Auto Desk: ಭಾರತೀಯ ಆಟೊಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಕಾರುಗಳ ವೈಶಿಷ್ಟ್ಯ, ದರದ ಜೊತೆಗೆ, ಅದರ ಸುರಕ್ಷತಾ ಫೀಚರ್ಗಳು (Safety features) ಕೂಡ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕಳೆದ ವರ್ಷ ಹಲವು ಪ್ರಮುಖ ಕಾರುಗಳು ಗೋಬಲ್ ಎನ್ಕ್ಯಾಪ್ (Golbal NCAP) ಅಂದರೆ ಜಗತಿಕ ಹೊಸ ಕಾರುಗಳ ಪರಿಶೀಲನಾ ಕಾರ್ಯಕ್ರಮ (Global New Cars Assessment Programme) ಪಂಚ ಸ್ಟಾರ್ಗಳನ್ನು ಪಡೆದುಕೊಂಡು ದೇಶದ ಅತ್ಯಂತ ಸುರಕ್ಷತಾ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಇತ್ತೀಚಿಗೆ ನಡೆದ ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಗಳಲ್ಲಿ, ಹೋಂಡಾ ಜಾಝ್, (Honda Jazz) ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ, (Honda city 4th generation) ರೆನಾಲ್ಟ್ ಕಿಗರ್ (Renault Kigar) ಮತ್ತು ನಿಸ್ಸಾನ್ ಮ್ಯಾಗ್ನೈಟ್ (Nissan Magnet) ನಾಲ್ಕು ಸ್ಟಾರ್ಗಳನ್ನು ಗಳಿಸಿವೆ. ಕಳೆದ ವರ್ಷ ಮಹೀಂದ್ರಾ ಎಕ್ಸ್ಯುವಿ 700 (Mahindra XUV700), ಟಾಟಾ ಪಂಚ್ (Tata Punch) ಸೇರಿದಂತೆ ಹಲವು ಪ್ರಮುಖ ಕಾರುಗಳು ಐದು ಸ್ಟಾರ್ಗಳನ್ನು ಪಡೆದುಕೊಂಡಿದ್ದವು.
ಇದನ್ನೂ ಓದಿ: 4 ವರ್ಷದೊಳಗಿನ ಮಕ್ಕಳಿಗೂ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಕಡ್ಡಾಯ: ಸರ್ಕಾರದ ಹೊಸ ಮಾರ್ಗಸೂಚಿ!
ಈಗ ಬ್ರಿಟನ್ ಮೂಲದ ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (GNCAP) ಸಂಸ್ಥೆಯು ಭಾರತದಲ್ಲಿಯೇ ವಾಹನಗಳ ಸುರಕ್ಷತಾ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ. ಟುವರ್ಡ್ಸ್ ಝೀರೋ ಫೌಂಡೇಷನ್ (Towards Zero foundation) ಎಂಬ ಸಂಸ್ಥೆಯಡಿ ಕೆಲಸ ಮಾಡುವ ಎನ್ಕ್ಯಾಪ್, 2023 ರ ಅಂತ್ಯದ ವೇಳೆಗೆ ಭಾರತದಲ್ಲಿ ಕ್ರ್ಯಾಶ್ ಪರೀಕ್ಷೆಗಳನ್ನು ನಡೆಸಲು ನೋಡುತ್ತಿದೆ ಎಂದು ವರದಿಗಳು ತಿಳಿಸಿದೆ. ಆದರೆ, ಇದು ಭಾರತದಲ್ಲಿ ಮಾರಾಟವಾಗುವ ಕಾರುಗಳಿಗೆ ಮಾತ್ರವೇ ಹೊರತು ಜಾಗತಿಕವಾಗಿ ಪರೀಕ್ಷಿಸಲ್ಪಟ್ಟ ಕಾರುಗಳಿಗೆ ಅನ್ವಯವಾಗುವುದಿಲ್ಲ.
2014ರಲ್ಲಿ ಈ ಫೌಂಡೇಷನ್ ಮಾದರಿಗಳು #SaferCarsForIndia ಸುರಕ್ಷತಾ ಪರೀಕ್ಷಾ ಅಭಿಯಾನದ ಆರಂಭಿಸಿತ್ತು. ಆಗ ಭಾರತದಲ್ಲಿ, ಈ ಪರೀಕ್ಷೆಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯಗಳು ಲಭ್ಯವಿರಲಿಲ್ಲ. ಆದರೆ, ಈಗ ಭಾರತದಲ್ಲಿ ಉತ್ತಮ ಪರೀಕ್ಷಾ ಮೂಲಸೌಕರ್ಯಗಳಿವೆ ಎಂದು ಫೌಂಡೇಷನ್ ಅಧ್ಯಕ್ಷ ಡೇವಿಡ್ ವಾರ್ಡ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
#SaferCarsForIndia ಸುರಕ್ಷತಾ ಪರೀಕ್ಷಾ ಅಭಿಯಾನದ ಅಡಿಯಲ್ಲಿ ಜಾಗತಿಕ NCAP, ದೇಶದಲ್ಲಿ ಒಟ್ಟು 50 ಕಾರುಗಳನ್ನು ಪರೀಕ್ಷಿಸಿದೆ. ಅವುಗಳಲ್ಲಿ 15 ಕಾರುಗಳು ನಾಲ್ಕು ಮತ್ತು ಐದು (ಐದು ಅಂಕಗಳು ಟಾಪ್ ಅಂಕಗಳು)ಸುರಕ್ಷತಾ ರೇಟಿಂಗ್ಗಳನ್ನು ಪಡೆದುಕೊಂಡಿವೆ.
ಇದನ್ನೂ ಓದಿ: Used Cars sales ದೇಶದ ಸಣ್ಣ ನಗರ, ಪಟ್ಟಣಗಳಲ್ಲಿ ಬಳಸಿದ ಲಕ್ಷುರಿ ಕಾರುಗಳಿಗೆ ಭಾರಿ ಬೇಡಿಕೆ!
ಸಾಮಾನ್ಯವಾಗಿ, ಭಾರತೀಯ ಕಾರುಗಳನ್ನು ಜರ್ಮನಿಯ ADAC ತಾಂತ್ರಿಕ ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತದೆ, ಅನೇಕ ತಯಾರಕರು ಸ್ವಯಂಪ್ರೇರಣೆಯಿಂದ ಅವುಗಳನ್ನು ಕಳುಹಿಸುತ್ತಾರೆ. ಇಲ್ಲಿಯವರೆಗೆ 19 ಕಾರುಗಳು ಸ್ವಯಂಪ್ರೇರಿತವಾಗಿ ಅಸಲಿ ಉಪಕರಣ ತಯಾರಕರು ವಾಹನಗಳನ್ನು ಕ್ರ್ಯಾಶ್ ತಪಾಸಣೆಗೆ ಕಳುಹಿಸಿದ್ದಾರೆ. ಉಳಿದವರು ವಾಹನವನ್ನು ಜರ್ಮನಿಗೆ ಏರ್ಲಿಫ್ಟ್ ಮಾಡುತ್ತಾರೆ. ಇಲ್ಲಿಯವರೆಗೆ ಭಾರತ ಸುರಕ್ಷಿತ ಕಾರುಗಳ ತಪಾಸಣೆಗಾಗಿ 3.2 ಮಿಲಿಯನ್ ಯೂರೋಗಳನ್ನು ವೆಚ್ಚ ಮಾಡಿದೆ ಎಂದು ಗ್ಲೋಬಲ್ ಎನ್ಕ್ಯಾಪ್ ತಿಳಿಸಿದೆ.
ವರದಿಗಳ ಪ್ರಕಾರ, ಜಿಎನ್ಸಿಎಪಿ ಪರೀಕ್ಷೆಗಳ ಹಿಂದಿನ ಪ್ರಮುಖ ಸಂಸ್ಥೆಯಾಗಿರುವ ಟುವರ್ಡ್ಸ್ ಝೀರೋ ಫೌಂಡೇಶನ್ನ ಕಾರ್ಯನಿರ್ವಾಹಕ ಅಧ್ಯಕ್ಷ ಡೇವಿಡ್ ವಾರ್ಡ್, #SaferCarsForIndia ಸುರಕ್ಷತಾ ಪರೀಕ್ಷಾ ಅಭಿಯಾನವು 2014 ರಲ್ಲಿ ಪ್ರಾರಂಭವಾದಾಗ ಭಿನ್ನವಾಗಿ ಪ್ರಸ್ತುತ ಭಾರತವು ಉತ್ತಮ ಪರೀಕ್ಷಾ ಮೂಲಸೌಕರ್ಯವನ್ನು ಹೊಂದಿದೆ ಎಂದು ಭಾವಿಸುತ್ತಾರೆ.
ಭಾರತದಲ್ಲಿ NCAP ಸುರಕ್ಷತಾ ಪರೀಕ್ಷೆಗಳನ್ನು ಹೊಂದಿರುವುದು ಒಂದು ದೊಡ್ಡ ವರವಾಗಬಹುದು, ಏಕೆಂದರೆ ಈ ಪರೀಕ್ಷಾ ಪ್ರಕ್ರಿಯೆಗೆ ಅಗತ್ಯವಿರುವ ವೆಚ್ಚಗಳು ಕಡಿಮೆಯಾಗುತ್ತವೆ, ಪ್ರಕ್ರಿಯೆಯಲ್ಲಿ ಹೆಚ್ಚಿನ ಕಾರುಗಳನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದು ಸುರಕ್ಷತಾ ಘಟಕಗಳ ಸ್ಥಳೀಕರಣವನ್ನು ಉತ್ತೇಜಿಸುತ್ತದೆ ಎಂದು ವರದಿಗಳು ಸೂಚಿಸುತ್ತವೆ, ಇದು ಕಾರುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸಹಾಯ ಮಾಡುತ್ತದೆ.