ಮಿಥುನಕ್ಕೆ ವಾರಪೂರ್ತಿ ಶುಭ : ಉಳಿದ ರಾಶಿಗಳಿಗೆ ವಾರ ಭವಿಷ್ಯ

By Web Desk  |  First Published Jun 16, 2019, 7:15 AM IST

ಈ ವಾರ ಯಾವ ರಾಶಿಗೆ ಯಾವ ಫಲ, ತಿಳಿಯಿರಿ ಭವಿಷ್ಯ ಫಲದ ಮೂಲಕ 


ಮಿಥುನಕ್ಕೆ ವಾರಪೂರ್ತಿ ಶುಭ : ಉಳಿದ ರಾಶಿಗಳಿಗೆ ವಾರ ಭವಿಷ್ಯ

ಮೇಷ
ಅವಕಾಶ ಸಿಕ್ಕರೆ ಜಗತ್ತನ್ನೇ ಗಿರಿಗಿರಿ
ತಿರುಗಿಸುವಂಥವರು ನೀವು. ಈ ಸರ್ವಾಧಿಕಾರಿ
ಧೋರಣೆಗೆ ಈ ವಾರ ಪೆಟ್ಟು ಬೀಳಬಹುದು.
ಸಾಂಸಾರಿಕವಾಗಿ ಪರಿಸ್ಥಿತಿ ಕಠಿಣವಾಗಿದೆ. ಹಣ ಬಂದಷ್ಟೇ
ಬೇಗ ಖರ್ಚಾಗುತ್ತದೆ. ದುಬಾರಿ ವಸ್ತು ಖರೀದಿಸುವಿರಿ.
ಸವಾಲುಗಳೇ ಹೆಚ್ಚು. ಧೈರ್ಯವಾಗಿ ಎದುರಿಸಿ. 

Tap to resize

Latest Videos

undefined

ವೃಷಭ
ಸರ್ವಕ್ಕೂ ದುಡ್ಡೇ ಕಾರಣ ಅಂತ ಈ ಕ್ಷಣ
ನಿಮಗನಿಸಬಹುದು. ಆದರೆ ಅದು ಸತ್ಯಅಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಹಣದ ವಿಷಯದಲ್ಲಿ
ಹೆಣಗಾಡಬೇಕಾದೀತು. ಖರ್ಚಿನಲ್ಲಿ ಹಿಡಿತವಿರಲಿ. ಕೆಲಸದ
ಒತ್ತಡ ಹೆಚ್ಚು. ಮಾಧ್ಯಮ, ಮನೋರಂಜನಾ
ಕ್ಷೇತ್ರದವರಿಗೆ ಹೊಸ ಅವಕಾಶ ಸಿಗಬಹುದು. 

ಮಿಥುನ
ನಿಮ್ಮ ಉತ್ಸಾಹ, ಮಹತ್ವಾಕಾಂಕ್ಷೆ, ವ್ಯಕ್ತಿತ್ವ
ಎಲ್ಲದಕ್ಕೂ ಈ ವಾರ ಮಹತ್ವ ಸಿಗಲಿದೆ.
ವೈಯುಕ್ತಿಕ ವಿಚಾರಗಳಿಗೆ ಖುಷಿ ಹೆಚ್ಚಲಿದೆ.
ಹೊಸ ಅವಕಾಶಗಳು ಸಿಗಬಹುದು. ಸಣ್ಣಪುಟ್ಟ ಆರ್ಥಿಕ,
ಆರೋಗ್ಯ ಸಮಸ್ಯೆಗಳಿವೆ. ಪ್ರೀತಿಪಾತ್ರರೊಂದಿಗಿರುವಾಗ
ಮಾತಿನಲ್ಲಿ ಹಿಡಿತವಿರಲಿ. ವಾರವಿಡೀ ಸಂತಸ. 

ಕಟಕ
ಭಾವನೆಗಳ ಮೇಲೆ ಹಿಡಿತವಿರಲಿ. ಈ ವಾರ
ಪರಿಸ್ಥಿತಿ ಕಠಿಣವಿದೆ. ವೈಯುಕ್ತಿಕ ಬದುಕಿನ ಬಗ್ಗೆ
ಎಚ್ಚರವಿರಲಿ. ಔದ್ಯೋಗಿಕವಾಗಿ ಹೊಸ
ಅವಕಾಶ ಬರಬಹುದು. ಸಹೋದ್ಯೋಗಿಗಳೊಂದಿಗೆ
ವ್ಯವಹರಿಸುವಾಗ ಜಾಗೃತೆ. ಈ ತಿಂಗಳಿಡೀ ಎಷ್ಟು
ಎಚ್ಚರವಿದ್ದರೂ ಸಾಲದು.

ಸಿಂಹ
ನಿಮ್ಮ ವ್ಯಕ್ತಿತ್ವದಲ್ಲಿರುವ ಗೊಂದಲ, ಭಯ,
ಅಸ್ಥಿರತೆಗೆ ಗುಡ್‌ಬೈ ಹೇಳೋ ಟೈಮ್ ಬಂತು.
ಈ ವಾರ ಫ್ರೆಂಡ್ಸ್ ಜೊತೆಗೆ ಹೆಚ್ಚೆಚ್ಚು
ಬೆರೆಯುವಿರಿ. ಮಕ್ಕಳು ಖುಷಿ ಹೆಚ್ಚಿಸುತ್ತಾರೆ. ಹೊಸಬರು
ಗೆಳೆಯರಾಗುತ್ತಾರೆ. ಕೆಲಸದಲ್ಲಿ ಸ್ಪರ್ಧೆ ಹೆಚ್ಚಬಹುದು.
ನಿಮ್ಮ ಸಹಕಾರಕ್ಕೆ ಬೆಲೆ ಸಿಗುವುದು. 

ಕನ್ಯಾ
ನಿಮ್ಮ ಕೆರಿಯರ್‌ನ ಬಗ್ಗೆ ಫೋಕಸ್ ಮಾಡೋ
ಹೊತ್ತಿದು. ಹೊಸ ಜವಾಬ್ದಾರಿಗಳು
ಹೆಗಲೇರಬಹುದು. ಉದ್ಯೋಗಕ್ಕಾಗಿ ವಿದೇಶಿ
ಪ್ರಯಾಣ ಸಾಧ್ಯತೆ. ಉದ್ಯೋಗದಲ್ಲಿ ಹೊಸ
ಅವಕಾಶಗಳು ಬರಬಹುದು, ಗೆಳೆಯರೂ ಸಿಗಬಹುದು.
ತೀರ್ಥಯಾತ್ರೆ ಮಾಡುವ ಸಾಧ್ಯತೆ. 

ತುಲಾ
ಈ ವಾರವಿಡೀ ಪ್ರಮಾಣದಲ್ಲಿ ಕಳೆಯುವಿರಿ.
ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಿ ಪ್ರವಾಸದ
ಯೋಗವಿದೆ. ನಿಮ್ಮ ಒಡನಾಡಿಗಳ ಜೊತೆಗೆ
ಸೌಹಾರ್ದತೆ ಹೆಚ್ಚಬಹುದು. ಆಧ್ಯಾತ್ಮದಲ್ಲಿ ಆಸಕ್ತಿ
ಬರಬಹುದು. ಬರವಣಿಗೆ, ಮಾಧ್ಯಮ ಕ್ಷೇತ್ರದವರಿಗೆ
ಉತ್ತಮ. ಉದ್ಯೋಗದಲ್ಲಿ ಒತ್ತಡ ಹೆಚ್ಚಬಹುದು. 

ವೃಶ್ಚಿಕ
ಆರ್ಥಿಕವಾಗಿ ಇನ್ನಷ್ಟೇ ನೀವು ಬಲಗೊಳ್ಳಬೇಕಿದೆ.
ಖರ್ಚು ಮಾಡುವಾಗ ಎರಡೆರಡು ಸಲ
ಯೋಚಿಸಿ. ಈ ವಾರ ಕೊಡು ಕೊಳ್ಳುವಿಕೆಯಿಂದ
ಆದಷ್ಟು ಹೊರಗಿರಿ. ಪಾಲುದಾರಿಕೆಯಲ್ಲಿ ಮಾಡಬೇಕಾದ
ವಹಿವಾಟುಗಳು ಬರಬಹುದು. ಹೊಸ ಜನರ
ಸಂಪರ್ಕವಾಗಲಿದೆ. ಸಾಂಸಾರಿಕವಾಗಿ ನೆಮ್ಮದಿ. 

ಧನಸ್ಸು
ವೈಯುಕ್ತಿಕ ಹಾಗೂ ಔದ್ಯೋಗಿಕವಾಗಿ
ಯೋಚನೆ ಹೆಚ್ಚಬಹುದು. ಹೊಸ ಸಂಬಂಧಗಳ
ಬಗ್ಗೆ ಎಚ್ಚರಿಕೆಯಿಂದಿರಿ. ತುರ್ತಾಗಿ ಹಣ
ಬೇಕಾಗಬಹುದು. ಆರ್ಥಿಕವಾಗಿ ಹಿನ್ನಡೆಯಿದೆ.
ಸಂಗಾತಿಯ ಜೊತೆಗೆ ಚರ್ಚಿಸಿ ಮುಂದುವರಿಯಿರಿ.

ಮಕರ
ಕೆಲಸ, ಆರೋಗ್ಯ ಮತ್ತು ಸಹೋದ್ಯೋಗಿಗಳ
ಬಗ್ಗೆ ಚಿಂತಿಸಬೇಕಾದೀತು. ಹೊಸ ಪ್ರಾಜೆಕ್ಟ್
ಹಾಗೂ ಸಹೋದ್ಯೋಗಿಗಳು ಸಿಗುತ್ತಾರೆ.
ಆತ್ಮೀಯರೊಂದಿಗೆ ಸಂಬಂಧ ಹದಗೆಡಬಹುದು.
ಹಣಕಾಸಿನ ವಿಷಯದಲ್ಲಿ ಅಂಥಾ ತೃಪ್ತಿ ಇರಲ್ಲ. 

ಕುಂಭ
ಕ್ರಿಯೇಟಿವ್ ಕ್ಷೇತ್ರದಲ್ಲಿ ಬೆಳೆಯುವ ಕಾಲ.
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸಕಾಲ.
ರಿಯಲ್ ಎಸ್ಟೇಟ್ ಡೀಲ್‌ಗಳು ಬರಬಹುದು.
ಮಕ್ಕಳು ಹಾಗೂ ಯುವ ಜನರೊಂದಿಗೆ ಸಮಯ
ಕಳೆಯುವಿರಿ. ನಿಮ್ಮ ಲೈಫ್‌ಸ್ಟೈಲ್‌ಅನ್ನು
ಉತ್ತಮಪಡಿಸುವ ಅವಕಾಶ. 

ಮೀನ
ಹೊಸ ಸಂಬಂಧಗಳು ಖುಷಿ ಹೆಚ್ಚಿಸಲಿವೆ.
ಆರಾಮವಾಗಿ ನೆಮ್ಮದಿಯಿಂದಿರುತ್ತೀರಿ.
ಅಂದುಕೊಂಡ ಕೆಲಸಗಳೆಲ್ಲ ಮುಗಿಯುತ್ತವೆ.
ಹೊಸ ಸವಾಲುಗಳು ಬರಬಹುದು. ಆದರೆ ಅವುಗಳನ್ನು
ಯಶಸ್ವಿಯಾಗಿ ಮುಗಿಸುತ್ತೀರಿ. 

click me!