ಭಾರತದಲ್ಲಿ ಶೀಘ್ರದಲ್ಲೇ 5 ಸ್ಟಾರ್ ಸೇಫ್ಟಿ ವಾಹನ!

By Web Desk  |  First Published Nov 13, 2018, 9:45 PM IST

ಕಾರು ಹಾಗೂ ವಾಹನ ಸುರಕ್ಷತೆಗಿಂತ ಕಡಿಮೆ ಬೆಲೆಗೆ ಹೆಚ್ಚು ಒತ್ತು ನೀಡಿದ್ದ ಭಾರತ, ಇದೀಗ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ. ಹೀಗಾಗಿ ಇದೀಗ ಸುರಕ್ಷತೆ ಇಲ್ಲದ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. 
 


ನವದೆಹಲಿ(ನ.13): ಭಾರತದಲ್ಲಿ ಇದೀಗ ವಾಹನಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. 2019ರಿಂದ ಕನಿಷ್ಠ ಸುರಕ್ಷತೆ ಇಲ್ಲದೆ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. ಹೀಗಾಗಿ ಹಲವು ಪ್ರಖ್ಯಾತ ವಾಹನಗಳು ಇತಿಹಾಸ ಪುಟ ಸೇರಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಗರಿಷ್ಟ ಸುರಕ್ಷತೆ 5 ಸ್ಟಾರ್ ರೇಟಿಂಗ್ ಪಡೆದಿರೋ ಕಾರು ಬಿಡುಗಡೆಯಾಗಲಿದೆ.

2014ರಿಂದ ಭಾರತದ ಕಾರು ಉತ್ಪಾದಕ ಕಂಪೆನಿಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹೀಗಾಗಿ 5 ಸ್ಟಾರ್ ರೇಟಿಂಗ್ ಕಾರು ಬಿಡುಗಡೆಯಾಗೋ ದಿನ ದೂರವಿಲ್ಲ ಎಂದು ದೆಹಲಿಯ ಗ್ಲೋಬಲ್ NCAP ಸುರಕ್ಷತಾ ಪರೀಕ್ಷಾ ಘಟಕದ ಮುಖ್ಯ ಕಾರ್ಯದರ್ಶಿ ಡೇವಿಡ್ ವಾರ್ಡ್ ಹೇಳಿದ್ದಾರೆ.

Latest Videos

2014ರ ಹಿಂದೆ ಭಾರತದ ಕಾರುಗಳು ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆದಿದ್ದೇ ಹೆಚ್ಚು. ಆದರೆ ಇದೀಗ 4 ಸ್ಟಾರ್ ಕಾರುಗಳು ಭಾರತದಲ್ಲಿದೆ. ಭಾರತದ ಕಾರು ತಯಾರಿಕ ಕಂಪೆನಿ ಟಾಟಾ ಕಾರುಗಳು 4 ಸ್ಟಾರ್ ರೇಟಿಂಗ್ ಪಡೆದಿದೆ. ಹೀಗಾಗಿ ಶೀಘ್ರದಲ್ಲೇ ಸುರಕ್ಷತಾ ಗುಣಮಟ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

click me!