ಕಾರಿನ ಎಂಜಿನ್ ನೀಡುವ 10 ಸೂಚನೆ ಕಡೆಗಣಿಸಿಬೇಡಿ, ಇರಲಿ ಎಚ್ಚರ!

By Suvarna News  |  First Published Jul 19, 2020, 7:22 PM IST

ಕಾರು ಖರೀದಿ ಮಾತ್ರವಲ್ಲ ಅದರ ನಿರ್ವಹಣೆ ಕೂಡ ಅಷ್ಟೇ ಅಗತ್ಯ. ನಿರ್ಲಕ್ಷ್ಯವಹಿಸಿದರೆ ಬಹುದೊಡ್ಡ ಅನಾಹುತವಾಗಬಹುದು. ನಿಮ್ಮ ಪ್ರಯಾಣದ ವೇಳೆ ಕಾರು ಕೆಲ ಸೂಚನೆಗಳನ್ನು ನೀಡಿದರೆ ತಕ್ಷಣವೆ ಕಾರಿನ ತಪಾಸಣೆ ಹಾಗೂ ರಿಪೇರಿ ಅಗತ್ಯವಿದೆ. ಹೀಗೆ ಕಾರು ನೀಡುವ ಈ 10 ಎಚ್ಚರಿಕೆ ಕಡೆಗಣಿಸಬೇಡಿ


ಬೆಂಗಳೂರು(ಜು.19): ಕಾರು ನಿರ್ವಹಣೆ ಅತೀವ ಮುಖ್ಯ. ದೂರ ಪ್ರಯಾಣವೇ ಇರಲಿ, ನಗರದ ಪ್ರಯಾಣವೇ ಇರಲಿ ಕಾರಿನಲ್ಲಿ ಯಾವುದೇ ಸಮಸ್ಯೆ ಇದ್ದರೆ ಪಜೀತಿ ತಪ್ಪಿದ್ದಲ್ಲ. ಅವದಿಗೆ ಸರಿಯಾಗಿ ಕಾರು ಸರ್ವೀಸ್ ಸೇರಿದಂತೆ ಆಯಿಲ್ ಬದಲಾವಣೆಗಳು ಮುಖ್ಯ. ಪ್ರಯಾಣದ ವೇಳೆ ಕಾರು ಕೆಲ ಎಚ್ಚರಿಕೆ ನೀಡಿದರೆ ಅದನ್ನು ಕಡೆಗಣಿಸಲೇಬಾರದು. ಈ ರೀತಿ ಕಾರಿನ ಎಂಜಿನ್ ನೀಡುವ 10 ಸೂಚನೆಗಳ ವಿವರ ಇಲ್ಲಿದೆ.

ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ, ಬ್ರೇಕ್ ಮೊದಲೋ? ಯಾವುದು ಉತ್ತಮ ವಿಧಾನ? ಇಲ್ಲಿದೆ ಟಿಪ್ಸ್!

Tap to resize

Latest Videos

undefined

ಕಾರಿನ ಎಂಜಿನ್‌ನಿಂದ ಶಬ್ದ
ಕಾರಿನ ಎಂಜಿನ್ ಸ್ಟಾರ್ಟ್ ಮಾಡಿದಾಗ ಸಾಮಾನ್ಯ ಶಬ್ದ ಹೊರಸೂಸುತ್ತದೆ. ಆದರೆ ಇದರ ಹೊರತಾಗಿ ಕರ್ಕಷ ಶಬ್ಡ, ಅಥಾವ ಎಂಜಿನ್ ಸ್ಟಾರ್ಟ್ ಶಬ್ದದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ, ಮೆಕಾನಿಕ್ ಕರೆಸಿ ಪರಿಶೀಸಿಲುವುದು ಅಗತ್ಯ.

ಅತೀಯಾಗ ಹೊಗೆ ಕಾಣಿಸಿಕೊಂಡಾಗ
ಸರಿಯಾದ ಇಂಧನ ಬಳಕೆ ಮಾಡುತ್ತಿದ್ದರೂ, ಸೈಲೆನ್ಸರ್ ಮೂಲಕ ಅಥವಾ ಎಂಜಿನ್ ಮೂಲಕ ಹೊಗೆ ಹೊರಬಂದರೆ ಎಂಜಿನ್ ಅಪಾಯದಲ್ಲಿದೆ ಎಂದರ್ಥ. ಈ ಸೂಚನೆಯನ್ನು ಕಡೆಗಣಿಸಬಾರದು.

ಎಂಜಿನ್ ವೈಬ್ರೇಶನ್
ಕಾರು ಸ್ಟಾರ್ಟ್ ಆದಾಗ ವೈಬ್ರೇಶನ್ ಸಹಜ. ಆದರೆ ಎಂದಿನ ವೈಬ್ರೇಶನ್‌ಗಿಂತ ಹೆಚ್ಚಾಗಿ ಕಾರು ವೈಬ್ರೇಟ್ ಆಗುತ್ತಿದ್ದರೆ, ಎಂಜಿನ್ ಲೋಪದೋಷವಿದೆ ಎಂದರ್ಥ. ಹೀಗಾಗಿ ಗಮನ ಹರಿಸಬೇಕು.

ಎಂಜಿನ್ ಲ್ಯಾಂಪ್ ಸೂಚನೆ
ಕಾರಿನ ಕಿ ಹಾಕಿ ಆನ್ ಮಾಡಿದಾಗ ಕಾರಿನ ಇಗ್ನೀಷನ್ ಗಮನಿಸಿಕೊಳ್ಳಿ. ಎಲ್ಲವೂ ಸರಿಯಾಗಿದ್ದರೆ ಎಂಜಿನ್ ಲ್ಯಾಂಪ್ ಆರಂಭದಲ್ಲಿ ಕಾಣಿಸಿಕೊಂಡು ಬಳಿಕ ಮಾಯವಾಗುತ್ತದೆ. ಆದರೆ ಎಂಜಿನ್‌ನಲ್ಲಿ ಸಮಸ್ಯೆ ಇದ್ದರೆ ಎಂಜಿನ್ ಲ್ಯಾಂಪ್ ಹಾಗೇ ಕಾಣಿಸಿಕೊಳ್ಳಲಿದೆ. ಇದು ಎಚ್ಚರಿಕೆ ಸೂಚನೆ.

ಎಂಜಿನ್ ಉಷ್ಣತೆ
ಎಂಜಿನ್ ಅತೀಯಾಗಿ ಬಿಸಿಯಾಗುತ್ತಿದ್ದರೆ ಇದೂ ಕೂಡ ಅಪಾಯಕಾರಿ. ಹೀಗಾಗಿ ಎಂಜಿನ್ ಹೀಟ್ ಮೀಟರ್ ಪರಿಶೀಸಿಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು.

ಎಂಜಿನ್ ಆಯಿಲ್ ಸಮಸ್ಯೆ
ಕಾರಿನಲ್ಲಿ ಎಂಜಿನ್ ಆಯಿಲ್ ಕಡಿಮೆ ಇದ್ದಲ್ಲಿ ಅಥವಾ ನಿಗದಿತ ಸಮಯಕ್ಕೆ ಬದಲಾಯಿಸಿದಿದ್ದಲ್ಲಿ, ಇಗ್ನಿಷನ್‌ ಆನ್ ಮಾಡಿದ ವೇಳೆ ಆಯಿಲ್ ಚಿಹ್ನೆ ಚಿತ್ರ ಕಾಣಿಸಿಕೊಳ್ಳಲಿದೆ. ಕಾರು ಸ್ಟಾರ್ಟ್ ಆದ ಮೇಲೂ ಈ ಚಿಹ್ನೆ ಇದ್ದರೆ ಆಯಿಲ್ ಸಮಸ್ಯೆಯನ್ನು ಸೂಚಿಸುತ್ತದೆ.

ಪವರ್ ಕಡಿಮೆ ಇದೆ ಅನಿಸಿದಾಗ
ಕಾರು ಚಲಾಯಿಸುವಾಗ ಎಷ್ಟೇ ಎಕ್ಸಲರೇಟ್ ಮಾಡಿದರೂ ಕಾರು ಪಿಕ್ ಅಪ್ ಪಡೆದುಕೊಳ್ಳುತ್ತಿಲ್ಲ ಎಂದಾದರೆ ಕಾರಿನ ಪವರ್ ಕಡಿಮೆಯಾಗಿದೆ. ಇದು ಎಂಜಿನ್‌ನ್ ಸಮಸ್ಯೆಯನ್ನು ಸೂಚಿಸುತ್ತಿದೆ.

ಎಂಜಿನ್‌ನಲ್ಲಿ ಕಿಡಿ
ಕಾರು ಸ್ಟಾರ್ಟ್ ಮಾಡಿದಾಗ ಕಾರಿನ ಪ್ಲಗ್, ಸ್ಪಾರ್ಕ್ ಹಾಗೂ ವೈಯರಿಂಗ್‌ನಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡರೆ ಅಪಾಯದ ಸೂಚನೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.

ಆಯಿಲ್ ಸ್ಪಾರ್ಕ್ ಪ್ಲಗ್
ಪೆಟ್ರೋಲ್ ಎಂಜಿನ್‌ಗಳಲ್ಲಿ ಆಯಿಲ್ ಸ್ಪಾರ್ಕ್ ಪ್ಲಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಯಿಲ್ ಲೀಕೇಜ್ ಇದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಎಂಜಿನ್ ಬ್ರೇಕ್
ಡ್ರೈವಿಂಗ್ ವೇಳೆ ಚಾಲನಕ ಆಜ್ಞೆಗಳನ್ನು ಎಂಜಿನ್ ಸರಿಯಾಗಿ ಪಾಲಿಸುತ್ತಿಲ್ಲ ಎಂದೆನಿಸಿದರೆ ಪರಿಶೀಲನೆ ಅಗತ್ಯ. ಇಳಿಜಾರು ಪ್ರದೇಶದಲ್ಲಿ ಕಾರು ಚಲಿಸುತ್ತಿರುವಾಗ ಬ್ರೇಕ್ ಹಾಕದೇ ಕಾರಿನ ವೇಗ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂದರೆ ಮೆಕಾನಿಕ್ ಮೂಲಕ ಪರಿಶೀಲನೆ ಅಗತ್ಯ,

click me!