
ಹಿಂದು ಧರ್ಮದಲ್ಲಿ ಪೂರ್ವಜರನ್ನು ಆರಾಧಿಸಲಾಗುವುದು, ಪೂರ್ವಜರನ್ನು ದೇವರು ಎಂದು ಕೂಡ ಹೇಳೋದುಂಟು. ಪಿತೃಪಕ್ಷದಲ್ಲಿ ( Pitru Paksha ) ಪೂರ್ವಜರು ಕುಟುಂಬಸ್ಥರನ್ನು ಭೇಟಿಯಾಗಲು ಬರುತ್ತಾರೆ ಎನ್ನೋದುಂಟು, ಹೀಗಾಗಿ ಪೂರ್ವಜರನ್ನು ಗೌರವಿಸಬೇಕು. ಈ ಟೈಮ್‌ನಲ್ಲಿ ಅವರಿಗೆ ಆಹಾರ ಕೊಟ್ಟರೆ, ಶ್ರಾದ್ಧ ಮಾಡಿದರೆ ಅವರಿಗೆ ಮುಕ್ತಿ ಸಿಗುವುದು ಎನ್ನುತ್ತಾರೆ, ಇದರ ಜೊತೆಗೆ ದಂಪತಿಗಳಿಗೆ ಒಂದು ಮುಖ್ಯ ಸಲಹೆಯನ್ನು ನೀಡಿದ್ದಾರೆ.
ಗರುಡ ಪುರಾಣ ಹೇಳುವಂತೆ ಪೂರ್ವಜರಿಗೆ ಅಥವಾ ಪಿತೃಗಳಿಗೆ ಶಾಂತಿ ಇಲ್ಲ, ಮುಕ್ತಿ ಇಲ್ಲ, ಆಸೆಗಳು ಹಾಗೆ ಉಳಿದುಕೊಂಡಿದೆ ಎಂದರೆ ಅವರ ಮಕ್ಕಳಿಗೆ ಅಥವಾ ಕುಟುಂಬಸ್ಥರಿಗೆ ಐಶ್ವರ್ಯ, ಉದ್ಯೋಗ, ಸಂತಾನ ಕೂಡ ಆಗೋದಿಲ್ಲ, ಜೀವನದಲ್ಲಿ ನೆಮ್ಮದಿ ಕೂಡ ಇರೋದಿಲ್ಲ. ಕುಟುಂಬಸ್ಥರ ಪ್ರಗತಿಗೆ ಅಡೆತಡೆ ಬರುವುದು. ಹೀಗಾಗಿ ಈ ಟೈಮ್‌ನಲ್ಲಿ ಬ್ರಹ್ಮಚರ್ಯ ಅನುಸರಿಸುವುದು ಮುಖ್ಯ. ದಂಪತಿಗಳು ದೈಹಿಕ ಸಂಬಂಧ ಬೆಳೆಸಿದರೆ, ಪೂರ್ವಜರಿಗೆ ಅಗೌರವ ಕೊಟ್ಟ ಹಾಗೆ ಎನ್ನಲಾಗುವುದು.
ದಂಪತಿಗಳು ಇಂದ್ರಿಯಗಳನ್ನು ನಿಯಂತ್ರಣ ಮಾಡಿದರೆ, ಒಳ್ಳೆಯ ಪುಣ್ಯ ಪಡೆಯುತ್ತಾರೆ ಎಂದು ಶಾಸ್ತ್ರವು ಹೇಳುವುದು. ಈ ಟೈಮ್‌ನಲ್ಲಿ ದಂಪತಿ ಒಂದಾಗಿ ಗರ್ಭ ಧರಿಸಿದರೆ, ಆ ಮಗುವಿನ ಆರೋಗ್ಯದ ಮೇಲೆ, ಜೀವನದ ಮೇಲೆ ನೆಗೆಟಿವ್ ಪರಿಣಾಮ ಬೀರುವುದು ಎನ್ನಲಾಗಿದೆ. ಮುಂದೆ ಆ ಮಗು ಅಂಗವಿಕಲ ಆಗಬಹುದು, ಅನಾರೋಗ್ಯದಿಂದ ಬಳಲಬಹುದು ಎಂದು ಹೇಳಲಾಗಿದೆ. ಹೀಗಾಗಿ ಲೈಂಗಿಕ ಸಂಬಂಧ ಹೊಂದಬಾರದು ಎಂದು ಹೇಳೋದುಂಟು.
ಶ್ರೀ ಭಗವದ್ಗೀತೆ ಪ್ರಕಾರ 16ನೇ ಅಧ್ಯಾಯದ 23-24 ನೇ ಶ್ಲೋಕಗಳಲ್ಲಿ, ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸಬೇಕು, ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಯಶಸ್ಸು ಸಿಗೋದಿಲ್ಲ ಎಂದು ಹೇಳಲಾಗಿದೆ.
ಹಿಂದೂ ಧರ್ಮದಲ್ಲಿ ಪಿತೃ ಪಕ್ಷವು ಪವಿತ್ರವಾದ 16 ದಿನಗಳ ಅವಧಿ. ಆದರೆ ಆ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡೋದಿಲ್ಲ, ಹೊಸ ಕೆಲಸಗಳನ್ನು ಆರಂಭಿಸೋದಿಲ್ಲ. ಈ ಟೈಮ್‌ನಲ್ಲಿ ಜನರು ಶ್ರಾದ್ಧ, ತರ್ಪಣ, ಪಿಂಡದಾನ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಈ ಮೂಲಕ ಪೂರ್ವಜರ ಆತ್ಮಕ್ಕೆ ಶಾಂತಿ, ಮೋಕ್ಷ ಸಿಗುತ್ತದೆ ಎನ್ನುತ್ತಾರೆ. ಪಿತೃ ಪಕ್ಷವನ್ನು ಮಹಾಲಯ ಪಕ್ಷ, ಸೋಲಾ ಶ್ರಾದ್ಧ, ಕನಗತ್, ಜಿತಿಯ ಅಥವಾ ಅಪರ ಪಕ್ಷ ಎಂದು ಹೇಳೋದುಂಟು.
ಚಿನ್ನ, ಬೆಳ್ಳಿ, ವಜ್ರಗಳನ್ನು ದಾನ ಮಾಡಿದರೂ ಕೂಡ, ಪೂರ್ವಜರಿಗೆ ಶ್ರಾದ್ಧ ಮಾಡದ ಕಾರಣ ಕರ್ಣನಿಗೆ ಸ್ವರ್ಗದಲ್ಲಿ ಆಹಾರ ಸಿಗಲಿಲ್ಲ. ಆಗ ದೇವತೆಗಳು ಅವನಿಗೆ 15 ದಿನಗಳ ಕಾಲ ಭೂಮಿಗೆ ಹಿಂದಿರುಗಿ ಶ್ರಾದ್ಧ ಮಾಡಲು ಅವಕಾಶ ನೀಡಿದರು. ಈ ಟೈಮ್‌ನ್ನು ಪಿತೃ ಪಕ್ಷ ಎಂದು ಕರೆಯಲು ಆರಂಭಿಸಿದರು. ಈ 16 ದಿನಗಳಲ್ಲಿ, ಹಿಂದೂಗಳು ತಮ್ಮ ಪೂರ್ವಜರಿಗೆ ಆಹಾರ, ನೀರು, ಪ್ರಾರ್ಥನೆಗಳನ್ನು ಮಾಡುತ್ತಾರೆ. ಆಗ ಆತ್ಮಗಳು ತೃಪ್ತಿ ಪಡೆಯುತ್ತವೆ. ಇದರಿಂದ ಅವರ ಆತ್ಮಗಳು ತೃಪ್ತಿಯಾಗಿ ಶಾಂತಿಯನ್ನು ಪಡೆಯುತ್ತವೆ ಎಂಬ ನಂಬಿಕೆ ಇದೆ.
ಈ ಸಮಯದಲ್ಲಿ ದಾನ, ಸಾತ್ವಿಕ ಆಹಾರ ಸೇವನೆ ಮಾಡುವುದು, ಬ್ರಹ್ಮಚರ್ಯ ಪಾಲನೆ ಮಾಡುವುದು, ಬ್ರಾಹ್ಮಣರಿಗೆ ಆಹಾರ ನೀಡುವುದು ಮುಖ್ಯವಾಗಿದೆ. 2025 ಸೆಪ್ಟೆಂಬರ್ 7-2025 ಸೆಪ್ಟೆಂಬರ್ 21, 2025 ರವರೆಗೆ ಪಿತೃಪಕ್ಷ ಆಚರಿಸಲಾಗುವುದು. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪಾದ ತಿಥಿಯಿಂದ ಆರಂಭವಾಗಿ ಮಹಾಲಯ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ.