ಅತ್ಯಂತ ದುಬಾರಿ ಬೈಕ್, ಹಾಗೂ ಕಾರುಗಳನ್ನ ಹೊಂದಿರುವ ದುಬೈ ಪೊಲೀಸರು ಇದೀಗ ಮತ್ತೊಂದು ದುಬಾರಿ ವಾಹನ ಬಳಸಲು ಮುಂದಾಗಿದ್ದಾರೆ. ದುಬೈ ಪೊಲೀಸರ ನೂತನ ವಾಹನ ಯಾವುದು? ಇಲ್ಲಿದೆ ಹೆಚ್ಚಿನ ಮಾಹಿತಿ
ದುಬೈ(ನ.13): ಆಧುನಿಕ ತಂತ್ರಜ್ಞಾನ, ದುಬಾರಿ ಬೆಲೆ ವಾಹನ ಬಳಸೋದರಲ್ಲಿ ದುಬೈ ಪೊಲೀಸರು ಎತ್ತಿದ ಕೈ. ಬುಗಾಟಿ ವೆಯ್ರಾನ್, ಆಸ್ಟನ್ ಮಾರ್ಟಿನ್ ಒನ್-77 ಸೇರಿದಂತೆ ವಿಶ್ವದ ಅತ್ಯಂತ ದುಬಾರಿ ಕಾರುಗಳು ದುಬೈ ಪೊಲೀಸರಲ್ಲಿದೆ. ಇದೀಗ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಹೋವರ್ ಬೈಕ್ ಸೇವೆಯನ್ನ ದುಬೈ ಪೊಲೀಸರು ಬಳಸುತ್ತಿದ್ದಾರೆ.
ಹಾರುವ ಬೈಕ್ ಬೈಕ್ ಸೇವೆ ಬಳಸುತ್ತಿರುವ ವಿಶ್ವದ ಏಕೈಕ ಪೊಲೀಸ್ ಅನ್ನೋ ಖ್ಯಾತಿಗೆ ಇದೀಗ ದುಬೈ ಪೊಲೀಸರು ಪಾತ್ರರಾಗಿದ್ದಾರೆ. ಸದ್ಯ ಹೋವರ್ ಬೈಕ್ ಟ್ರೈನಿಂಗ್ ನಡೆಯುತ್ತಿದೆ. ರಷ್ಯಾದ ಮೂಲಕ ಈ ಹೋವರ್ ಬೈಕ್ ಡ್ರೋನ್ ಫ್ಲೈ ರೀತಿಯಲ್ಲಿ ಚಲಿಸಲಿದೆ.
undefined
16 ಫೀಟ್ ಎತ್ತರದಲ್ಲಿ ಈ ಹೋವರ್ ಬೈಕ್ ಹಾರಾಟ ನಡೆಸಲಿದೆ. ಇನ್ನು ಗಂಟೆಗೆ 70 ಕಿಮೀ ವೇಗದಲ್ಲಿ ಪ್ರಯಾಣ ಮಾಡಲಿದೆ. 25 ನಿಮಿಷ ಬ್ಯಾಟರಿ ಚಾರ್ಜ್ ಮಾಡಿದರೆ ಹಾರಾಟ ಆರಂಭಿಸಬಹುದು. ಇನ್ನು ಇದರ ಬೆಲೆ 1.08 ಕೋಟಿ ರೂಪಾಯಿ.