ಶೀಘ್ರದಲ್ಲೇ ಇನೋವಾ ರೀತಿಯ ಕಡಿಮೆ ಬೆಲೆಯ ರೆನಾಲ್ಟ್ ಕಾರು ಬಿಡುಗಡೆ!

By Web Desk  |  First Published Jan 18, 2019, 8:49 PM IST

ಕ್ವಿಡ್ ಕಾರಿನ ಮೂಲಕ ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ ರೆನಾಲ್ಟ್ ಕಾರು ಇದೀಗ ದೊಡ್ಡ ಗಾತ್ರದ ಕಾರು( MPV) ಕಾರು ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆಯ MPV ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
 


ನವದೆಹಲಿ(ಜ.18): ಇನೋವಾ ರೀತಿಯಲ್ಲಿ MPV ಕಾರು ಬಿಡುಗಡೆ ಮಾಡಲು ರೆನಾಲ್ಡ್ ರೆಡಿಯಾಗಿದೆ. 2018ರಲ್ಲಿ ಸಣ್ಣ ಕಾರು ವಿಭಾಗದಲ್ಲಿ ರೆನಾಲ್ಟ್ ಕ್ವಿಡ್ ಮಾರಾಟದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ ರೆನಾಲ್ಟ್ ದೊಡ್ಡ ಕಾರು (MPV) ಕಾರು ಬಿಡುಗಡೆ ಮಾಡಲಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆ ಹಾಗೂ ಗರಿಷ್ಠ ಸದಪಯೋಗದ ಕಾರು ಇದಾಗಲಿದೆ ಎಂದು ಕಂಪೆನಿ ಹೇಳಿದೆ.

Latest Videos

undefined

ಇದನ್ನೂ ಓದಿ: ಯಾವ ಬಣ್ಣದ ಕಾರು ಭಾರತೀಯರಿಗೆ ಇಷ್ಟ?-ಸಮೀಕ್ಷೆ ಬಹಿರಂಗ!

ಮಾರುತಿ ಸುಜುಕಿ ಎರ್ಟಿಗಾ ಸೇರಿದಂತೆ ಇತರ MPV ವೆರಿಯೆಂಟ್ ಕಾರುಗಳಿಗೆ ಪೈಪೋಟಿ ನೀಡಲು ರೆನಾಲ್ಟ್ ರೆಡಿಯಾಗಿದೆ.  ಹೆಚ್ಚು ಕಡಿಮೆ ರೆನಾಲ್ಟ್ ಕ್ಯಾಪ್ಚರ್ ಲುಕ್ ಹೊಂದಿದೆ. ಮುಂಭಾಗದ ಗ್ರಿಲ್ ಹಾಗೂ ಬಂಪರ್ ಕ್ವಿಡ್ ರೀತಿಯಲ್ಲೇ ಇದೆ. ಕ್ಯಾಪ್ಚರ್ ಕಾರಿನ ಹೆಡ್ ಲೈಟ್ ಜೊತೆಗೆ ಆಗ್ರೆಸ್ಸಿವ್ ಲುಕ್‌ನಿಂದ ಇತರ  MPV ಕಾರಿಗೆ ಪೈಪೋಟಿ  ನೀಡಲಿದೆ. 4 ಮೀಟರ್ ಉದ್ದ, 2,450mm ವೀಲ್ಹ್‌ಬೇಸ್ ಹೊಂದಿದೆ. ಇನ್ನು 0.99 ಲೀಟರ್, 3 ಸಿಲಿಂಡರ್ ಎಂಜಿನ್ ಇರಲಿದೆ.

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಇನ್ನು ಮ್ಯಾನ್ಯುಯೆಲ್  ಹಾಗೂ ಎಎಂಟಿ ಆಯ್ಕೆ ಕೂಡ ಇದೆ. ಈ ಕಾರು 2019ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ರೆನಾಲ್ಟ್ ನಿರ್ಧರಿಸಿದೆ. 7 ಸೀಟರ್ ರೆನಾಲ್ಟ್  MPV ಕಾರಿನ ಬೆಲೆ  7 ರಿಂದ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 
 

click me!