ಎಬಿಎಸ್, 114 ಸ್ಪೀಡ್- ಟಿವಿಎಸ್ ಅಪಾಚೆ RTR 180 ಬಿಡುಗಡೆ!

Published : Nov 21, 2018, 11:49 AM IST
ಎಬಿಎಸ್, 114 ಸ್ಪೀಡ್- ಟಿವಿಎಸ್ ಅಪಾಚೆ RTR 180 ಬಿಡುಗಡೆ!

ಸಾರಾಂಶ

ಇನ್ನೊಂದು ತಿಂಗಳು ಬಾಕಿ ಇರುವಾಗಲೇ 2019ರ ಟಿವಿಎಸ್ ಅಪಾಚೆ RTR 180 ಬೈಕ್ ಬಿಡುಗಡೆಯಾಗಿದೆ. ರೇಸ್ ಗ್ರಾಫಿಕ್ಸ್, ನೂತನ ಕನ್ಸೋಲ್, ಕ್ರಾಶ್ ಗಾರ್ಡ್, ಫ್ರೇಮ್ ಸ್ಲೈಡರ್ಸ್ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಅಪಾಚೆ ಬಿಡುಗಡೆಯಾಗಿದೆ.

ನವದೆಹಲಿ(ನ.21): ಡ್ಯುಯೆಲ್ ಎಬಿಎಸ್(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಹಾಗೂ 114 ಸ್ಪೀಡ್ ಹೊಂದಿರುವ ನೂತನ ಟಿವಿಎಸ್ ಅಪಾಚೆ RTR 180 ಬಿಡುಗಡೆಯಾಗಿದೆ. ಮೆಕಾನಿಕ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ, ಆದರೆ ವಿನ್ಯಾಸ ಹಾಗೂ ಲುಕ್‌ನಲ್ಲಿ ಬದಲಾವಣೆ ಮಾಡಲಾಗಿದೆ.

ನೂತನ ಟಿವಿಎಸ್ ಅಪಾಚೆ RTR 180 ಬೈಕ್ ಬೆಲೆ 84,578 ರೂಪಾಯಿ(ಎಕ್ಸ್ ಶೋ ರೂಂ) ಇನ್ನು ಎಬಿಎಸ್ ಟಿವಿಎಸ್ ಅಪಾಚೆ RTR 180 ಬೈಕ್ ಬೆಲೆ 95,392 ರೂಪಾಯಿ(ಎಕ್ಸ್ ಶೋ ರೂಂ). ನೂತನ ಅಪಾಚೆ ಬೈಕ್‌ನಿಂದ  ಇದೀಗ ಸುಜುಕಿ, ಯಮಹಾ ಹಾಗೂ ಬಜಾಜ್ ಬೈಕ್‌ಗಳಿಗೆ ತೀವ್ರ ಪೈಪೋಟಿ ಎದುರಿಸಬೇಕಾಗಿದೆ.

ಹೊಸ ಕನ್ಸೋಲ್, ರಿಫ್ರೆಶಡ್ ರೇಸ್ ಗ್ರಾಫಿಕ್ಸ್, ಕ್ರಾಶ್ ಪ್ರೊಟೆಕ್ಷನ್ ಗಾರ್ಡ್, ಫಿನೀಶಡ್ ಸೀಟ್, ಸ್ಪೀಡೋ ಮೀಟರ್-ಡಯಲ್ ಆರ್ಟ್ ಸೇರಿದಂತೆ ಹಲವು ಫೀಚರ್ಸ್ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಇನ್ನು 5 ಬಣ್ಣಗಳಲ್ಲಿ ನೂತನ ಟಿವಿಎಸ್ ಅಪಾಚೆ RTR 180 ಬೈಕ್ ಬಿಡುಗಡೆಯಾಗಿದೆ.

177.4 ಸಿಸಿ , 2 ವೇಲ್ವ್, ಸಿಂಗಲ್ ಸಿಲಿಂಡರ್ ಎಂಜಿನ್, 16bhp, 15.5 ಪೀಕ್  ಪವರ್ ಟಾರ್ಕ್ ಉತ್ವಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ನೂತನ ಅಪಾಚೆ 114 ಗರಿಷ್ಠ ಸ್ಪೀಡ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ