2019ರ ಸುಜುಕಿ ಹಯಬುಸಾ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಯುರೋಪ್‌ನಲ್ಲಿ 2019ರಿಂದ ಹಯಬುಸಾ ಮಾರಾಟ ಸ್ಥಗಿತಗೊಳಿಸುತ್ತಿದೆ. ಆದರೆ ಭಾರತ ಹಾಗೂ ಅಮೇರಿಕಾದಲ್ಲಿ ಹಯಬುಸಾ ಘರ್ಜಿಸಲಿದೆ.
ನವದೆಹಲಿ(ಡಿ.27): ಸುಜುಕಿ ಮೋಟರ್ ಸೈಕಲ್ ಇಂಡಿಯಾ 2019ರ ಹಯಬುಸಾ ಸೂಪರ್ ಬೈಕ್ ಬಿಡುಗಡೆ ಮಾಡಿದೆ. 2 ಕಲರ್‌ಗಳಲ್ಲಿ ಸುಜುಕಿ ಹಯಬುಸಾ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ ಬರೋಬ್ಬರಿ 13.74 ಲಕ್ಷ ರೂಪಾಯಿ. ಕಳೆದ 20 ವರ್ಷಗಳಿಂದ ಸೂಪರ್ ಬೈಕ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಹಯಬುಸ ಇದೀಗ ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
undefined
ಇದನ್ನೂ ಓದಿ: ರಾಜಧಾನಿಯಲ್ಲಿ ನಾಳೆಯಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್!
ಯುರೋಪ್‌ನಲ್ಲಿ ಸುಜುಕಿ ಹಯಬುಸಾ ಡಿಸೆಂಬರ್ 31, 2018ಕ್ಕೆ ನಿರ್ಮಾಣ ನಿಲ್ಲಿಸಲಿದೆ. ಯುರೋ ಎಮಿಶನ್ 4 ಟೆಸ್ಟ್‌ನಲ್ಲಿ ಹಯಬುಸಾ ವಿಫಲವಾಗಿದೆ. ಮಾಲಿನ್ಯ ನಿಯಂತ್ರಣದಲ್ಲಿ ಸುಜುಕಿ ಹಯಬುಸಾ ಯುರೋಪ್ ನೀತಿ ಪಾಲಿಸಲು ಸಾಧ್ಯವಾಗಿಲ್ಲ. ಆದರೆ ಭಾರತ ಹಾಗೂ ಅಮೇರಿಕಾದಲ್ಲಿ ಹಯಬುಸಾ ಬೈಕ್ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ.
ಇದನ್ನೂ ಓದಿ: ಶ್ರೇಷ್ಠ ರಸ್ತೆ-ವಿಶ್ವದ ಕೆಟ್ಟ ಬೈಕ್ ಇದುವೇ ಮಂಕಿ ರನ್ ರೇಸ್!
ಹಯಬುಸಾ ಬೈಕ್ 1340 ಸಿಸಿ, 4 ಸಿಲಿಂಡರ್, 197 bhp ಪವರ್ ಹಾಗೂ 155nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಟಾಪ್ ಸ್ಪೀಡ್ 300 kmph. 1999ರಲ್ಲಿ ಸುಜುಕಿ ಸಂಸ್ಥೆ ಮೊದಲ ಬಾರಿಗೆ ಹಯಬುಸಾ ಬೈಕ್ ಬಿಡುಗಡೆ ಮಾಡಿತು. 90ರ ದಶಕದಲ್ಲಿ ಹಯಬುಸಾ ಹೊಸ ಸಂಚಲನ ಮೂಡಿಸಿತು.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: