ವಾರ ಭವಿಷ್ಯ: ಈ ರಾಶಿಯವರಿಗೆ ಆದಾಯದಲ್ಲಿ ಏರಿಕೆಯಾಗಲಿದೆ

By Suvarna News  |  First Published Feb 2, 2020, 7:12 AM IST

ಈ ವಾರ ಯಾವ ರಾಶಿಗೆ ಯಾವ ಫಲವಿದೆ. ತಿಳಿಯಿರಿ ರಾಶಿ ಫಲದಲ್ಲಿ


ಮೇಷ: ಈ ವಾರ ಹೊಸ ಕೆಲಸ ಆರಂಭಿಸಬೇಕು ಎನ್ನುವವರಿಗೆ ಉತ್ತಮ ಅವಕಾಶಗಳಿವೆ. ಕೈಯಲ್ಲಿ ಹಣವಿದೆ ಎಂದು ನೀರಿನಂತೆ ಖರ್ಚು ಮಾಡದಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಮಹಿಳೆಯರಿಗೆ ಕೊಂಚ ಕಿರಿಕಿರಿ ಎದುರಾಗುವ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳ ಓದಿನಲ್ಲಿ ಪ್ರಗತಿ.

ವೃಷಭ: ಆತ್ಮವಿಶ್ವಾಸ ಹೆಚ್ಚಲಿದ್ದು, ಅಂದುಕೊಂಡ ಕೆಲಸಗಳು ಸೂಸೂತ್ರವಾಗಿ ನೆರವೇರಲಿವೆ. ಸಂಕಷ್ಟಗಳು ಎದುರಾಗಬಹುದು, ಹಾಗಾಗಿ ಯಾರೊಂದಿಗೂವಾದ ಬೇಡ. ಪರೀಕ್ಷೆಗಳು ಈ ವಾರ ಎದುರಾಗುವ ಸಾಧ್ಯತೆ, ಆದರೆ ಅದನ್ನು ಉತ್ತಮವಾಗಿ ಎದುರಿಸಲಿದ್ದೀರಿ. ಮಕ್ಕಳು ನಿಮಗೆ ಗೌರವ ತಂದುಕೊಡಲಿದ್ದಾರೆ.

Tap to resize

Latest Videos

undefined

ಕಟಕ: ಮಾಡಿದ ಕೆಲಸಗಳಿಗೆ ನಿರೀಕ್ಷೆಯಂತೆ ಉತ್ತಮ ಫಲ ಸಿಗಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾದರೂ ಅದನ್ನು ಯಶಸ್ವಿಯಾಗಿಯೇ ಪೂರೈಸಲಿದ್ದೀರಿ. ನಿಮ್ಮ ಕೆಲಸಗಳು ಇತರರಿಗೆ ಮಾದರಿಯಾಗಲಿವೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ವಾರಾಂತ್ಯಕ್ಕೆ ಸಣ್ಣ ಕಹಿ ಸುದ್ದಿ ಕೇಳುವಿರಿ. ಧೈರ್ಯವಿದ್ದರೆ ಎಲ್ಲವೂ ಸುಖಾಂತ್ಯ.

ಸಿಂಹ: ಯಾರನ್ನೂ ಅತಿಯಾಗಿ ನಂಬದಿರಿ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಚಾಣಾಕ್ಷ ನಡಿಗೆ ನಿಮ್ಮದಾಗಲಿದೆ. ಉತ್ತಮ ರೀತಿಯಲ್ಲಿ ಮನೆ ನಿರ್ವಹಣೆ. ಸುತ್ತಲಿನವರ ಪ್ರೀತಿಗೆ ಭಾಜನರಾಗುವಿರಿ. ಒಳ್ಳೆಯ ಸ್ನೇಹಿತರು ನಿಮ್ಮ ಸಹಕಾರಕ್ಕೆ ನಿಲ್ಲಲಿದ್ದಾರೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಾರದ ಮಧ್ಯೆ ಒತ್ತಡದ ಕೆಲಸ ಬರಲಿದ್ದು,ಆದಷ್ಟು ಧ್ಯಾನ ಮಾಡಿ ಮನಸ್ಸಿಗೆ ನೆಮ್ಮದಿ ತಂದು ಕೊಳ್ಳುವುದು ಉತ್ತಮ. ವಾರಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಶುಭಫಲ.

ಪಂಚಾಂಗ ಫಲ: ಇಂದಿನ ದಿನ ವಿಶೇಷಗಳಿವು!

ತುಲಾ: ಸ್ನೇಹಿತರ ಜೊತೆಗೂಡಿ ಒಳ್ಳೆಯ ಕೆಲಸಕ್ಕೆ ಮುಂದಾಗುವಿರಿ. ನಿಮ್ಮಿಂದ ಇನ್ನೊಬ್ಬರ ಜೀವನದಲ್ಲಿ ಸಂತಸ ಮೂಡಲಿದೆ. ಕಂಕಣ ಭಾಗ್ಯ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅಧ್ಯಾತ್ಮದಲ್ಲಿ ಹೆಚ್ಚು ಒಲವು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮಕ್ಕಳಿಂದ ನೆಮ್ಮದಿ ನೆಲೆಸಲಿದೆ.

ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಈ ವಾರ ನೀವು ಅಂದುಕೊಂಡ ಕೆಲಸಗಳು ಸೂಸೂತ್ರವಾಗಿ ನೆರವೇರಲಿವೆ. ಮನಸ್ಸಿನಲ್ಲಿ ಗೊಂದಲ. ಮಹಿಳೆಯರಿಗೆ ಉತ್ತಮ ಲಾಭ ಸಿಗಲಿದೆ.

ಧನಸ್ಸು: ಯಾವುದೇ ಗೊಂದಲಕ್ಕೆ ಒಳಗಾಗದೇ ಅಂದು ಮಕೊಂಡ ಕಾರ್ಯಗಳನ್ನು ಮಾಡಿ ಮುಗಿಸಿ. ಮಾತಿಗೆ ಕಡಿವಾಣ ಹಾಕಬೇಕು. ಆದಾಯದಲ್ಲಿ ಏರಿಕೆ. ಖರ್ಚುಗಳ ಮೇಲೆ ಹಿಡಿತ ಸಾಧಿಸಿದರೆ ಒಳ್ಳೆಯದು. ಅವಕಾಶಗಳು ಹೆಚ್ಚಾಗಲಿವೆ. ತಾಳ್ಮೆಯಿಂದ ಮುಂದೆ ಸಾಗಿ.

ಮಕರ: ಪ್ರೀತಿ ಪಾತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ. ಸ್ನೇಹಿತರೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳದಿರಿ. ದೂರ ಪ್ರಯಾಣ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪೋಷಕರ ಸಲಹೆ, ಸಹಕಾರ ಅಗತ್ಯವಾಗಲಿದೆ.

ಕುಂಭ: ಸಣ್ಣ ವಿಚಾರಗಳಿಂದ ಮನೆಯಲ್ಲಿ ಗೊಂದಲ ಎದುರಾಗಬಹುದು. ಆದಷ್ಟು ತಾಳ್ಮೆ ಕಂಡುಕೊಳ್ಳಿ. ನಿಮ್ಮ ನೇರ ಮಾತುಗಳೇ ನಿಮಗೆ ಮುಳು ವಾಗಬಹುದು. ಮಹಿಳೆಯರಿಂದ ಮನೆ ನಿರ್ವಹಣೆ ಈ ವಾರ ಉತ್ತಮವಾಗಿ ನಡೆಯಲಿದೆ. ಹಿರಿಯರೊಂದಿಗೆ ದೇವಸ್ಥಾನ ಭೇಟಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಮೀನ: ನಿಮ್ಮದಲ್ಲದ ತಪ್ಪಿಗೆ ನೀವು ಹೊಣೆರರಾಗಲಿದ್ದೀರಿ. ವಾರಾಂತ್ಯದಲ್ಲಿ ಎಲ್ಲವೂ ಸರಿಯಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದ್ದು, ಹೆಚ್ಚು ನೀರು ಕುಡಿಯಿರಿ. ಹೊಸ ಕೆಲಸಗಳು ಬಂದಾಗ ಅದನ್ನು ತಿರಸ್ಕರಿಸದಿರಿ. ಹಿರಿಯರ ಸಲಹೆ ನಿಮಗೆ ಮಾರ್ಗದರ್ಶನ ತೋರಲಿದೆ. ಜಯ ಸುಲಭಕ್ಕೆ ಸಿಗದು.

click me!