ಸಾಡೇಸಾತಿ ಶನಿ ಪ್ರೀತಿಸುವವರನ್ನು ದೂರ ಮಾಡತ್ತೆ. ಆಗ ಏನು ಮಾಡಬೇಕು?
ಸಾಡೇಸಾತಿ ಎನ್ನೋದು ಎಂಥವನನ್ನೂ ಒಮ್ಮೆ ನಡುಗಿಸುತ್ತದೆ ಅಂತ ಹೇಳ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಶನಿ ನಮ್ಮ ಜನ್ಮ ರಾಶಿಗೆ ಬರುತ್ತಾನೆ. ಇದರಲ್ಲಿ ಸಾಕಷ್ಟು ವಿಧಗಳಿವೆ. ಪಂಚಮ ಶನಿ, ಅಷ್ಟಮ ಶನಿ ಎಂದು ಹೇಳುತ್ತಾರೆ. ಸಾಡೇಸಾತಿ ಎಂದರೆ ಜನ್ಮ ರಾಶಿಯಲ್ಲಿ ಏಳೂವರೆ ವರ್ಷಗಳ ಕಾಲ ಶನಿ ಇರುತ್ತಾನೆ. ಈ ಟೈಮ್‌ನಲ್ಲಿ ಶನಿ ಸಿಕ್ಕಾಪಟ್ಟೆ ಪಾಠ ಕಲಿಸುತ್ತಾನೆ ಎನ್ನುತ್ತಾರೆ. ಆಚಾರ್ಯ ಅರುಣ್ ಪ್ರಕಾಶ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2036 ರ ವರೆಗೆ ಶನಿ ಸಾಡೇಸಾತಿ ಯಾವ ರಾಶಿಯ ಮೇಲಿದೆ, ಯಾವ ರಾಶಿಗೆ ಶನಿ ಆಶೀರ್ವಾದ ಇದೆ
ಪ್ರೀತಿಸಿದವರನ್ನೇ ದೂರ ಮಾಡ್ತಾನೆ!
"ಸಾಧ್ಯ ಆದಷ್ಟು ಸಂದೇಹ ಪಡದೆ, ಅರ್ಥಮಾಡಿಕೊಳ್ಳದೆ ದೂರ ಆಗ್ತಾರೆ. ನಮಗೆ ಹತ್ತಿರ ಆದವರನ್ನು ಕಳೆದುಕೊಂಡಿರುತ್ತೇವೆ. ಹಿಂದೆ ತಿರುಗಿ ನೋಡಿದಾಗ ಅದರ ಹಿಂದೆ ದೊಡ್ಡ ಘಟನೆ ಆಗಿರೋದಿಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳೋದಿಕ್ಕೆ ಇಗೋವನ್ನು ಬದಿಗಿಟ್ಟು ಬದುಕಬೇಕು. ಸರಿಯಾದ ವಿಷಯಗಳನ್ನು ಉಳಿಸಿಕೊಳ್ಳಲು ನಾವೇ ಸರಿ ಎನ್ನೋದನ್ನು ಬಿಟ್ಟು ಬದುಕಬೇಕು. ಯಾರಿಗೆ ಜಾಸ್ತಿ ಇಗೋ ಇರುತ್ತದೆಯೋ ಅಂಥವರಿಗೆ ಸಂಬಂಧಗಳನ್ನು, ಸಂಪತ್ತನ್ನು ದೂರ ಮಾಡಿ, ಹೊಡೆದು ಬಡೆದು ಹೇಳಿಕೊಟ್ಟು ಶನಿ ಹೋಗ್ತಾನೆ. ಆದರೆ ಆಗ ಸಮಯ ಮೀರಿರುತ್ತದೆ. ಕ್ಷುಲ್ಲಕ ಕಾರಣಕ್ಕೆ ನಾವು ದೂರ ಹೋದರೂ ಕೂಡ ಮತ್ತೆ ಒಂದಾಗದೆ ಇರೋವಷ್ಟರ ಮಟ್ಟಿಗೆ ದೂರ ಹೋಗಿರುತ್ತೇವೆ" ಎಂದು ಅರುಣ್ ಪ್ರಕಾಶ್ ಹೇಳಿದ್ದಾರೆ.
ಸಂಬಂಧದ ವಿಷಯದಲ್ಲಿ ಒಬ್ಬರಿಗೆ ಇನ್ನೊಬ್ಬರು ಅರ್ಥ ಆಗೋದಿಕ್ಕೆ ತಿಕ್ಕಾಟಗಳು ಅಗತ್ಯವಿದೆ. ಚಿನ್ನ ಎಷ್ಟು ಕುದಿಯುತ್ತದೆಯೋ ಅಷ್ಟು ಗಟ್ಟಿ ಆಗುವುದು. ಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಇರುವವರು ಮಾತ್ರ ಮುಂದೆ ಹೋಗುತ್ತಾರೆ.
ಶನಿ ಮೀನ ರಾಶಿಯಲ್ಲಿ, ಮಾರ್ಚ್ 29ರಿಂದ ಈ ರಾಶಿಗೆ ಅದೃಷ್ಟ, ಈ ರಾಶಿಗೆ ಶನಿ ಸಾಡೇಸಾತಿ ಆರಂಭ
ಏನು ಮಾಡಬೇಕು?