ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲು ಸರಳ ಟಿಪ್ಸ್

By Web DeskFirst Published Sep 22, 2018, 3:57 PM IST
Highlights

ಭಾರತೀಯ ವಾಸ್ತು ವಿಜ್ಞಾನದಲ್ಲಿ ಹೇಳಿದ ಕೆಲವು ಸರಳ ಟಿಪ್ಸ್ ಇಲ್ಲಿವೆ.

  • ಮುಖ್ಯ ದ್ವಾರದ ಮೇಲೆ ನೇಮ್ ಪ್ಲೇಟ್ ಇರಲಿ. ಇದರಿಂದ ನಿಮ್ಮನ್ನು ಹುಡುಕಿಕೊಂಡು  ಬಂದವರಿಗೆ ಗೊತ್ತಾಗುತ್ತದೆ.
  • ಬೆಂಕಿಗೆ ನೆಗಟಿವ್ ಎನರ್ಜಿಯನ್ನು ಓಡಿಸುವ ಶಕ್ತಿ ಇದೆ. ಅದಕ್ಕಾಗಿಯೇ ಸದಾ ಹಣತೆಯಲ್ಲಿ ದೀಪ ಉರಿಯುತ್ತಿರಲಿ. ಬೆಳಗ್ಗೆ ಮತ್ತು ಸಂಜೆ ಊದುಬತ್ತಿಗಳನ್ನು ಹಚ್ಚಿಡಿ.
  • ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯಿದ್ದರೆ ಒಳ್ಳೆಯದು. ಅಕಸ್ಮಾತ್ ಅದಾಗಲಿಲ್ಲವೆಂದರೆ ಒಲೆಯಾದರೂ ಆ ದಿಕ್ಕಿನಲ್ಲಿಡಿ.
  • ಗಾಜಿನ ಲೋಟದಲ್ಲಿ ನೀರು, ಲಿಂಬೆ ಹಣ್ಣಿಡಿ. ಅದನ್ನು ಪ್ರತಿ ಶನಿವಾರವೂ ಬದಲಾಯಿಸಿ. ಇದು ಋಣಾತ್ಮಕ ಶಕ್ತಿಯನ್ನು ಓಡಿಸುತ್ತದೆ.
  • ಅಡುಗೆ ಮನೆಯಲ್ಲಿ ಔಷಧಿಗಳನ್ನಿಡಬಾರದು. ಇದು ನೆಗಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ.
  • ದಿನಕ್ಕೊಮ್ಮೆ ಧ್ಯಾನ ಮಾಡಿ, ಮನೆಯ ಸುತ್ತವೇ ಪಾಸಿಟಿವ್ ಶಕ್ತಿಯೊಂದನ್ನು ಸೃಷ್ಟಿಸುವ ಶಕ್ತಿಯಿದೆ.
  • ಮಲಗುವ ಕೊಠಡಿಯಲ್ಲಿ ಕನ್ನಡಿ ಇರದಿದ್ದರೆ ಒಳ್ಳೆಯದು. ಅಕಸ್ಮಾತ್ ಇರಬೇಕೆಂದರೆ ಮಲಗುವಾಗ ಅದನ್ನು ಮುಚ್ಚಿಡಿ. ಅದರ ಪ್ರತಿಫಲನದಿಂದ ಆರೋಗ್ಯ ಕೆಡಬಹುದು ಅಥವಾ ಸಂಸಾರದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ.
  • ಮುಚ್ಚಿಗೆ(ಮೇಲ್ ಮಾಹಡಿ) ಇರುವ ಕತ್ತಲ ಜಾಗದಲ್ಲಿ ತೀರ್ಥವನ್ನಿಡಿ. ಅದನ್ನು ವಾರಕ್ಕೊಮ್ಮೆ ಬದಲಾಯಿಸಿ.
  • ಮನೆಯ ಬಾಗಿಲಲ್ಲಿ ಸ್ವಸ್ತಿಕ್ ಹಾಗೂ ಓಂಕಾರದ ಚಿಹ್ನೆ ಇರಲಿ.
  • ಮನೆಯನ್ನು ಪ್ರವೇಶಿಸುವ ಜಾಗದಲ್ಲಿ ಲೋಹದ ಗಂಟೆ ನೇತುಹಾಕಿ. ಗಾಳಿಗೆ ಇದು ಹೊಡೆದು ಕೊಂಡು ಶಬ್ದ ಸೃಷ್ಟಿಯಾದಾಗ ಮನೆಯನ್ನು ಪ್ರವೇಶಿಸುವ ನೆಗಟಿವ್ ಶಕ್ತಿ ದೂರವಾಗುತ್ತದೆ.
  • ಮನೆ ಮೂಲೆ ಮೂಲೆಯಲ್ಲೂ ಬಟ್ಟಲಲ್ಲಿ ಉಪ್ಪಿಡಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಉಪ್ಪಿಗೆ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ಇರುತ್ತದೆ.
  • ಮೂರು ವರ್ಷಗಳಿಗೊಮ್ಮೆ ಯಾದರೂ ಗಣೇಶ ಪೂಜೆ ಹಾಗೂ ನವಗ್ರಹ ಹೋಮ ಮಾಡುವುದರಿಂದ ಮನೆಯ ವಾಸ್ತು ದೋಷವನ್ನ ಹೋಗಲಾಡಿಸಬಹುದು.
  • ಮನೆಯಲ್ಲಿ ಅಳುತ್ತಿರುವ ಚಿತ್ರ, ಸಿಟ್ಟಾಗಿರುವ ಮನುಷ್ಯ, ಗೂಬೆ ಅಥವಾ ಹದ್ದಿನ ಚಿತ್ರಗಳನ್ನು ಅಶುಭ ಎನ್ನಲಾಗುತ್ತದೆ. ಇಂಥ ಚಿತ್ರಗಳಿದ್ದರೆ ಕೂಡಲೇ ತೆಗೆದು ಹಾಕಿ.
click me!