ಸಾವಿಗೆ 10 ನಿಮಿಷಗಳ ಮೊದಲು ಏನಾಗುತ್ತೆ? ಹೃದಯ, ಮೆದುಳು ಬಳಿಕ ಕೊನೆಗೆ ನಿಲ್ಲುವ ಅಂಗ ಯಾವುದು?

Published : Jul 02, 2026, 09:55 PM IST
What happens ten minutes before a person death ?

ಸಾರಾಂಶ

ವ್ಯಕ್ತಿಯು ಸಾಯುವ ಕೊನೆಯ ಕ್ಷಣಗಳಲ್ಲಿ ದೇಹದೊಳಗೆ ಆಗುವ ಜೈವಿಕ ಬದಲಾವಣೆಗಳನ್ನು ವೈದ್ಯಕೀಯ ವಿಜ್ಞಾನ ವಿವರಿಸುತ್ತದೆ. ಇದೇ ವೇಳೆ, ಗರುಡ ಪುರಾಣದ ಪ್ರಕಾರ ಯಮದೂತರು ಕಾಣಿಸಿಕೊಳ್ಳುತ್ತಾರೆ ಎಂಬ ಧಾರ್ಮಿಕ ನಂಬಿಕೆಯ ಕುರಿತು ಈ ಲೇಖನವು ಬೆಳಕು ಚೆಲ್ಲುತ್ತದೆ.

ಸಾವು ಎಂದರೆ ಎಲ್ಲರಿಗೂ ಒಂದು ರೀತಿ ಭಯ. ಅದಕ್ಕೆ ಕಾರಣ ಸತ್ತ ಮೇಲೆ ಏನಾಗುತ್ತದೆ ಅನ್ನೋ ಭಯ, ಸ್ವರ್ಗ-ನರಕಗಳ ಭಯ. ಆದರೆ ಒಬ್ಬ ವ್ಯಕ್ತಿ ಸಾಯುವ ಕೊನೆ ಕ್ಷಣಗಳಲ್ಲಿ ಏನಾಗುತ್ತದೆ ಎಂಬುದರ ಕುರಿತು ವಿಜ್ಞಾನ ಮತ್ತು ಧರ್ಮ ಎರಡೂ ವಿಭಿನ್ನ ವಿವರಣೆಗಳನ್ನು ನೀಡುತ್ತವೆ. 

ಮನುಷ್ಯನ ದೇಹ ಯಾವಾಗ ಕೆಲಸ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತೋ ಆಗ ಅರ್ಥಾತ್ ಒಬ್ಬ ವ್ಯಕ್ತಿ ಸಾಯುವ ಕೊನೆ ಕ್ಷಣಗಳಲ್ಲಿ ದೇಹದೊಳಗೆ ಏನೆಲ್ಲ ಜೈವಿಕ ಬದಲಾವಣೆಗಳು ಆಗುತ್ತವೆ ಎಂಬುದನ್ನು ವೈದ್ಯಕೀಯ ತಜ್ಞರು ವಿವರಿಸಿದರೆ, ಧಾರ್ಮಿಕ ಸಂಪ್ರದಾಯಗಳು ಆತ್ಮವು ಈ ಲೋಕವನ್ನು ಬಿಡುವ ಮೊದಲು ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಎಂದು ನಂಬುತ್ತದೆ. ಜನರು ಸಾಯುವ ಮೊದಲು ನಿಜವಾಗಿಯೂ ಯಮರಾಜನನ್ನು ನೋಡುತ್ತಾರೆಯೇ ಎಂಬುದು ಬಹಳಷ್ಟು ಜನರ ಪ್ರಶ್ನೆ. ಈ ಪ್ರಶ್ನೆಗೆ ವೈದ್ಯಕೀಯ ವಿಜ್ಞಾನ ಮತ್ತು ಧರ್ಮ ಏನು ಉತ್ತರ ಕೊಡುತ್ತದೆ ಅಂತಾ ನೋಡೋಣ.

ವೈದ್ಯಕೀಯ ವಿಜ್ಞಾನವು ಸಾಯುವ ಪ್ರಕ್ರಿಯೆಗಳನ್ನ ಎರಡು ಹಂತಗಳಾಗಿ ವಿಂಗಡಿಸುತ್ತದೆ. ಮೊದಲನೆಯದು ಕ್ಲಿನಿಕಲ್ ಸಾವು, ಎರಡನೆಯದು ಜೈವಿಕ ಸಾವು. ವ್ಯಕ್ತಿ ಸಾಯುವ ಕೊನೆಯ ಕೆಲವು ನಿಮಿಷಗಳಲ್ಲಿ ಆಮ್ಲಜನಕದ ಮಟ್ಟಗಳು ವೇಗವಾಗಿ ಕುಸಿಯುತ್ತವೆ. ಆಗ ದೇಹದ ಪ್ರಮುಖ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ವ್ಯಕ್ತಿ ಕಣ್ಣು ತೆರೆದರೂ, ಉಸಿರಾಡುತ್ತಿದ್ದರೂ ಯಾವುದಕ್ಕೂ ಪ್ರತಿಕ್ರಿಯಿಸಲಾರ.

ಸಾಯುವ ಮುನ್ನ ಉಸಿರಾಟ ನಿಧಾನವಾಗುತ್ತೆ

ಒಬ್ಬ ವ್ಯಕ್ತಿಗೆ ಸಾವು ಸಮೀಪಿಸುತ್ತಿದ್ದಂತೆ, ಶ್ವಾಸಕೋಶಗಳು ಉಸಿರಾಟ ನಡೆ ನಡೆಸುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಅಲ್ಲದೇ ಆರೋಗ್ಯಂತ ಮನುಷ್ಯನ ಉಸಿರಾಟದಂತೆ ದೀರ್ಘವಾಗಿರುವುದಿಲ್ಲ. ನಿಧಾನವಾಗಿ ಅನಿಯಮಿತವಾಗುತ್ತದೆ. ಈ ವೇಳೆ ಉಸಿರಾಟದಲ್ಲಿ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಗೊರ್ ಗೊರ್ ಸದ್ದು ಕೇಳಿಬರುತ್ತಲ್ಲವೇ? ಆ ವಿಶಿಷ್ಟ ಶಬ್ದವನ್ನು ವೈದ್ಯರು ಡೆತ್ ರ್ಯಾಟಲ್ ಎಂದು ಕರೆಯುತ್ತಾರೆ.

ಹೃದಯ ಬಡಿತ ನಿಧಾನವಾಗುತ್ತ ನಿಲ್ಲುತ್ತದೆ

ವ್ಯಕ್ತಿಯು ಸಾಯುವ ಕೆಲವು ನಿಮಿಷಗಳ ಮುನ್ನ ಉಸಿರಾಟ ನಿಧಾನವಾಗುತ್ತಿದ್ದಂತೆ ಹೃದಯವೂ ನಿಧಾನವಾಗಿ ಪಂಪ್ ಮಾಡಲು ಪ್ರಾರಂಭಿಸುತ್ತದೆ. ಕೊನೆಗೆ ಸಂಪೂರ್ಣವಾಗಿ ನಿಲ್ಲುತ್ತದೆ. ಯಾವಾಗ ಹೃದಯ ಬಡಿತ ನಿಲ್ಲುತ್ತದೋ ಆಗ ಇಡೀ ದೇಹಕ್ಕೆ ರಕ್ತದ ಹರಿವು ನಿಂತು ಹೋಗುತ್ತೆ. ಇದು ದೇಹದ ಅಂಗಗಳಿಗೆ ಆಮ್ಲಜನಕದ ಪೂರೈಕೆ ಆಗದಂತೆ ತಡೆಯುತ್ತದೆ.

ಹೃದಯ ನಿಂತ ನಂತರೂ ಮೆದುಳು ಕೆಲಸ ಮಾಡುತ್ತೆ!

ಹೃದಯ ನಿಂತ ನಂತರವೂ ಮೆದುಳು ಕೆಲವು ನಿಮಿಷಗಳ ಕಾಲ ತನ್ನ ಕೆಲಸ ಮಾಡುತ್ತಲೇ ಇರುತ್ತದೆ ಎಂದರೆ ನಂಬುತ್ತೀರಾ? ಇದು ಹೇಗೆ ಸಾಧ್ಯ ಎನ್ನುತ್ತೀರಾ? ಹೌದು ವೈದ್ಯರ ಪ್ರಕಾರ, ಈ ಸಮಯದಲ್ಲಿ, ಆಮ್ಲಜನಕದ ಕೊರತೆಯು ಎಂಡಾರ್ಫಿನ್‌ಗಳಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಕೆಲವು ವೈಜ್ಞಾನಿಕ ಸಿದ್ಧಾಂತಗಳು DMT ಯಂತಹ ಸಂಯುಕ್ತಗಳು ಸಹ ಬಿಡುಗಡೆಯಾಗಬಹುದು ಎಂದು ಸೂಚಿಸುತ್ತವೆ, ಇದು ನಮ್ಮ ಆಲೋಚನೆ ಮತ್ತು ಗ್ರಹಿಕೆಯ ಮೇಲೆ ಪರಿಣಾಮ ಬೀರಬಹುದು.

ಈ ರಾಸಾಯನಿಕ ಬದಲಾವಣೆಗಳು ಎದ್ದುಕಾಣುವ ಭ್ರಮೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಸಾವಿನ ಸಮೀಪದ ಅನುಭವಗಳನ್ನು ಹೊಂದಿರುವ ಅನೇಕ ಜನರು ಪ್ರಕಾಶಮಾನವಾದ ಬೆಳಕು ಅಥವಾ ತಮ್ಮ ಜೀವನದ ಪ್ರಮುಖ ನೆನಪುಗಳನ್ನು ನೋಡುತ್ತಾರೆಂದು ವರದಿ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ.

ಮೆದುಳು ಕೆಲಸ ಮಾಡುವುದು ನಿಲ್ಲಿಸಿದಾಗ ಶ್ರವಣವು ಕೊನೆಯದಾಗಿ ನಿಲ್ಲುತ್ತೆ!

ನೋಡಿ, ಉಸಿರಾಟ ನಿಂತರೂ, ಹೃದಯ ಬಡಿತ ನಿಂತರೂ ಮೆದುಳು ಕೆಲವಷ್ಟು ಸಮಯ ಕಾರ್ಯನಿರ್ವಹಿಸುತ್ತೆ. ಮೆದುಳು ನಿಂತ ಮೇಲೂ ಶ್ರವಣವೂ ಕೆಲವು ಸಮಯ ಕೆಲಸ ಮಾಡುತ್ತಿರುತ್ತೆ! ಮನುಷ್ಯನ ಎಲ್ಲ ಅಂಗಗಳು ನಿಂತ ಬಳಿಕ ಕೊನೆಯದಾಗಿ ಶ್ರವಣ ಸಾಯುತ್ತೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ.

ಸಾವಿನ ಬಗ್ಗೆ ಗರುಡ ಪುರಾಣ ಏನು ಹೇಳುತ್ತೆ?

ಹಿಂದೂ ನಂಬಿಕೆಗಳ ಪ್ರಕಾರ, ಗರುಡ ಪುರಾಣದಲ್ಲಿ ವಿವರಿಸಿದಂತೆ, ಜೀವನದ ಅಂತಿಮ ಕ್ಷಣಗಳು ಸ್ಪಷ್ಟ ವಿಜ್ಞಾನದಿಂದ ವಿವರಿಸಲಾಗದ ಆಧ್ಯಾತ್ಮಿಕ ಘಟನೆಗಳಿಂದ ಹೇಳಲ್ಪಟ್ಟಿದೆ. ಅಂದರೆ ಧಾರ್ಮಿಕ ಗ್ರಂಥಗಳ ಪ್ರಕಾರ, ಯಮರಾಜನ ಕಡೆಯವರು ಸಾಯುತ್ತಿರುವ ವ್ಯಕ್ತಿಯ ಮುಂದೆ ಕಾಣಿಸಿಕೊಳ್ಳುತ್ತಾರಂತೆ, ಯಮದೂತರು ಸದ್ಗುಣಶೀಲ ಜೀವನವನ್ನು ನಡೆಸಿದವರಿಗೆ ಶಾಂತ ಮತ್ತು ದಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಆದರೆ ಪಾಪಗಳನ್ನು ಮಾಡಿದವರಿಗೆ ಅವರು ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದು ನಂಬಲಾಗಿದೆ.

ಇನ್ನಷ್ಟು ಧಾರ್ಮಿಕ ಗ್ರಂಥಗಳು ಜೀವನದ ಅಂತಿಮ ಕ್ಷಣಗಳಲ್ಲಿ ಇಂದ್ರಿಯಗಳು ಕ್ರಮೇಣ ಕಡಿಮೆಯಾಗುವುದನ್ನು ಸಹ ಉಲ್ಲೇಖಿಸುತ್ತವೆ. ಒಬ್ಬ ವ್ಯಕ್ತಿ ಸಾಯುವಾಗ ತನ್ನ ಸುತ್ತಲೂ ಇರುವ ಪ್ರೀತಿಪಾತ್ರರನ್ನ, ಅವರ ದುಃಖವನ್ನು ನೋಡಿ ಅನುಭವಿಸುತ್ತಿದ್ದರೂ ಅವರೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ.

PREV
Read more Articles on
click me!

Recommended Stories

ಸಾವಿನ ನಂತರ ಆತ್ಮದ 13 ದಿನಗಳ ನಿಗೂಢ ಪಯಣ ಹೇಗಿರುತ್ತೆ; ಗರುಡ ಪುರಾಣ ಏನು ಹೇಳುತ್ತೆ?
Mahalakshmi Yoga: ಕುಬೇರನ ಕೃಪೆಯಿಂದ ಮಹಾಲಕ್ಷ್ಮಿ ಯೋಗ, ಈ 4 ರಾಶಿಗಳಿಗೆ ದುಡ್ಡಿನ ಸುರಿಮಳೆ!