ವಾರ ಭವಿಷ್ಯ: ಈ ರಾಶಿಯವರ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದೆ

By Suvarna News  |  First Published Jan 19, 2020, 7:21 AM IST

ಈ ವಾರ ಯಾವ ರಾಶಿಗೆ ಯಾವ ಫಲವಿದೆ. ತಿಳಿಯಿರಿ ರಾಶಿ ಫಲದಲ್ಲಿ 


ಮೇಷ: ನೀವು ನಂಬಿರುವ ವ್ಯಕ್ತಿಗಳಿಂದಲೇ ನಿಮಗೆ ತೊಂದರೆಯುಂಟಾಗಲಿದೆ. ಬರುವ ಕಷ್ಟಕ್ಕೆ ಹೆದರುವುದು ಬೇಡ. ನಿಮ್ಮ ಸಹಾಯಕ್ಕೆ ಸಾಕಷ್ಟು ಮಂದಿ ಮುಂದೆ ಬರಲಿದ್ದಾರೆ. ಈ ವಾರ ನಿಮ್ಮ ಬಾಳಿಗೆ ಶುಭ ಕಾರಕ. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಬೇಡ. ಹೆಚ್ಚು ಆತ್ಮವಿಶ್ವಾಸ ಅಪಾಯಕಾರಿ. ತಾಳ್ಮೆ ಇರಲಿ.

ವೃಷಭ: ಮತ್ತೊಬ್ಬರನ್ನು, ಅವರ ಶಕ್ತಿ ಸಾಮರ್ಥ್ಯಗಳನ್ನು ಅಳೆದು ತೂಗಿ ನೋಡುವುದು ಬೇಡ. ನಿಮ್ಮಲ್ಲಿನ ಗುಣಗಳೇ ನಿಮಗೆ ಮಾನ್ಯತೆ ದೊರಕಿಸಿಕೊಡಲಿವೆ. ಹಣಕಾಸಿನ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಇರಲಿ. ಮನೆಗೆ ಬಂಧುಗಳು ಆಗಮಿಸಲಿದ್ದಾರೆ. ಕೈ ಸಾಲಗಳು ಹೆಚ್ಚಾಗಲಿವೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗಲಿದೆ.

Tap to resize

Latest Videos

undefined

ಮಿಥುನ: ಯಾರಿಗೂ ಅಂಜುವ ಅವಶ್ಯಕತೆ ಇಲ್ಲ. ನಿಮ್ಮ ನಿರ್ಧಾರಗಳಿಗೆ ಬದ್ಧವಾಗಿ ನೀವು ನಡೆಯುವಿರಿ. ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆ ಯುವ ಸಮಯವಿದು. ಹೆಚ್ಚು ಉತ್ಸಾಹದಿಂದ ವಾರ ವೀಡೀ ಕೆಲಸ ಮಾಡುವಿರಿ. ಬಂಧುಗಳೊಂದಿಗೆ ಆತ್ಮೀಯತೆ ಸಾಧ್ಯವಾಗಲಿದೆ. ನಿಮ್ಮನ್ನು ನೀವು ನಂಬಿ ನಡೆಯಿರಿ.

ಕಟಕ: ನಿಮ್ಮ ಭಾವನೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯಲಿದೆ. ನಿಮ್ಮ ನೆಚ್ಚಿನ ವ್ಯಕ್ತಿ ಹೆಚ್ಚು ಹತ್ತಿರವಾಗುವನು. ಗೃಹಿಣಿಯರಿಗೆ ಹೆಚ್ಚು ಅನುಕೂಲಗಳು ಆಗಲಿವೆ. ತಂದೆಯ ಆರೋಗ್ಯ ಚೇತರಿಕೆಯಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ. ಖರ್ಚುಗಳು ಅಧಿಕವಾಗಲಿವೆ. ಅಂತೆಯೇ ಆದಾಯವೂ ಹೆಚ್ಚಲಿದೆ.

ಸಿಂಹ: ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ವಾರದಲ್ಲಿ ಹೆಚ್ಚು ದಿನ ಮನೆಯಿಂದ ಹೊರಗೇ ಇರಲಿದ್ದೀರಿ. ಹೊಸ ಕೆಲಸಗಳು ಕೈಗೂಡಲಿವೆ. ವಾರಾಂತ್ಯದಲ್ಲಿ ನೆಮ್ಮದಿ ನೆಲೆಗೊಳ್ಳಲಿದೆ. ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಆಂಜನೇಯನ ಆರಾಧನೆಯಿಂದ ಶುಭ: ನಿತ್ಯ ಪಂಚಾಂಗ

ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದೀರಿ. ಹೆಣ್ಣುಮಕ್ಕಳಿಗೆ ಇದು ಶುಭ ಕಾಲ. ಕಲಾವಿದರು ಹೆಚ್ಚು ಶ್ರಮ ಪಡಬೇಕಾದೀತು. ನಿಂದನೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಸುಂದರವಾದ ಬದುಕಿ ನೆಡೆಗೆ ಸದಾ ಪ್ರಯತ್ನ ಮಾಡುತ್ತಿರುವಿರಿ. ಕೆಲಸದ ಒತ್ತಡದಿಂದ ಹೊರಗೆ ಬರಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ತುಲಾ: ತಂದೆ-ತಾಯಿಗಳು ನಿಮ್ಮ ಪಾಲಿಗೆ ದೊಡ್ಡದೇವರು. ಅವರ ಮಾತಿನಂತೆ ಎಲ್ಲವೂ ನಡೆಯಲಿದೆ. ಮತ್ತೊಬ್ಬರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಜಂಜಾಟಗಳಿಂದ ದೂರ ಬರುವಿರಿ. ಅಂದುಕೊಂಡ ಕೆಲಸಗಳಲ್ಲಿ ಪ್ರಗತಿ ಸಾಧ್ಯವಾಗಲಿದೆ. ಸುತ್ತಾಟದಿಂದ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ.

ವೃಶ್ಚಿಕ: ನಿಮ್ಮ ಶಕ್ತಿಯೇ ನಿಮ್ಮ ಏಳಿಗೆಗೆ ಮೂಲ ಕಾರಣ. ಮತ್ತೊಬ್ಬರ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಬೇರೆಯವರ ಮೇಲೆ ಕೋಪ ಮಾಡಿಕೊಳ್ಳುವುದು ಬೇಡ. ವ್ಯಕ್ತಿತ್ವದಲ್ಲಿ ಬದಲಾವಣೆಯಾಗಲಿದೆ. ಕೃಷಿ ಮಾಡುವವರಿಗೆ ಸ್ವಲ್ಪ ಏರುಪೇರು ಉಂಟಾಗಲಿದೆ. ಆರ್ಥಿಕವಾಗಿ ಜಾಗೃತೆ ವಹಿಸಿ.

ಧನಸ್ಸು: ಸಂಗೀತ ಕೇಳುವ ಅಭ್ಯಾಸ ಹೆಚ್ಚಾಗಲಿದೆ. ನಿಮ್ಮ ಇಷ್ಟದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ. ಮುಟ್ಟುವುದೆಲ್ಲಾ ಚಿನ್ನವಾಗಲಿದ್ದು, ಶುಭ ಕಾರ್ಯಕ್ಕೆ ಸಕಾಲ. ವ್ಯಾವಹಾರಿಕವಾಗಿ ಮುಂದೆ ಬರಲಿದ್ದೀರಿ. ಗೆಳೆಯರ ನೋವಿಗೆ ಸ್ಪಂದಿಸಲಿದ್ದೀರಿ. ಶುಭಫಲ.

ಮಕರ: ಕೆಲಸದೊತ್ತಡ ಹೆಚ್ಚಾಗಲಿದೆ. ಆದರೂ ಅದನ್ನು ಉತ್ತಮ ರೀತಿಯಲ್ಲೇ ಎದುರಿಸಿ ನಿಮ್ಮ ಮೇಲಧಿಕಾರಿಯ ಪ್ರಶಂಸೆ ಪಡೆಯಲಿದ್ದೀರಿ. ಸ್ನೇಹಿತರ ಭೇಟಿಯಾಗಿ ಅವರ ಜೊತೆಗೆ ಸಮಯ ಕಳೆಯುವಿರಿ. ವ್ಯವಹಾರ ನಡೆಸುವಾಗ ಮನೆಯವರ ಸಲಹೆ ಪಡೆಯಿರಿ.

ಕುಂಭ: ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ಪರದಾಡುತ್ತಿದ್ದರೆ ಅದಕ್ಕೆ ಕಾರಣ ನೀವೆ ಹಾಕಿಕೊಂಡಿರುವ ಕಟ್ಟುಪಟುಗಳು ಎಂಬುದು ನೆನಪಿರಲಿ. ಅದರಿಂದ ಹೊರ ಬಂದಿದ್ದೇ ಆದಲ್ಲಿ ನಿಮ್ಮ ಪರಿಶ್ರಮಕ್ಕೆ ಫಲ ಸಿಗಲಿದೆ. ಸ್ನೇಹಿತರು, ಬಂಧುಗಳ ಪ್ರಶಂಸೆ ಸಿಗಲಿದ್ದು, ಈ ವಾರ ಸಂತೋಷದಿಂದ ಕಾಲ ಕಳೆಯಲಿದ್ದೀರಿ.

ಮೀನ: ಸಂಬಂಧಗಳು ವೃದ್ಧಿಯಾಗಲಿವೆ. ಫೋಟೋ ಗ್ರಾಫರ್‌ಗಳಿಗೆ ಹೆಚ್ಚು ಉದ್ಯೋಗಾವಕಾಶ. ಸೂಕ್ತ ಸಮಯಕ್ಕೆ ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಸಮಯ ಹಾಳು ಮಾಡದೇ ಕೆಲಸದಲ್ಲಿ ತೊಡಗಿಕೊಳ್ಳಿ. ವಾರಾಂತ್ಯದಲ್ಲಿ ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು.

click me!