125 ಬೈಕ್ ಯಶಸ್ಸಿನ ಬಳಿಕ KTM ಡ್ಯೂಕ್ RC 125 ಶೀಘ್ರದಲ್ಲಿ ಬಿಡುಗಡೆ!

Published : Apr 30, 2019, 06:08 PM IST
125 ಬೈಕ್ ಯಶಸ್ಸಿನ ಬಳಿಕ KTM ಡ್ಯೂಕ್ RC 125 ಶೀಘ್ರದಲ್ಲಿ ಬಿಡುಗಡೆ!

ಸಾರಾಂಶ

KTM ಡ್ಯೂಕ್ ಹೊಸ ಬೈಕ್ ಬಿಡುಗಡೆಗೆ ಮಾಡುತ್ತಿದೆ. ಈ ಮೂಲಕ ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. KTM ಡ್ಯೂಕ್ ಬಿಡುಗಡೆ ಮಾಡುತ್ತಿರುವ ನೂತನ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.  

ನವೆದೆಹಲಿ(ಏ.30):  ಆಸ್ಟ್ರಿಯಾ ಮೂಲದ KTM ಡ್ಯೂಕ್ ಭಾರತದಲ್ಲಿ ಬಜಾಜ್ ಸಹಯೋಗದೊಂದಿಗೆ ಬೈಕ್ ಬಿಡುಗಡೆ ಮಾಡುತ್ತಿದೆ. ಈಗಾಗಲೇ  KTM ಡ್ಯೂಕ್ ಬೈಕ್‌ಗಳು ಯುವ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಈಗಾಗಲೇ  KTM ಡ್ಯೂಕ್ 125 ಬೈಕ್ ಭಾರಿ ಯಶಸ್ಸು ಗಳಿಸಿದೆ. ಇದರ ಬೆನ್ನಲ್ಲೇ  KTM ಡ್ಯೂಕ್ RC 125 ಬೈಕ್ ಬಿಡುಗಡೆ ಮಾಡಲು ರೆಡಿಯಾಗಿದೆ.

ಇದನ್ನೂ ಓದಿ: ಸುಜುಕಿ ಮೋಟಾರ್ಸ್‌ನಿಂದ ಸರ್ಪ್ರೈಸ್- ಮೇ.20ಕ್ಕೆ ಹೊಸ ವಾಹನ ಬಿಡುಗಡೆ!

KTM ಡ್ಯೂಕ್ RC ಶೈಲಿಯಲ್ಲೇ ಇದೀಗ RC 125 ಬೈಕ್ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ KTM ಡ್ಯೂಕ್ 125 ಬೈಕ್ ಬೆಲೆ 1.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ನೂತನವಾಗಿ ಬಿಡುಗಡೆಯಾಗಲಿರುವ KTM ಡ್ಯೂಕ್ RC 125 ಬೈಕ್ ಬೆಲೆ 1.40 ಲಕ್ಷ ರೂಪಾಯಿ(ಏಕ್ಸ್ ಶೋ ರೂಂ). 

ಇದನ್ನೂ ಓದಿ: ಭಾರತ್ ಟ್ರೈಲರ್ ಬಿಡುಗಡೆ: ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್‌ನಲ್ಲಿ ಸಲ್ಮಾನ್ ಸ್ಟಂಟ್!

ಡ್ಯೂಕ್ 125 ಹಾಗೂ  KTM ಡ್ಯೂಕ್ RC 125 ಬೈಕ್ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.  124.7 cc, ಲಿಕ್ವಿಡ್ ಕೂಲ್ಡ್ ಎಂಜಿನ್,  6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು,   14.75 hp ಪವರ್ ಹಾಗೂ 12 Nm  ಪೀಕ್ ಟಾರ್ಕ್ ಉತ್ಪಾದಿಸಲಿದೆ. ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ತಂತ್ರಜ್ಞಾನ ಇರಲಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ