ಅಸ್ಸಾಂ(ಫೆ.18): ಹನಿ ಹನಿ ಗೂಡಿದರೆ ಹಳ್ಳ ಎಂಬ ಮಾತಿದೆ ಸ್ವಲ್ಪ ಸ್ವಲ್ಪವೇ ಕೂಡಿಟ್ಟ ಹಣ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ. ಅಸ್ಸಾಂ ಮೂಲದ ಯುವಕನೋರ್ವ ತಾನು ಇದುವರೆಗೆ ಕೂಡಿಟ್ಟ ಚಿಲ್ಲರೆ ಹಣವನ್ನು ಸೇರಿಸಿ ಸ್ಕೂಟರೊಂದನ್ನು ಖರೀದಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿಲ್ಲರೆ ನೀಡಿ ಸ್ಕೂಟರ್ ಖರೀದಿಸುತ್ತಿರುವ ವಿಡಿಯೋ ಫೋಟೋಗಳು ವೈರಲ್ ಆಗಿದೆ. ಸಾಮಾನ್ಯವಾಗಿ ವಾಹನ ಖರೀದಿಗೆ ಹೋಗುವಾಗ ಬಹುತೇಕರು ದೊಡ್ಡ ದೊಡ್ಡ ನೋಟುಗಳನ್ನು ತೆಗೆದುಕೊಂಡು ಹೋಗುತ್ತಾರೆ ಅಥವಾ ಚೆಕ್ ನೀಡುತ್ತಾರೆ. ಇತ್ತೀಚೆಗೆ ಅನೇಕರು ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ತಾನು ಕಷ್ಟಪಟ್ಟು ಕೂಡಿಟ್ಟ ಚಿಲ್ಲರೆ ನಾಣ್ಯಗಳನ್ನು ಸೇರಿಸಿ ಅದನ್ನೇ ಶೋ ರೂಮ್‌ನವರಿಗೆ ನೀಡಿ ಒಂದು ಸ್ಕೂಟರ್‌ನ್ನು ಖರೀದಿಸಿದ್ದಾನೆ.
ಯುವಕ ತಾನು ನಾಣ್ಯಗಳ ರೂಪದಲ್ಲಿ ತಂದ ಹಣವನ್ನು ಶೋರೂಮ್‌ಗೆ ಸಾಗಿಸಲು ಹೆಣಗಾಡುತ್ತಿರುವುದು ವಿಡಿಯೋದಲ್ಲಿಇದೆ. ಈ ಹಣವನ್ನು ಪ್ಲಾಸ್ಟಿಕ್ ಬುಟ್ಟಿಗಳಿಗೆ ಹಾಕಿದ ಬಳಿಕ ಶೋರೂಮ್ ಸಿಬ್ಬಂದಿ ಹಣವನ್ನು ಎಣಿಸಲು ಶುರು ಮಾಡಿದರು. ಈ ಯುವಕನ ಕತೆ ಕೇಳಿದರೆ ಜೂಲಿಯಾ ಕಾರ್ನಿ (Julia Carney) ಅವರ ಖ್ಯಾತ ಕವಿತೆ ನೆನಪಾಗುವುದು. ನೀರಿನ ಸಣ್ಣ ಹನಿಗಳು ದೊಡ್ಡದಾದ ಸಾಗರವನ್ನು ಮಾಡುತ್ತವೆ ಎಂಬುದು ಆ ಕವಿತೆಯ ಸಾಲು(“Little drops of water… make the mighty ocean) ಈ ಸಾಲುಗಳನ್ನು ಅಸ್ಸಾಂನ ಈ ಯುವಕ ನಿಜವಾಗಿಸಿದ್ದಾರೆ. ತನ್ನದೇ ಆದ ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸಿದ ಅವರು ತಿಂಗಳುಗಟ್ಟಲೆ ಹಣವನ್ನು ಉಳಿತಾಯ ಮಾಡಿ ಅಂತಿಮವಾಗಿ ತನ್ನ ಉಳಿತಾಯವನ್ನು ಒಂದು ಗೋಣಿಚೀಲದಲ್ಲಿ ವಾಹನ ಶೋರೂಮ್‌ಗೆ ಸಾಗಿಸಿ ಸ್ಕೂಟರ್ ಖರೀದಿ ಮಾಡಿಯೇ ಬಿಟ್ಟರು.
ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಧುತ್ತನೇ ಎದುರಾದ ಸಿಂಹ... ದೇವರನಾಮ ಜಪಿಸಿದ ಸವಾರರು.. ವೈರಲ್ ವಿಡಿಯೋ
ಅಸ್ಸಾಂನಲ್ಲಿ ಅಂಗಡಿಯನ್ನು ಹೊಂದಿರುವ ಯುವಕ ಈ ಕತೆಯ ಹೀರೋ ಆದರೆ ಅವರ ಹೆಸರಿನ ಉಲ್ಲೇಖ ಎಲ್ಲಿಯೂ ಇಲ್ಲ. ಆದರೆ ಅವರು ತಮ್ಮ ಸಣ್ಣ ಉಳಿತಾಯದ ಮೂಲಕ ಮಾಡಿದ ಈ ದೊಡ್ಡ ಸಾಧನೆ ಅನೇಕರಿಗೆ ಸ್ಪೂರ್ತಿ ತುಂಬುತ್ತಿದೆ. ಯುವಕ ಚಿಲ್ಲರೆ ನೀಡಿ ಸ್ಕೂಟರ್ ಖರೀದಿಸುತ್ತಿರುವ ಫೋಟೋವನ್ನು ಯೂಟ್ಯೂಬರ್ ಹಿರಾಕ್ ಜೆ ದಾಸ್ ( Hirak J Das) ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಿದ್ದರೂ, ಕೆಲವೊಮ್ಮೆ ಅದನ್ನು ಸ್ವಲ್ಪಮಟ್ಟಿನ ಉಳಿತಾಯದ ಮೂಲಕ ಈಡೇರಿಸಬಹುದು ಎಂದು ಅವರು ಹೇಳಿದ್ದಾರೆ.
ತನ್ನ ಕನಸನ್ನು ನನಸಾಗಿಸಲು ಹಣದ ಕೊರತೆ ಇದ್ದರೂ ಧೃಡ ನಿರ್ಧಾರದಿಂದ ಹಿಂದೆ ಸರಿಯಾದ ವ್ಯಕ್ತಿಯ ವಿಡಿಯೋವನ್ನು ಕೂಡ ಹಿರಾಕ್ ಜೆ ದಾಸ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಹೀಗೆ ಸ್ಕೂಟರ್ ಖರೀದಿಸಿದ ಯುವಕ ಸ್ಕೂಟರ್ ಖರೀದಿಸುವ ಸಲುವಾಗಿ ಏಳರಿಂದ ಎಂಟು ತಿಂಗಳ ಕಾಲ ದುಡ್ಡು ಉಳಿಸುವ ಸಲುವಾಗಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಒಮ್ಮೆ ಅವರಿಗೆ ತಾವು ಸಂಗ್ರಹಿಸಿದ ಹಣ ಸ್ಕೂಟರ್ ಖರೀದಿಸುವಷ್ಟು ಆಗಿದೆ ಎಂದು ತಿಳಿಯುತ್ತಿದ್ದಂತೆ ಅವರು ಅಸ್ಸಾಂನ( Assam) ಬಾರ್ಪೇಟಾ (Barpeta) ಜಿಲ್ಲೆಯ ಹೌಲಿಯಲ್ಲಿರುವ (Howly) ಸ್ಕೂಟರ್ ಶೋರೂಮ್‌ಗೆ ಭೇಟಿ ನೀಡಿ ಸ್ಕೂಟರ್ ಖರೀದಿಸಿದರು.
ಹೀರೋ ಮೋಟಾರ್ಸ್, ಮಹೀಂದ್ರಾ ಪಾಲುದಾರಿಕೆಯಲ್ಲಿ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ
ನಾಣ್ಯ ತುಂಬಿದ ಚೀಲವನ್ನು ಅಂಗಡಿಗೆ ಸಾಗಿಸಲು ಮೂವರು ಪುರುಷರು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಒಮ್ಮೆ ಅದನ್ನು ಪ್ಲಾಸ್ಟಿಕ್ ಬುಟ್ಟಿಗಳಿಗೆ ಹಾಕಿದ ನಂತರ ಾದರಲ್ಲಿ ಎಷ್ಟು ಹಣ ಇದೆ ಎಂದು ಎಣಿಸಲು ಶೋರೋಮ್ ಸಿಬ್ಬಂದಿ ಒಟ್ಟಾಗಿ ಕುಳಿತು ಲೆಕ್ಕ ಮಾಡುವುದನ್ನು ವಿಡಿಯೋ ತೋರಿಸುತ್ತಿದೆ.