ಆನಂದ್ ಮಹೀಂದ್ರ ಮನ ಗೆದ್ದ ಮನೆ ಮೇಲಿನ ಸ್ಕಾರ್ಪಿಯೋ ನೀರಿನ ಟ್ಯಾಂಕ್!

By Suvarna News  |  First Published Oct 31, 2020, 5:21 PM IST

ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ. ಹೀಗಾಗಿ ಪ್ರತಿ ಬಾರಿ ಆನಂದ್ ಮಹೀಂದ್ರ ಟ್ವೀಟ್ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದೀಗ ಆನಂದ್ ಮಹೀಂದ್ರ ಮನೆ ಮೇಲೆ ನೀರಿನ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹೀಂದ್ರ ಮನ ತಣಿಸಿದ ಕಾರ್ಯ ಕುರಿತ ವಿವರ ಇಲ್ಲಿದೆ.


ಮುಂಬೈ(ಅ.31):  ಭಾರತದ ಹಳ್ಳಿ ಹಳ್ಳಿಗಳಲ್ಲಿ ಸಾಮಾನ್ಯ ಜನರ ಬದುಕು, ಅವರ ಜೀವನ ಪದ್ಧತಿಗಳ ಕುರಿತು ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಹಲವು ಬಾರಿ ಬೆಳಕು ಚೆಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟ್ವೀಟ್ ಮೂಲಕ ಪ್ರತಿ ಬಾರಿ ಹೊಸ ಹೊಸ ವಿಚಾರಗಳನ್ನು ಪರಿಚಯಿಸುತ್ತಾರೆ. ಇದೀಗ ಆನಂದ್ ಮಹೀಂದ್ರ ಕಣ್ಣಿಗೆ ಮನೆ ಮಾಲೀಕನ ನೀರಿನ ಟ್ಯಾಂಕ್ ಕಣ್ಣಿಗೆ ಬಿದ್ದಿದೆ.

ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!

Tap to resize

Latest Videos

undefined

ಬಿಹಾರದ ಭಗಲಪುರ್‌ನ ಇಂತಸಾರ್ ಅಲಂ ಅನ್ನೋ ವ್ಯಕ್ತಿ ತನ್ನ ಮನೆ ಮೇಲೆ ಮಹೀಂದ್ರ ಸ್ಕಾರ್ಪಿಯೋ ರೀತಿಯ ನೀರಿನ ಟ್ಯಾಂಕ್ ಕಟ್ಟಿಸಿದ್ದಾನೆ. ತನ್ನ ಮೊದಲ ಮಹೀಂದ್ರ ಸ್ಕಾರ್ಪಿಯೋ ಕಾರಿನ ನೆನಪಿಗಾಗಿ ಮಾಲೀಕ ಸ್ಕಾರ್ಪಿಯೋ ಕಾರಿನ ರೀತಿಯಲ್ಲೇ ನೀರಿನ ಟ್ಯಾಂಕ್ ಕಟ್ಟಿಸಿದ್ದಾನೆ. ಇದಕ್ಕಾಗಿ ಇಂತಸಾರ್ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!.

ಸ್ಕಾರ್ಪಿಯೋ ನೀರಿನ ಟ್ಯಾಂಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆನಂದ್ ಮಹೀಂದ್ರ ಕಣ್ಣಿಗೂ ಬಿದ್ದಿದೆ. ಸ್ಕಾರ್ಪಿಯೋ ಮಹಡಿ ಮೇಲೆ ಉದಯವಾಗಿದೆ. ಸ್ಕಾರ್ಪಿಯೋ ನೀರಿನ ಟ್ಯಾಂಕ್ ಕಟ್ಟಿಸಿದ ಮನೆ ಮಾಲೀಕನಿಗೆ ನನ್ನ ನಮನಗಳು. ಮೊದಲ ಕಾರಿನ ಮೇಲಿರುವ ಪ್ರೀತಿಗೆ ಮೆಚ್ಚುಗೆ ಇದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಆನಂದ್ ಮಹೀಂದ್ರ ಟ್ವೀಟ್ ಬೆನ್ನಲ್ಲೇ ಇದೀಗ ಪಂಜಾಬ್‌ನಲ್ಲೋರ್ವ ವ್ಯಕ್ತಿ ಇದೇ ರೀತಿ ಮನೆ ಮಹಡಿ ಮೇಲೆ ಮಹೀಂದ್ರ ಸ್ಕಾರ್ಪಿಯೋ ನೀರಿನ ಟ್ಯಾಂಕ್ ನಿರ್ಮಿಸಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


 

lover.
only Punjabi can do this . This cemented Scorpio is water tank of the house .. pic.twitter.com/LNq5UqRNZU

— Mohit singla (@M_Rampura)
click me!