ಭಾರತದಲ್ಲಿ ಕಾರು ಮಾರುಕಟ್ಟೆ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದೀಗ ಹ್ಯುಂಡೈ ಸಂಸ್ಥೆ ದಕ್ಷಿಣ ಭಾರತದಲ್ಲಿ 7ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಮೂಲಕ 700 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ.
ಶ್ರೀಪೆರಬಂದೂರ್(ನ.13): ಕೊರಿಯಾದ ಹ್ಯುಂಡೈ ಕಾರು ಸಂಸ್ಥೆ ಇದೀಗ ದಕ್ಷಿಣ ತಮಿಳುನಾಡಿನ ಶ್ರೀಪೆರಂದೂರಿನಲ್ಲಿ ಬರೋಬ್ಬರಿ 7000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ 700 ಹೊಸ ಉದ್ಯೋಗ ಸೃಷ್ಟಿಯಾಗಲಿದೆ.
ಈ ಕುರಿತು ತಮಿಳುನಾಡು ಸರ್ಕಾರದ ಜೊತೆ ಹ್ಯುಂಡೈ ಒಪ್ಪಂದ ಮಾಡಿಕೊಂಡಿದೆ. ನಿರ್ಮಾಣ ಘಟಕದಲ್ಲಿ ಕಾರು ತಯಾರಿಕೆ ಹೆಚ್ಚಿಸಲು ಇದೀಗ ಹ್ಯುಂಡೈ ಹೆಚ್ಚುವರಿ ಹಣ ಹೂಡಿಕೆ ಮಾಡುತ್ತಿದೆ. ಈ ಮೂಲಕ ಶ್ರೀಪೆರಂಬದೂರಿನ ಹ್ಯುಂಡೈ ಕಾರು ಘಟಕ ಮತ್ತಷ್ಟು ದೊಡ್ಡದಾಗಲಿದೆ.
ಹ್ಯುಂಡೈ ಸಂಸ್ಥೆಯ ನೂತನ ಯೋಜನೆಯಿಂದ ಶ್ರೀಪೆರಂಬದೂರಿನಲ್ಲಿ ಕಾರುಗಳನ್ನ ತಯಾರಿಸಿ 87 ದೇಶಗಳಿಗೆ ರಫ್ತ ಮಾಡಲು ಮುಂದಾಗಿದೆ. ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೂ ಇನ್ನು ತಮಿಳುನಾಡಿನ ಶ್ರೀಪೆರಂಬದೂರಿನಿಂದ ಕಾರುಗಳು ರಫ್ತಾಗಲಿದೆ.