ಒಂದು ರಾಶಿಗೆ ಒಳ್ಳೆಯ ಫಲವೊಂದು ಒಲಿಯಲಿದೆ : ವಾರ ಭವಿಷ್ಯ

By Web Desk  |  First Published Oct 20, 2019, 7:16 AM IST

ಅಕ್ಟೋಬರ್ 20 ಭಾನುವಾರ, ಈ ಒಂದು ವಾರದ ಭವಿಷ್ಯ ಹೇಗಿದೆ. ನಿಮ್ಮ ರಾಶಿಗಳ  ಫಲಾ ಫಲ ಹೇಗಿದೆ? 


ಮೇಷ
ಮಕ್ಕಳಿಗೆ ಆಸಕ್ತಿ ಇರುವ ವಿಚಾರಗಳಿಗೆ
ಪ್ರೋತ್ಸಾಹಿಸಿ. ಇದರಿಂದ ಮಕ್ಕಳ ಗುರಿ ಸಾಧನೆಗೆ
ಅನುಕೂಲವಾಗಲಿದೆ. ಒಂದೇ ಏಟಿಗೆ ಎರಡು
ಹಕ್ಕಿಗಳು ಬೀಳಿಸುವ ತಾಕತ್ತು ನಿಮ್ಮಲ್ಲಿದೆ. ಇದೇ
ವಿಚಾರವನ್ನು ನೀವು ಕೆಲಸದಲ್ಲಿ ಅಳವಡಿಸಿಕೊಂಡರೆ ಪ್ರಗತಿ
ಕಾಣುವಿರಿ. ಮಹಿಳೆಯರಲ್ಲಿ ಒತ್ತಡ ಹೆಚ್ಚಲಿದೆ

ವೃಷಭ
ನೊಂದವರಿಗೆ ಹೆಗಲಾಗಿ ನಿಲ್ಲುವ ನಿಮಗೆ ಈ
ವಾರ ಹಣಕಾಸಿನ ವಿಚಾರದಲ್ಲಿ ಏರಿಳಿತಗಳು
ಹೆಚ್ಚಾಗಿ ಕಂಡುಬರಲಿದೆ. ಹಣಕಾಸಿನ ವ್ಯವಹಾ
ರದಲ್ಲಿ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದು
ಕೊಳ್ಳಿ. ಒಳ್ಳೆ ಆಲೋಚನೆಗಳು ನಿಮ್ಮ ಕೈ ಹಿಡಿಯಲಿದೆ.
ಬಂಧುಗಳಿಂದ ನಿಮಗೆ ಅಗತ್ಯ ಸಹಕಾರ ದೊರೆಯಲಿದೆ.

Tap to resize

Latest Videos

undefined

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!...

ಮಿಥುನ
ಒಬ್ಬರೊಂದಿಗೆ ಮಾತನಾಡುವಾಗ ಅಥವಾ
ಯಾವುದೇ ವಿಚಾರದಲ್ಲಿ ನಿರ್ಧಾರ
ತೆಗೆದುಕೊಳ್ಳುವಾಗ ಸಾವಿರ ಬಾರಿ ಯೋಚಿಸಿ
ಮುಂದುವರೆಯಿರಿ. ಇದರಿಂದ ಮುಂದಾಗುವ ಯಡವ
ಟ್ಟುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ. ನಿಮ್ಮ ಆತ್ಮಬಲವೇ
ನಿಮಗಿರುವ ಶ್ರೀರಕ್ಷೆ. ಜೈ ಎಂದು ಮುಂದೆಸಾಗಿ. 

ಕಟಕ
ಕೊಟ್ಟ ಕೈಗಳಿಗೆ ಪಡೆದು ಗೊತ್ತಿರುವುದಿಲ್ಲ ಎಂದು
ಹಿರಿಯರು ಹೇಳುತ್ತಾರೆ. ಆದರೆ ಕೆಲ ಸಂದರ್ಭ
ದಲ್ಲಿ ಏನನ್ನಾದರೂ ಇನ್ನೊಬ್ಬರಿಂದ ಪಡೆಯುವ
ಪರಿಸ್ಥಿತಿ ಬರುತ್ತೆ. ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿ.
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದು, ಶಿಕ್ಷಕ
ವರ್ಗದಿಂದ ಪೋಷಕರಿಗೆ ಪ್ರಶಂಸೆ ಸಿಗಲಿದೆ.

ಸಿಂಹ
ಸಂತಸದ ಸಂದರ್ಭದಲ್ಲಿ ಎಲ್ಲರೊಂದಿಗೂ
ಸಂತೋಷವಾಗಿರಿ. ಕೆಲವೊಮ್ಮೆ ದುಃಖ
ನುಂಗಿಕೊಂಡು ಬದುಕಬೇಕಾಗುತ್ತದೆ.
ಅದರಿಂದ ನಮ್ಮಲ್ಲಿ ಧೈರ್ಯ ಹೆಚ್ಚುತ್ತೆ. ಯಾರೇನೇ
ಎಂದರು ತಲೆಕೆಡಿಸಿಕೊಳ್ಳದಿರಿ. ವ್ಯಾಪಾರಿಗಳಿಗೆ ಲಾಭ.
ಮನೆಯವರ ಮಾತು ಕೇಳಿ ಬೇರೆ ಕೆಲಸಕ್ಕೆ ಮುಂದಾಗಿ.

ಕನ್ಯಾ
ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಲಿದೆ. ನಿಮ್ಮಲ್ಲಿನ
ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗಲಿದೆ.
ಪ್ರಯತ್ನಿ ನಿಮ್ಮದಾಗಿದ್ದರೆ ಒಂದಿಲ್ಲೊಂದು ದಿನ
ಉತ್ತಮ ಫಲ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ.
ವ್ಯಾಪಾರಿಗಳಿಗೆ ಈ ವಾರ ಭರ್ಜರಿ ಲಾಭ. ದೂರ
ಪ್ರಯಾಣದಿಂದ ಸುಸ್ತು ಇದ್ದರೂ ನೆಮ್ಮದಿ ಸಿಗಲಿದೆ

ತುಲಾ
ಕೆಲಸ ಕೆಲಸ ಎಂದು ಕುಟುಂಬದ ಕಡೆಗೆ ಗಮನ
ಕೊಡುವುದು ಕಡಿಮೆ ಮಾಡಬೇಡಿ. ಕೆಲಸ
ಯಾವಾಗಲೂ ಇದ್ದದ್ದೆ. ಆದರೆ ಕುಟುಂಬಕ್ಕೆ
ಸ್ವಲ್ಪ ಟೈಂ ಕೊಟ್ಟರೆ ಮನೆಯ ಎಲ್ಲರಿಗೂ ಸಂತೋಷ
ಆಗುತ್ತೆ. ಹಬ್ಬದ ಸಮಯವಾದ್ದರಿಂದ ಖರ್ಚು ಹೆಚ್ಚಿರುತ್ತೆ.
ನೋಡಿ ಕೊಂಡು ಖರ್ಚು ಮಾಡುವುದು ಒಳ್ಳೆಯದು.

ವೃಶ್ಚಿಕ
ಮೂರು ಹೊತ್ತು ತಿನ್ನುವ ಬಗ್ಗೆ ಯೋಚಿಸದೆ
ಕೆಲಸ ಕಾರ್ಯಗಳ ಬಗ್ಗೆಯೂ ಗಮನ ಕೊಡಿ.
ನಿಮ್ಮ ಕೆಲಸ ಇತರರಿಗೆ ಮೆಚ್ಚುಗೆಯಾಗು
ವಂತಿರಲಿ. ಅನಿರೀಕ್ಷಿತ ಘಟನೆಗಳು ನಡೆಯುವ ಸಂಭವ.
ನಿಮ್ಮನ್ನು ದೂರ ಮಾಡಿದವರೂ ನಿಮ್ಮನ್ನು ಹೊಗಳುವರು.
ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಧನಸ್ಸು
ಒಬ್ಬರನ್ನು ಮೋಸ ಮಾಡಿ ಕೊಳ್ಳೆ ಹೊಡೆದು
ತಿನ್ನುವುದಕ್ಕಿಂತ ನಿಯತ್ತಾಗಿ ದುಡಿದು ತಿನ್ನುವು
ದು ಒಳ್ಳೆಯದು. ಆಗ ತಿಂದಿದ್ದೂ ಮೈಗೆ
ಹತ್ತುತ್ತೆ. ಈ ವಿಚಾರ ನಿಮಗೆ ಗೊತ್ತಿದ್ದರೂ ಮಾಡಿದ
ತಪ್ಪನ್ನು ಮತ್ತೆ ಮತ್ತೆ ಮಾಡುವುದರಿಂದ ಏನೂ ಲಾಭವಿಲ್ಲ.

ಮಕರ
ನಿಮ್ಮನ್ನು ಇಲ್ಲಸಲ್ಲದೆ ದೂರ ತಳ್ಳಿದವರೂ
ಇಂದು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ
ಗಳಿವೆ. ದೊಡ್ಡ ಮನಸ್ಸು ಮಡಿ ಅವರನ್ನು
ಕ್ಷಮಿಸಿ ಮಿತ್ರತ್ವ ಬೆಳೆಸಿ. ಒಳ್ಳೆಯ ಗುಣಗಳು ಎಂದೂ
ಸೋಲುವುದಿಲ್ಲ. ಬಂಧುಗಳ ಆಗಮನ ಸಾಧ್ಯತೆ

ಕುಂಭ
ತಾನೊಂದು ಬಗೆದರೆ ವಿಧಿ ಇನ್ನೊಂದು
ಬಗೆಯಿತು ಎಂಬ ಮಾತಿದೆ. ಈಗಾದ ತಪ್ಪನ್ನು
ಸರಿಪಡಿಸುವುದು ಅಸಾಧ್ಯ. ಆದರೆ ಆದ
ತಪ್ಪಿನಿಂದ ತಿದ್ದಿಕೊಂಡು ಮುನ್ನಡೆಯಿರಿ. ಸೋಲು
ಗೆಲುವು ಬದುಕಿನಲ್ಲಿ ಸಿಹಿ ಕಹಿ ಇದ್ದಂತೆ. ಎರಡೂ
ಇದ್ದರೇನೆ ಜೀವನ ಸುಂದರವಾಗಿ ಕಾಣುತೆ

ಮೀನ
ಈ ವಾರ ನಿಮ್ಮ ಮೇಲೆ ಜವಾಬ್ದಾರಿ ಹಾಗೂ
ಒತ್ತಡ ಹೆಚ್ಚಾಗಿರಲಿದೆ. ಕೆಲಸದಲ್ಲಿ ಆದಷ್ಟು
ಜೋಪಾನವಾಗಿದ್ದಷ್ಟು ನಿಮಗೇ ಒಳ್ಳೆಯದು.
ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.
ವಾತಾವರಣದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ
ಏರುಪೇರು ಸಾಧ್ಯತೆ. ಶುಭ ಫಲ ದೊರೆಯಲಿದೆ.

click me!