ರಾಹು-ಕೇತು ಸಂಕ್ರಮಣ; ಈ ಮೂರು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ..!

By Sushma HegdeFirst Published Jul 17, 2023, 12:46 PM IST
Highlights

ಇನ್ನೇನು ಸ್ವಲ್ಪ ದಿನಗಳಲ್ಲಿ ರಾಹು ಮತ್ತು ಕೇತುಗಳ ಚಲನೆಯು ಬದಲಾಗುತ್ತದೆ. ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ. ಒಳ್ಳೆಯದರ ಜೊತೆಗೆ ಅಶುಭ ಫಲಿತಾಂಶವು ಕಂಡುಬರುತ್ತದೆ. ಈ ಮೂರು ರಾಶಿಯವರು ತುಂಬಾ ಹುಷಾರಾಗಿ ಇರಬೇಕು.

ಇನ್ನೇನು ಸ್ವಲ್ಪ ದಿನಗಳಲ್ಲಿ ರಾಹು ಮತ್ತು ಕೇತುಗಳ ಚಲನೆಯು ಬದಲಾಗುತ್ತದೆ. ಇದು ಎಲ್ಲಾ ರಾಶಿಚಕ್ರ (Zodiac) ದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ. ಒಳ್ಳೆಯದರ ಜೊತೆಗೆ ಅಶುಭ ಫಲಿತಾಂಶವು ಕಂಡುಬರುತ್ತದೆ. ಈ ಮೂರು ರಾಶಿಯವರು ತುಂಬಾ ಹುಷಾರಾಗಿ ಇರಬೇಕು.

ರಾಹು  (Rahu) ಮತ್ತು ಕೇತು (Ketu) ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತಾರೆ ಮತ್ತು ಒಂದು ರಾಶಿಯಿಂದ ಇನ್ನೊಂದಕ್ಕೆ ಹೋಗಲು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತಾರೆ. ಈ ಎರಡೂ ಗ್ರಹಗಳನ್ನು ತಪ್ಪಿಸಿಕೊಳ್ಳುವ ಗ್ರಹಗಳು ಎಂದು ಕರೆಯಲಾಗುತ್ತದೆ. 

Latest Videos

ಸ್ವಲ್ಪ ಸಮಯದ ನಂತರ ರಾಹು ಮತ್ತು ಕೇತುಗಳ ಚಲನೆಯು ಬದಲಾಗಲಿವೆ. ರಾಹುವು ಮೇಷ ರಾಶಿ (Aries) ಯಿಂದ ಮೀನ ರಾಶಿ (Pisces) ಗೆ ಸಾಗಲಿದ್ದರೆ, ಕೇತುವು ತುಲಾ ರಾಶಿ (Libra) ಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದರ ಪರಿಣಾಮವು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಅಶುಭ (inauspicious) ಫಲಿತಾಂಶಗಳನ್ನು ನೀಡಲಿದೆ. 

ರಾಹು-ಕೇತು ಸಂಕ್ರಮಣ 2023

ಅಕ್ಟೋಬರ್‌ 30, 2023ರಂದು ರಾಹುವು ಮೇಷದಿಂದ ಮೀನ (Pisces) ಕ್ಕೆ ಸಾಗಲಿದ್ದರೆ, ಕೇತುವು ತುಲಾದಿಂದ ಕನ್ಯಾರಾಶಿಗೆ ಚಲಿಸುತ್ತಾನೆ. ಜ್ಯೋತಿಷ್ಯ (Astrology) ದ ಪ್ರಕಾರ, ರಾಹು -ಕೇತುಗಳನ್ನು ಪಾಪ ಮತ್ತು ತಪ್ಪಿಸಿಕೊಳ್ಳುವ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹಗಳ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅಶುಭ ಫಲಿತಾಂಶ (result) ವನ್ನು ನೀಡಬಹುದು. ಈ ರಾಶಿ ಚಕ್ರದ ಚಿಹ್ನೆಗಳು ತುಂಬಾ ಜಾಗರೂಕರಾಗಿರಬೇಕು.

Guru Vakri: ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!

 

ಮೇಷ ರಾಶಿ (Aries) 

ರಾಹು-ಕೇತು ಸಂಕ್ರಮಣದ ಅಶುಭ ಪರಿಣಾಮದಿಂದ ಮೇಷ ರಾಶಿ (Aries) ಯ ಜನರ ಬಜೆಟ್‌ ಹಾಳಾಗಬಹುದು. ಈ ಗ್ರಹಗಳ ಬದಲಾವಣೆಯು ಮೇಷ ರಾಶಿಯ ವೈವಾಹಿಕ ಜೀವನ (married life) ದ  ಮೇಲೂ ಪರಿಣಾಮ ಬೀರುತ್ತದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ (Disagreement) ದ ಪರಿಸ್ಥಿತಿ ಉದ್ಭವಿಸಬಹುದು. ವಿವಾದಗಳಿಗೆ ಸಿಲುಕುವುದನ್ನು ತಪ್ಪಿಸಿ ಮತ್ತು ಶಿವನನ್ನುಆರಾಧಿಸಿ.

ವೃಷಭ ರಾಶಿ (Taurus) 

ರಾಹು-ಕೇತುಗಳ ಸಂಕ್ರಮಣದಿಂದ  ವೃಷಭ ರಾಶಿಯವರಿಗೆ ಬಹಳ ಕಷ್ಟವಾಗಬಹುದು. ಹಣಕಾಸಿನ ಮುಗ್ಗಟ್ಟು (Financial crisis)  ಎದುರಿಬೇಕಾಗಬಹುದು. ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಮನೆಯಲ್ಲಿ ಅಶಾಂತಿಯ ವಾತಾವರಣ (atmosphere) ನಿರ್ಮಾಣವಾಗಬಹುದು. ಆದ್ದರಿಂದ ಯೋಚಿಸದೆ ಏನನ್ನೂ ಮಾತಾಡುವುದ (talking) ನ್ನು ತಪ್ಪಿಸಿ.

ಕನ್ಯಾ ರಾಶಿ (Virgo) 

ರಾಹು-ಕೇತುಗಳ ಸಂಚಾರವು ಕನ್ಯಾ ರಾಶಿ (Virgo) ಯವರಿಗೆ ಬಹಳಷ್ಟು ಸಮಸ್ಯೆ (problem) ಗಳನ್ನು ಹೆಚ್ಚಿಸಲಿದೆ. ರಾಹು-ಕೇತುಗಳ ಪ್ರಭಾವದಿಂದಾಗಿ, ನಿಮ್ಮ ನಡುವಳಿಕೆಯಲ್ಲಿ ಕೋಪವಿರುತ್ತದೆ. ಅದು ನಿಮ್ಮ ಕೆಲಸಗಳನ್ನು ಹಾಳು ಮಾಡುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಶಾಂತ (quiet) ವಾಗಿರಲು ಪ್ರಯತ್ನಿಸಿ.

ಇಂದು ಭೀಮನ ಅಮಾವಾಸ್ಯೆ; ಪತಿಯ ಪೂಜೆ ಏಕೆ ಮಾಡಬೇಕು?, ಮಹತ್ವ ಏನು?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!