ಈ ರಾಶಿಗೆ ಈ ದಿನ ಅತ್ಯಂತ ಲಾಭದಾಯಕ ದಿನ

Published : Nov 14, 2018, 06:57 AM IST
ಈ ರಾಶಿಗೆ ಈ ದಿನ ಅತ್ಯಂತ ಲಾಭದಾಯಕ ದಿನ

ಸಾರಾಂಶ

ಈ ರಾಶಿಗೆ ಈ ದಿನ ಅತ್ಯಂತ ಲಾಭದಾಯಕ ದಿನ 

ಈ ರಾಶಿಗೆ ಈ ದಿನ ಅತ್ಯಂತ ಲಾಭದಾಯಕ ದಿನ 

14-11-18 - ಬುಧವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಸಪ್ತಮಿ ತಿಥಿ
ಶ್ರವಣ ನಕ್ಷತ್ರ 

ರಾಹುಕಾಲ  12.04 ರಿಂದ 01.30
ಯಮಗಂಡ ಕಾಲ  07.45 ರಿಂದ 09.11
ಗುಳಿಕ ಕಾಲ  10.38 ರಿಂದ 12.04
 

ಮೇಷ ರಾಶಿ : ಸ್ತ್ರೀ ಮೂಲಕ ಉದ್ಯೋಗ ಪ್ರಾಪ್ತಿ, ಆದರೆ ವಿಘ್ನಗಳೂ ಇವೆ, ವಿಘ್ನಗಳ ನಡುವೆಯೂ ಲಾಭದ ದಿನವಾಗಿರಲಿದೆ, ಉತ್ತಮ ದಿನ, ಮಿತ್ರರೊಂದಿಗೆ ಪ್ರವಾಸ ಹೊರಡುವ ಕಾಲ, ವಿಶೇಷ ದಿನವಾಗಿರುತ್ತದೆ. 

ದೋಷಪರಿಹಾರ : ಗಣಪತಿ ಪ್ರಾರ್ಥನೆ ಮಾಡಿ

ವೃಷಭ : ಅತ್ಯುತ್ತಮ ಫಲ ದೊರೆಯುತ್ತದೆ, ನಿಮ್ಮ ಅಪೇಕ್ಷೆಗಳು, ಶೀಘ್ರದಲ್ಲಿ ಈಡೇರಲಿವೆ. ಭುಜಗಳ ನೋವು, ಬೆನ್ನು ನೋವು ಸ್ವಲ್ಪಮಟ್ಟಿಗೆ ಕಾಡಲಿದೆ, ನಿಮ್ಮ ಸಹೋದರರ ಸಹಕಾರ ದೊರೆಯುವುದಿಲ್ಲ, ಮಾನಸಿಕ ಅಶಾಂತಿಯೂ ಇದೆ, ಮಿಶ್ರಫಲ,   
      
ದೋಷ ಪರಿಹಾರ : ದೇವೀ ಅಪರಾಧ ಕ್ಷಮಾ ಸ್ತೋತ್ರ ಪಠಿಸಿ

ಮಿಥುನ :  ಸ್ತ್ರೀಯರಿಂದ ಧನ ನಷ್ಟ, ಮಕ್ಕಳಿಗೆ ಅಲಂಕಾರಿಕ ವಸ್ತು ಖರೀದಿ, ತಂದೆ ಮಕ್ಕಳಲ್ಲಿ ಬಾಂಧವ್ಯ ಹಾಳು, ವಿವೇಕ ಶೂನ್ಯದಿಂದ ಮಾನಸಿಕ ಹಿಂಸೆ ಅನುಭವಿಸುತ್ತೀರಿ, ಮಾಡಿದ ಸಂಪಾದರೆ ದುಷ್ಟರ ಕೈಸೇರುತ್ತದೆ. ಎಚ್ಚರವಾಗಿರಿ.
 
ದೋಷ ಪರಿಹಾರ : ವಿಷ್ಣು ಭುಜಂಗ ಸ್ತೋತ್ರ ಪಠಿಸಿ

ಕಟಕ : ಮಾನಸಿಕ ನೋವು, ಮಿತ್ರರಿಂದ, ಸಂಗಾತಿಯಿಂದ ಮಾನಸಿಕ ತೊಂದರೆ, ತಂದೆ-ತಾಯಿಯರ ಸಹಕಾರ ಇರುತ್ತದೆ, ಮಕ್ಕಳ ಜಾಣತನ ನಿಮಗೆ ಪ್ರಶಂಸೆ ಬರಲಿದೆ. ಉತ್ತಮ ಫಲ ಅನುಭವಿಸುತ್ತೀರಿ.  
  
ದೋಷ ಪರಿಹಾರ : ಲಲಿತಾಪಂಚಕ ಪಠಿಸಿ

ಸಿಂಹ :  ನಿಮ್ಮ ಪೌರುಷ ಅಡಗಲಿದೆ, ಸ್ತ್ರೀಯರಿಂದ ಅನುಕೂಲವಾಗಲಿದೆ, ಗೃಹ ಸೌಕರ್ಯ, ವಾಹನ ಸೌಲಭ್ಯ ದೊರಕಲಿದೆ, ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಅನಾನುಕೂಲ, ದಾಂಪತ್ಯದಲ್ಲಿ ಕೊಂಚ ಅವಘಡ. 

ದೋಷ ಪರಿಹಾರ : ಶಿವಾಪರಾಧಕ್ಷಮಾಸ್ತೋತ್ರ ಪಠಿಸಿ

ಕನ್ಯಾ : ಸ್ತ್ರೀಯರಿಂದ ಧನನಷ್ಟ, ಗೃಹದಲ್ಲಿ ತೊಂದರೆ, ಆರೋಗ್ಯ ತೊಂದರೆ,ಮಕ್ಕಳಲ್ಲಿ ಸ್ವಲ್ಪ ತೊಂದರೆ, ಮಿತ್ರರಿಂದ ಅನುಕೂಲ ಪ್ರಾಪ್ತಿ, ದೇವಸ್ಥಾನಗಳ ಯಾತ್ರೆ, ಮಾನಸಿಕ ಕಿರಿಕಿರಿ. ಅನಾನುಕೂಲ.
  
ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ

ತುಲಾ : ಆತ್ಮ ಸ್ಥೈರ್ಯ ಹಾಳಾಗಲಿದೆ, ಸ್ತ್ರೀಯರಿಂದ ಸಹಕಾರ, ಕುಟುಂಬದವರ ಅನುಕೂಲ, ಮಕ್ಕಳಿಂದ ಕಠಿಣ ಮಾತು ಕೇಳಬೇಕಾಗುತ್ತದೆ, ಮಾನಸಿಕ ತೊಂದರೆ, ವಿಶಿಷ್ಟ ವ್ಯಕ್ತಿಗಳ ಪರಿಚಯವಾಗುತ್ತದೆ.   

ದೋಷ ಪರಿಹಾರ : ಸೌಂದರ್ಯ ಲಹರಿ ಪಠಿಸಿ

ವೃಶ್ಚಿಕ :  ನಿಮ್ಮ ಜಾಣತನದ ನಡೆಯಿಂದ ಅವಘಡ ತಪ್ಪಲಿದೆ, ಉತ್ತಮ ಕ್ರಿಯೆಗಳಲ್ಲಿ ಭಾಗವಹಿಸುತ್ತೀರಿ, ಧನವ್ಯಯವಾಗುತ್ತದೆ, ಬಂಧುಗಳಿಂದ ಸ್ವಲ್ಪ ಮಟ್ಟಿಗೆ ಕಟು ಮಾತು ಕೇಳಬೇಕಾಗುತ್ತದೆ.      

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು :  ಆರೋಗ್ಯದಲ್ಲಿ ವ್ಯತ್ಯಯ, ಮಕ್ಕಳಿಂದ ಸ್ವಲ್ಪ ಸಮಾಧಾನ ಹಾಗೂ ಸಹೋದರರಿಂದ ಅನುಕೂಲ, ಮಿತ್ರರು ಕೊನೆ ಕ್ಷಣದಲ್ಲಿ ತೊಂದರೆ ಕೊಡುತ್ತಾರೆ, ಎಚ್ಚರದಿಂದ ದಿನದ ಕಾರ್ಯಕ್ರಮಗಳ ಯೋಜನೆ ಮಾಡಿಕೊಳ್ಳಿ. 

ದೋಷ ಪರಿಹಾರ : ಹಸುವಿಗೆ  ಬಾಳೆಹಣ್ಣು ಅಕ್ಕಿ ಸಮರ್ಪಣೆ

ಮಕರ : ನಿಮ್ಮ ಸಮಸ್ಯೆಗಳಿಗೆ ಇಂದು ಉತ್ತರ ಸಿಗಲಿದೆ, ನಿಮ್ಮ ನಿಮ್ಮ ಮನಸ್ಸು ಚೇತೋಹಾರಿಯಾಗಲಿದೆ. ನಿಮ್ಮ ಸ್ನೇಹಿತರು ನಿಮ್ಮ ಜೊತೆ ಸಂಚಾರಕ್ಕೆ ಬರಲಿದ್ದಾರೆ. ನೀರಿನ ವ್ಯಾಪಾರಿಗಳಿಗೆ ಉತ್ತಮ ದಿನ

  
ದೋಷ ಪರಿಹಾರ : ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ


ಕುಂಭ :   ಸ್ವಲ್ಪ ಧನ ನಷ್ಟ, ಕಾರ್ಯ ವೃದ್ಧಿಗೆ ಅಡೆತಡೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದ ಕಾರಣಕ್ಕೆ  ಮಡದಿಯಲ್ಲಿ ಕಲಹ, ಮನೆ ವಸ್ತು ಖರೀದಿಗಾಗಿ ಮನೆಯಲ್ಲಿ ಮನಸ್ತಾಪ, ಸುಖ ಭೋಜನ.

ದೋಷ ಪರಿಹಾರ : ದುರ್ಗಾದೇವಿಗೆ ತುಪ್ಪದ ದೀಪ ಹಚ್ಚಿ
  
ಮೀನ : ನಿಮ್ಮ ಸಮಸ್ಯೆಗಳಿಗೆ ಇಂದು ಉತ್ತರ ಸಿಗಲಿದೆ, ನಿಮ್ಮ ನಿಮ್ಮ ಮನಸ್ಸು ಚೇತೋಹಾರಿಯಾಗಲಿದೆ. ಸ್ನೇಹಿತರ ಸಹಕಾರ, ಉದ್ಯೋಗ ವೃದ್ಧಿ, ಉತ್ತಮ ದಿನ. 

ದೋಷ ಪರಿಹಾರ : ರಾಮ ನಾಮ ಪಠಿಸಿ

ವಾಞ್ಮಯೀ.

PREV
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌