ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ

Published : Jan 01, 2026, 06:00 AM IST
 today January 1st 2026 horoscope lucky zodiac signs kannada 2025

ಸಾರಾಂಶ

Today January 1st 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ

ಮೇಷ = ಜನವರಿಯಲ್ಲಿ ಉತ್ತಮ ಫಲವಿದೆ. ವೃತ್ತಿಯಲ್ಲಿ ವಿಶೇಷ ಮಾನ್ಯತೆ. ಸಾಹಸ ಕಾರ್ಯಗಲ್ಲಿ ಜಯ. ಕಲಾವಿದರಿಗೆ ಶುಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಫೆಬ್ರವರಿಯಲ್ಲಿ ಆರೋಗ್ಯದ ಕಡೆ ಎಚ್ಚರವಹಿಸಿ. ಔಷಧ ವ್ಯಾಪಾರದಲ್ಲಿ ಲಾಭ. ಅತಿಯಾದ ಹೂಡಿಕೆ. ಸ್ತ್ರೀಯರಿಗೆ ಅಲೆದಾಟ. ಮಾರ್ಚ್ ನಲ್ಲಿ ಹೆಚ್ಚಿನ ವ್ಯಯ. ಹೂಡಿಕೆಗಳ ಕಾಲ

ವೃಷಭ = ಜನವರಿಯಲ್ಲಿ ದೈವಾನುಕೂಲದಿಂದ ಮನೋಸಂಕಲ್ಪಗಳು ಈಡೇರಲಿವೆ. ಬೆಂಕಿ-ಎಲೆಕ್ಟ್ರಿಕ್ ಕ್ಷೇತ್ರಗಳಲ್ಲಿ ಲಾಭ. ಕಲಾವಿದರಿಗೆ ಅನುಕೂಲ. ವಸ್ತ್ರಾಭಯರಣ ವ್ಯಾಪಾರದ್ಲಿ ಲಾಭ. ಫೆಬ್ರವರಿಯಲ್ಲಿ ಕೆಲಸಗಳಲ್ಲಿ ತೊಡಕು. ಸಹೋದ್ಯೋಗಿಳಲ್ಲಿ ಕಲಹ. ವೃತ್ತಿ ವಿಚಾರದಲ್ಲಿ ಎಚ್ಚರ. ಮಾರ್ಚ್ ನಲ್ಲಿ ಶುಭಫಲವಿದೆ. ಕಲಾವಿದರಿಗೆ ಲಾಭ. ದಾಂಪತ್ಯದಲ್ಲಿ ಅನ್ಯೋನ್ಯತೆ. ವ್ಯಾಪಾರದಲ್ಲಿ ಲಾಭ.

ಮಿಥುನ = ಜನವರಿಯಲ್ಲಿ ಅನುಕೂಲ ಫಲ. ಆರೋಗ್ಯದಲ್ಲಿ ಏರುಪೇರು. ಸಾಲ ಬಾಧೆಗಳು. ದಾಂಪತ್ಯದಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ಫೆಬ್ರವರಿಯಲ್ಲಿ ತಂದೆ-ಮಕ್ಕಳಲ್ಲಿ ಮನಸ್ತಾಪ. ಧರ್ಮ ಕಾರ್ಯಗಳಲ್ಲಿ ಹಿನ್ನಡೆ. ಗುರುತರ ಅಪಾದನೆಗಳು. ಮಾರ್ಚ್ ನಲ್ಲಿ ಅತ್ಯಂತ ಶುಭ ಫಲ. ವೃತ್ತಿಯಲ್ಲಿ ವಿಶೇಷ ಮಾನ್ಯತೆ. ಗೌರವ-ಬಡ್ತಿ ಸಾಧ್ಯತೆ. ವಸ್ತ್ರಾಭರಣ ಕ್ಷೇತ್ರದಲ್ಲಿ ಲಾಭ. ವಿಷ್ಣು ಸನ್ನಿಧಾನಕ್ಕೆ ನವಧಾನ್ಯ ಸಮರ್ಪಣೆ ಮಾಡಿ

ಕರ್ಕ = ಜನವರಿಯಲ್ಲಿ ಸಾಹಸ ಕಾರ್ಯಗಳಲ್ಲಿ ಜಯ. ಕೋರ್ಟು-ಕಚೇರಿಗಳಿಗೆ ಅಲೆದಾಟ. ಅಧಿಕಾರ-ಸ್ಥಾನಮಾನ. ಹೋಟೆಲ್ ಕ್ಷೇತ್ರದಲ್ಲಿ ಲಾಭ. ಎಲೆಕ್ಟ್ರಿಕ್ ಕ್ಷೇತ್ರಗಳಲ್ಲಿ ಲಾಭ. ಫೆಬ್ರವರಿಯಲ್ಲಿ ದಾಂಪತ್ಯದಲ್ಲಿ ಮನಸ್ತಾಪಗಳು. ವ್ಯಾಪಾರದಲ್ಲಿ ತಗಾದೆಗಳು. ಕುಟುಂಬ ಘರ್ಷಣೆಗಳು. ಹಣಕಾಸಿನ ನಷ್ಟ ಸಾಧ್ಯತೆ. ಮಾರ್ಚ್ ನಲ್ಲಿ ಸ್ವಲ್ಪ ಅನುಕೂಲ. ಈಶ್ವರನಿಗೆ ನವಧಾನ್ಯ ಸಮರ್ಪಣೆ ಮಾಡಿ

ಸಿಂಹ = ಜನವರಿಯಲ್ಲಿ ಎಚ್ಚರದಿಂದ ಇರಬೇಕು. ಧೈರ್ಯ-ಸಾಹಸಗಳಲ್ಲಿ ಗೆಲುವು. ಶತ್ರುಗಳು ದೂರಾಗುತ್ತಾರೆ. ಗುರು-ಹಿರಿಯರ ಸಲಹೆ ಪಡೆಯಿರಿ. ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಫೆಬ್ರವರಿಯಲ್ಲಿ ದಾಂಪತ್ಯದಲ್ಲಿ ಮನಸ್ತಾಪ. ವಿದೇಶ ವ್ಯವಹಾರಗಳಲ್ಲಿ ತೊಡಕು. ಬಯಕೆಗಳಿಂದ ಅತಿಬಾಧೆ. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಅನುಕೂಲ ಫಲವಿದೆ.

ಕನ್ಯಾ = ಜನವರಿಯಲ್ಲಿ ಬುದ್ಧಿಬಲ. ಧೈರ್ಯಸಾಹಸ ಕಾರ್ಯಗಳು. ವೃತ್ತಿಯಲ್ಲಿ ಅನುಕೂಲ. ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲ. ಉನ್ನತ ಶಿಕ್ಷಣದಲ್ಲಿ ಬಲ. ಫೆಬ್ರವರಿಯಲ್ಲಿ ಆರೋಗ್ಯ ನಿಮಿತ್ತ ತೊಂದರೆಗಳು. ಸಾಲ-ಶತ್ರುಗಳ ಬಾಧೆ. ಮಾರ್ಚ್ ತಿಂಗಳಲ್ಲಿ ಶುಭ ಯೋಗವಿದೆ. ವಿವಾಹಾದಿ ಮಂಗಳಕಾರ್ಯಗಳು ನಡೆಯಲಿವೆ. ಹಣ-ಮಾತಿನ ಬಲ. ಕಲಾವಿದರಿಗೆ ಲಾಭ. ವ್ಯಾಪಾರಗಳಲ್ಲಿ ಲಾಭ. ಮಂಗಳಕಾರ್ಯಗಳು ನಡೆಯಲಿವೆ.

ತುಲಾ = ಜನವರಿಯಲ್ಲಿ ಶುಭಫಲ ಕಾಣುತ್ತೀರಿ. ಭೂಲಾಭ. ವಾಹನ ಲಾಭಗಳು. ಗಲಾಟೆ-ಘರ್ಷಣೆಗಳಿಂದ ಹೊರಬರುತ್ತೀರಿ. ದಾಂಪತ್ಯದಲ್ಲಿ ಸಾಮರಸ್ಯ. ಸಾಧು-ಸಂತರ ಭೇಟಿ. ಮಂಗಳಕಾರ್ಯಗಳ ಸಾಧ್ಯತೆ. ಫೆಬ್ರವರಿಯಲ್ಲಿ ಉದರ ಬಾಧೆ. ಮಕ್ಕಳ ವಿಚಾರದಲ್ಲಿ ಘರ್ಷಣೆಗಳು. ಬುದ್ಧಿ ವ್ಯತ್ಯಾಸವಾಗಿ ಸಮಸ್ಯೆಗಳಾಗಲಿವೆ. ಮಾರ್ಚ್ ನಲ್ಲಿ ಶತ್ರುಗಳಿಂದ ಹೊರಬರುತ್ತೀರಿ. ರೋಗ ನಿವಾರಣೆಯಾಗಲಿದೆ.

ವೃಶ್ಚಿಕ = ಜನವರಿಯಲ್ಲಿ ಸಹೋದರರಲ್ಲಿ ಉತ್ತಮ ಬಾಂಧವ್ಯ. ಸಾಹಸ ಕಾರ್ಯಗಳಲ್ಲಿ ಜಯ. ಕಠಿಣವಾದದ್ದನ್ನು ಸಾಧಿಸುವ ಛಲ. ಫೆಬ್ರವರಿಯಲ್ಲಿ ವೃತ್ತಿಯಲ್ಲಿ ಸ್ವಲ್ಪ ಹಿನ್ನಡೆ. ಸುಖ ಹಾನಿ. ಬಂಧು-ಸ್ನೇಹಿತರಲ್ಲಿ ಕಲಹ. ಭೂವ್ಯವಹಾರಗಳಲ್ಲಿ ತೊಂದರೆ ಸಾಧ್ಯತೆ. ಹೃದ್ರೋಗ ಬಾಧೆ. ಮಾರ್ಚ್ ತಿಂಗಳಲ್ಲಿ ಶುಭಫಲವಿದೆ. ಮಕ್ಕಳಿಂದ ಸಹಕಾರ. ಕಲಾವಿದರಿಗೆ ಅನುಕೂಲ. ಗುರು-ಶಿಷ್ಯರಲ್ಲಿ ಉತ್ತಮ ಬಾಂಧವ್ಯ. ಹಣನಷ್ಟ. ವಿದ್ಯಾರ್ಥಿಗಳಿಗೆ ಅನುಕೂಲ.

ಧನು = ಜನವರಿಯಲ್ಲಿ ಧನ ಸಮೃದ್ಧಿ. ಮಕ್ಕಳಿಂದ ಅನುಕೂಲ. ಗೃಹಿಣಿಯರಿಗೆ ಸ್ಥಾನಮಾನ. ಹೋಟೆಲ್ ಉದ್ಯಮದಲ್ಲಿ ಲಾಭ. ಮಂಗಳಕಾರ್ಯಗಳು ನಡೆಯಲಿವೆ. ಹೋಟೆಲ್ ಉದ್ಯಮದಲ್ಲಿ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ಫೆಬ್ರವರಿಯಲ್ಲಿ ಗಂಟಲಬಾಧೆ. ಸಹೋದರರಲ್ಲಿ ಅಸಮಾಧಾನ. ಅಚಾನಕ್ಕಾದ ಸಮಸ್ಯೆಗಳು ಎದುರಾಗಬಹುದು. ಮಾರ್ಚ್ ತಿಂಗಳಲ್ಲಿ ಅತ್ಯಂತ ಶುಭಫಲ. ಭೂ-ವಾಹನ ಖರೀದಿ. ಸ್ನೇಹಿತರು-ಬಂಧುಗಳಲ್ಲಿ ಸಹಕಾರ. ಸುಖ ಸಮೃದ್ಧಿ.

ಮಕರ = ಜನವರಿಯಲ್ಲಿ ಅಧಿಕ ಲಾಭ. ರಾಜ ಮಾನ್ಯತೆ ದೊರೆಯಲಿದೆ. ಭೂ ವ್ಯವಹಾರಗಳಲ್ಲಿ ಲಾಭ. ಹಿರಿಯರಿಂದ ಸಹಕಾರ. ಅಗ್ನಿಶಾಮಕ-ಸೇನೆ-ಪೊಲೀಸ್ ಕ್ಷೇತ್ರಗಳಲ್ಲಿ ಅನುಕೂಲ. ಬಂಧುಗಳಲ್ಲಿ ಸಾಮರಸ್ಯ. ಕೋರ್ಟ್ –ಕಚೇರಿ ಕೆಲಸಗಳಲ್ಲಿ ಗೆಲುವು. ಹೊಸ ಕೆಲಸಕ್ಕೆ ಅವಕಾಶ. ಫೆಬ್ರವರಿಯಲ್ಲಿ ಹಣ ನಷ್ಟ. ಮಾತಿನಿಂದ ತೊಂದರೆ. ವಿದ್ಯಾರ್ಥಿಗಳಿಗೆ ತೊಂದರೆ. ಕುಟುಂಬ ಕಲಹ ಸಾಧ್ಯತೆ. ಮಾರ್ಚ್ ತಿಂಗಳಲ್ಲಿ ಸಹೋದರರಲ್ಲಿ ಅನ್ಯೋನ್ಯತೆ. ಸ್ತ್ರೀಯರಿಗೆ ಧೈರ್ಯೋತ್ಸಾಹಗಳು. ಗೆಲುವು.

ಕುಂಭ = ಜನವರಿಯಲ್ಲಿ ಕಹಿ ಘಟನೆ ನಡೆಯಲಿದೆ. ವ್ಯಯ-ನಷ್ಟ ಸಂಭವ. ಕಾಲು-ಕಣ್ಣುಗಳ ಬಾಧೆ. ಕುಟುಂಬ ಕಲಹಗಳು. ಗುರುಬಲದಿಂದ ಮಂಗಳಕಾರ್ಯಗಳು ನಡೆಯಲಿವೆ. ಫೆಬ್ರವರಿಯಲ್ಲಿ ಆರೋಗ್ಯ ಸಮಸ್ಯೆ. ತಲೆ ಭಾಗದಲ್ಲಿ ಸಮಸ್ಯೆಗಳು. ಚರ್ಮ ಸಮಸ್ಯೆ ಉಂಟಾಗಬಹುದು. ಹಿರಿಯರಲ್ಲಿ ಹಣಕ್ಕಾಗಿ ಘರ್ಷಣೆ. ಆರೋಗ್ಯ ವ್ಯತ್ಯಾಸ. ದಾಂಪತ್ಯ ಕಲಹ. ಮಾರ್ಚ್ ತಿಂಗಳಲ್ಲಿ ಭೂ ಸೌಖ್ಯ. ದಾಂಪತ್ಯದಲ್ಲಿ ಅನುರಾಗ. ಸಂಗೀತಿ-ವಾದ್ಯ ಕಲಾ ಕ್ಷೇತ್ರಗಳಲ್ಲಿ ಲಾಭ.

ಮೀನ = ಜನವರಿಯಲ್ಲಿ ಹಣಕಾಸಿನ ಸಮೃದ್ಧಿ. ವೃತ್ತಿಯಲ್ಲಿ ವಿಶೇಷ ಸ್ಥಾನ-ಮಾನ. ಭೂ ವ್ಯವಹಾರಗಳಲ್ಲಿ ಲಾಭ. ಹೋಟೆಲ್ ಉದ್ಯಮದಲ್ಲಿ ಲಾಭ. ಸ್ನೇಹಿತರು-ಬಂಧುಗಳ ಸಹಕಾರ. ಫೆಬ್ರವರಿಯಲ್ಲಿ ಅಧಿಕ ವ್ಯಯ. ಕಾಲು-ಕಣ್ಣಿನ ಬಾಧೆ. ಆರೋಗ್ಯ ವ್ಯತ್ಯಾಸ. ಮಾರ್ಚ್ ನಲ್ಲಿ ಶುಭಕಾರ್ಯಗಳು ನಡೆಯಲಿವೆ. ವೃತ್ತಿಯಲ್ಲಿ ಅನುಕೂಲ. ವಿವಾಹಾದಿ ಮಂಗಳಕಾರ್ಯಗಳು ನಡೆಯಲಿವೆ. ಕಲಾವಿದರಿಗೆ ಲಾಭ. ನಾಗ ಕವಚ ಪಠಿಸಿ

 

PREV
Read more Articles on
click me!

Recommended Stories

Happy new year: 2026 7 ರಾಶಿಗೆ ಅದೃಷ್ಟ, 12 ರಾಶಿ ವರ್ಷ ಭವಿಷ್ಯ ಹೇಗಿದೆ?
ಲಕ್ಷ್ಮೀ ಚಂಚಲೆಯೇ? ಅಲ್ವೇ ಅಲ್ಲ… ಈ ಕಾರಣಕ್ಕಾಗಿ ಒಂದೇ ಕಡೆ ಉಳಿಯಲ್ಲ ದೇವತೆ