟೋಮೊಬೈಲ್ ಕಂಪನಿಗಳು ನಷ್ಟದತ್ತ ಮುಖ ಮಾಡುತ್ತಿವೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಮತ್ತೆ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. ಮಾರುತಿ ಎರ್ಟಿಗಾ ಮಾದರಿಯ ಹೊಸ ಕಾರು ಬಿಡುಗಡೆ ಮಾಡುತ್ತಿದೆ. ಎರ್ಟಿಗಾ ಕಾರಿಗಿಂತ ದೊಡ್ಡದಾದ ನೂತನ XL6 ಕಾರು ಬಿಡುಗಡೆಯಾಗುತ್ತಿದೆ. ಇದೀಗ ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ.
ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?
undefined
ಮಾರುತಿ ಸುಜುಕಿ XL6 MPV ಕಾರು ಹೊಸ ಸಂಚಲನ ಸೃಷ್ಟಿ ಮಾಡಿದೆ. ಟೊಯೊಟಾ ಇನೋವಾ ಕಾರಿಗೆ ಪೈಪೋಟಿ ನೀಡಲು ಮಾರುತಿ ಮತ್ತೊಂದು ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ 21 ರಂದು ನೂತನ ಕಾರು ಬಿಡುಗಡೆಯಾಗಲಿದೆ. ಇದೀಗ ಈ ಕಾರಿನ ಬುಕಿಂಗ್ ಆರಂಭಗೊಂಡಿದ್ದು, 11,000 ರೂಪಾಯಿಗೆ ನೂತನ ಕಾರು ಬುಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: 18 ತಿಂಗಳಲ್ಲಿ ಮುಚ್ಚಿತು 286 ಶೋ ರೂಂ; 32 ಸಾವಿರ ಮಂದಿ ಬೀದಿಗೆ!
ಎರ್ಟಿಗಾ ಕಾರಿಗೆ ಹೋಲಿಸಿದರೆ ಮಾರುತಿ ಸುಜುಕಿ XL6 ಕಾರು ಹೆಚ್ಚು ಸ್ಪೂರ್ಟೀವ್ ಲುಕ್ ಹೊಂದಿದೆ. LED ಲೈಟ್, DRLs ಹಾಗೂ ಮುಂಭಾಗದ ಗ್ರಿಲ್‌ನಿಂದ ಕಾರಿನ ಆಕರ್ಷಣೆ ಹೆಚ್ಚಾಗಿದೆ. ಸದ್ಯ XL6 ಕಾರು ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿದೆ. ಎರ್ಟಿಗಾ ಕಾರಿನಲ್ಲಿರುುವ 1.5 ಲೀಟರ್ ಪೆಟ್ರೋಲ್ ಎಂಜಿನ್ ನೂತನ XL6 ಕಾರಿನಲ್ಲೂ ಬಳಸಲಾಗಿದೆ. ಈ ಕಾರಿನ ಮೈಲೇಜ್ 19.01 kmpl. ಮಾರುತಿ ಎರ್ಟಿಗಾ ಕಾರಿನ ಬೆಲೆ 7.55 ಲಕ್ಷ ದಿಂದ 10.06 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ XL6 ಕಾರಿನ ಬೆಲೆ 50,000 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.