ವಾಹನ ಚಾಲನೆ ಕಲಿಕಾ ಪರವಾನಗಿ, ವಾಹನ ಚಾಲನೆ ಪರವಾನಗಿಯ ನವೀಕರಣ, ನಕಲಿ ಡ್ರೈವಿಂಗ್ ಲೈಸನ್ಸ್, ವಾಹನ ಚಾಲನೆ ಪರವಾನಗಿ ಮತ್ತು ನೋಂದಣಿಯಲ್ಲಿನ ವಿಳಾಸ ಬದಲು, ಅಂತಾರಾಷ್ಟ್ರೀಯ ಡ್ರೈವಿಂಗ್ ಅವಕಾಶ ಸೇರಿದಂತೆ ಒಟ್ಟು 18 ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು
ನವದೆಹಲಿ (ಮಾ.05): ಇನ್ಮುಂದೆ ಜನ ಸಾಮಾನ್ಯರು ತಮ್ಮ ವಾಹನ ಪರವಾನಗಿಯ ನವೀಕರಣ, ವಾಹನಗಳ ನೋಂದಣಿ ಸೇರಿದಂತೆ ಇನ್ನಿತರ ಕಾರ್ಯಗಳಿಗಳಿಗಾಗಿ ಆರ್ಟಿಒ ಕಚೇರಿ ಅಲೆಯುವ ಅಗತ್ಯವಿರುವುದಿಲ್ಲ.
ಹೌದು, ಪ್ರಾದೇಶಿಕ ಸಂಚಾರ ಕಚೇರಿ(ಆರ್ಟಿಒ)ಗಳಲ್ಲಿ ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ಆಧಾರ್ ಆಧಾರಿತವಾದ 18 ಸೇವೆಗಳಿಗೆ ಕೇಂದ್ರ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಚಾಲನೆ ನೀಡಿದೆ.
ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್ ಅಂತ್ಯದವರೆಗ ಮಾತ್ರ! ...
ಅಭ್ಯರ್ಥಿಯು ಯಾವುದೇ ಮಧ್ಯವರ್ತಿಯ ನೆರವಿಲ್ಲದೆ ತನ್ನ ಸೇವೆಯನ್ನು ನೇರವಾಗಿ ಪಡೆಯಲು ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಾಹನ ಚಾಲನೆ ಕಲಿಕಾ ಪರವಾನಗಿ, ವಾಹನ ಚಾಲನೆ ಪರವಾನಗಿಯ ನವೀಕರಣ, ನಕಲಿ ಡ್ರೈವಿಂಗ್ ಲೈಸನ್ಸ್, ವಾಹನ ಚಾಲನೆ ಪರವಾನಗಿ ಮತ್ತು ನೋಂದಣಿಯಲ್ಲಿನ ವಿಳಾಸ ಬದಲು, ಅಂತಾರಾಷ್ಟ್ರೀಯ ಡ್ರೈವಿಂಗ್ ಅವಕಾಶ ಸೇರಿದಂತೆ ಒಟ್ಟು 18 ಸೇವೆಗಳನ್ನು ಜನರು ಆರ್ಟಿಒ ಕಚೇರಿಗಳಿಗೆ ಅಲೆಯದೇ ಮನೆಯಲ್ಲೇ ಕುಳಿತು ಆಧಾರ್ ಒಟಿಪಿಯೊಂದಿಗೆ ಪಡೆದುಕೊಳ್ಳಬಹುದಾಗಿದೆ.