ರಹಸ್ಯ ತಿಳಿದುಕೊಳ್ಳಿ, ಜಾತಕ ನೋಡಲು ಕಲಿಯಿರಿ

Published : Oct 13, 2018, 04:07 PM ISTUpdated : Oct 15, 2018, 10:05 AM IST
ರಹಸ್ಯ ತಿಳಿದುಕೊಳ್ಳಿ, ಜಾತಕ ನೋಡಲು ಕಲಿಯಿರಿ

ಸಾರಾಂಶ

ಒಂದು ಜಾತಕ ನೋಡಿ, ಭವಿಷ್ಯ ಹೇಳಲಿಕ್ಕೆ ಜ್ಯೋತಿಷಿಗಳು ಸಾವಿರಾರು ರು. ಇಸ್ಕೋತಾರೆ. ಅಷ್ಟಕ್ಕೂ ಒಂದೆರಡು ನಿಮಿಷದಲ್ಲಿ ಜಾತಕ ನೋಡಲು ಆಗುತ್ತಾ? ಈ ಜಾತಕ ನೋಡುವುದು ಹೇಗೆ? ಕಲಿಯರಿ, ನಿಮಗಾಗಿ ಸುವರ್ಣನ್ಯೂಸ್.ಕಾಮ್ ವಾರವೂ ಪ್ರಕಟಿಸುವಈ 'ಜಾತಕ ನೋಡಿ ಕಲೀರಿ' ಅಂಕಣದಲ್ಲಿ.

ಶಾಸ್ತ್ರ ರೀತಿಯಲ್ಲಿ ಜಾತಕ ಅಧ್ಯಯನ ಮಾಡಿದರೆ ಅದು ತೋರಿಸುವ ಭವಿಷ್ಯದ ದಾರಿ ಅರ್ಥವಾಗುತ್ತದೆಯೇ ವಿನಾ ಇಲ್ಲದೇ ಹೋದರೆ ಅದು ಶಾಸ್ತ್ರವಾಗುವುದಿಲ್ಲ. ಅದರ ಹೂರಣವೂ ಸಿಗುವುದಿಲ್ಲ. ಜ್ಯೋತಿಷ್ಯವೆಂಬುವುದು ಕುತೂಹಲ ಶಾಸ್ತ್ರ. ಇಲ್ಲಿ ಎಲ್ಲವೂ ಇದೆ. ಅರ್ಥ ಮಾಡಿಕೊಳ್ಳುವ ಶ್ರದ್ಧೆ, ನಂಬಿಕೆ ಎರಡೂ ಬೇಕು. 

ಒಂದು ಜಾತಕ ನೋಡಿದಾಗ ಅದರಲ್ಲಿ 12 ಮನೆ ಹಾಗೂ 9 ಗ್ರಹಗಳ ಸ್ಥಿತಿ ಕಾಣ್ಸತ್ತೆ. ಆದರೆ ಅದರ ಅರ್ಥ ಏನು..? ಆ ರಾಶಿಗೂ ನಮ್ಮ ಭವಿಷ್ಯಕ್ಕೂ ಹೇಗೆ ನಂಟು ಎಂಬುವುದು ಯಾವುದೂ ಅರ್ಥ ಆಗೋದಿಲ್ಲ. ಆದರೆ ಆ ಜಾತಕದಲ್ಲಿ ನಮ್ಮ ಇಡೀ ಜೀವನ ಭವಿಷ್ಯವೇ ಅಡಗಿರತ್ತೆ. ಆ ಭವಿಷ್ಯವನ್ನು ತಿಳಿಯುವ ಬಗೆ ಹೇಗೆ..? 

ಒಂದು ಜಾತಕ ಕೂಲಂಕಶವಾಗಿ ನೋಡುವಾಗ ಕ್ಷೇತ್ರ ಬಲ, ಹೋರಾ ಬಲ, ದ್ರೇಕ್ಕಾಣ ಬಲ, ನವಾಂಶ, ತ್ರಿಂಶಾಂಶ, ದ್ವಾದಶಾಂಶ ಬಲ ಇಷ್ಟನ್ನು ಗಮನಿಸಲೇಬೇಕು. ಇದನ್ನೂ ಮೀರಿ ಪರಿಶೀಲಿಸುವುದು ಇನ್ನೂ ಹಲವು ಇರುತ್ತೆ. ಮುಖ್ಯವಾಗಿ ಇಷ್ಟನ್ನು ನಾವು ಗಮನಿಸದೇ ಹೋದರೆ ಆ ಜಾತಕದ ಭವಿಷ್ಯ ತಿಳಿಯುವುದಾದರೂ ಹೇಗೆ..? 

ಜಾತಕದ ಭವಿಷ್ಯ ಬಿಡಿಸೋದು ಹೇಗೆ?

ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜಾತಕ ನೋಡಿಕೊಳ್ಳುವುದು ಹೇಗೆ..? ಹೇಗೆ ಆತ ತನ್ನ ಜಾತಕದೊಳಗೆ ಕಾಣುವ ಭವಿಷ್ಯವನ್ನ ಬಿಡಿಸಿ ನೋಡಿಕೊಳ್ಳಬೇಕು..? ಈ ರಹಸ್ಯ ಗೊತ್ತಾಗಿಬಿಟ್ಟರೆ ನಿಮ್ಮ ಭವಿಷ್ಯವನ್ನ ನೀವೇ ನೋಡಿಕೊಳ್ಳಬಹುದು.  ಒಂದು ಜಾತಕ ಅಂದ್ರೆ ಹನ್ನೆರಡು ಮನೆಗಳಿದ್ದು, ಕಾಲಾನ್ವಯ ಆ ಮನೆಗಳಲ್ಲಿ ಒಂಭತ್ತು ಗ್ರಹಗಳಿರುತ್ತವೆ.  
1. ಮೇಷ ರಾಶಿ
 2. ವೃಷಭ ರಾಶಿ 
3. ಮಿಥುನ ರಾಶಿ 
4. ಕರ್ಕಟಕ ರಾಶಿ 
5.ಸಿಂಹ ರಾಶಿ 
6. ಕನ್ಯಾ ರಾಶಿ 
7. ತುಲಾ ರಾಶಿ
 8. ವೃಶ್ಚಿಕ ರಾಶಿ 
9. ಧನಸ್ಸು ರಾಶಿ 
10. ಮಕರ ರಾಶಿ 
11. ಕುಂಭ ರಾಶಿ
 12. ಮೀನ ರಾಶಿ 

ಹೀಗೆ ಒಂದು ಜಾತಕದಲ್ಲಿ 12 ರಾಶಿಗಳಿರ್ತವೆ. ಒಂದೊಂದು ರಾಶಿಗೂ ಒಬ್ಬೊಬ್ಬ ಅಧಿಪತಿ ಇರುತ್ತಾನೆ. ಆ ಅಧಿಪತಿಗಳನ್ನೇ ಗ್ರಹಗಳು ಅಂತ ಕರಿಯೋದು. 

ಗ್ರಹಗಳು:

ಸಂಸ್ಕೃತದಲ್ಲಿ ಗ್ರಹವನ್ನು ಗೃಹ್ಣಾತೀತಿ ಗ್ರಹ. ಗ್ರಹಗ್ರಹಣೇ ಅದು ಅರ್ಥೈಸಲಾಗುತ್ತದೆ. ಅಂದರೆ ಯಾವುದು ಹಿಡಿದುಕೊಳ್ಳುತ್ತದೆಯೋ, ಯಾವುದು ಆವರಿಸಿಕೊಳ್ಳುತ್ತದೆಯೋ ಅದು ಗ್ರಹ. ಇದು ಶಾಸ್ತ್ರೀಯವಾಗಿ ಸಮ್ಮತವಾದ ವಿವೇಚನೆ. ಗ್ರಹಗಳು ಮನುಷ್ಯನನ್ನು ತಮ್ಮ ಪ್ರಭಾವದಿಂದ  ಹಿಡಿದುಹಾಕುತ್ತವೆ, ಆವರಿಸಿಬಿಡುತ್ತವೆ. ಗ್ರಹಗಳ ಪ್ರಭಾವದಲ್ಲಿ ಸಿಲುಕಿರುವ ವ್ಯಕ್ತಿಯು ತನ್ನ ಸ್ವಸ್ವಾತಂತ್ರ್ಯ, ಬುದ್ಧಿ, ವಿಚಾರಶಕ್ತಿಯನ್ನು ಗ್ರಹಗಳ ಗುಣಗಳಿಗೆ ಅನ್ವಯವಾಗಿ ಅನುಭವಿಸುತ್ತಾನೆ. ಅವು ಆಡಿಸಿದಂತೆ, ನಡೆಸಿದಂತೆ ವರ್ತಿಸುತ್ತಾನೆ. ಆಂಗ್ಲ ಭಾಷೆಯಲ್ಲಿ ಗ್ರಹಕ್ಕೆ ಪ್ಲಾನೆಟ್ ಎಂದು ಕರೆಯುತ್ತಾರೆ. ಗ್ರಹಗಳನ್ನು ಕೇವಲ ಆಕಾಶೀಯ ಕಾಯಗಳು ಎಂದು ಪಾಶ್ಚಾತ್ಯ ರೀತ್ಯಾ ಅರ್ಥೈಸಿದರೆ ಅವುಗಳ ಪ್ರಭಾವದ ವಿವರಣೆಯು ಸಮಂಜಸವಾಗುವುದಿಲ್ಲ. ಗ್ರಹಗಳು ಮನುಷ್ಯನ ಕರ್ಮಗಳಿಗನುವಾಗಿ ತಮ್ಮ ಪ್ರಭಾವವನ್ನು ಬೀರುತ್ತಾ ನಮ್ಮ ಆಯುರ್ಮಾನವಿಡೀ ಪ್ರೇರಕಶಕ್ತಿಗಳಾಗಿರುತ್ತವೆ.

ಹಾಗಾದರೆ ಆ ಗ್ರಹಗಳು ಯಾವುವು..? 

ಪ್ರಕಾಶ  ಗ್ರಹಗಳು
1. ಸೂರ್ಯ - 
2. ಚಂದ್ರ

ತಾರಾ ಗ್ರಹಗಳು
3. ಕುಜ (ಮಂಗಳ  )
4. ಬುಧ
5. ಗುರು
6. ಶುಕ್ರ
7. ಶನಿ.
ಛಾಯಾ ಗ್ರಹಗಳು
8. ರಾಹು 
9. ಕೇತು 

ಈ ಒಂಭತ್ತು ಗ್ರಹಗಳಲ್ಲಿ ರಾಹು ಕೇತುಗಳನ್ನು ಬಿಟ್ಟು ಉಳಿದ 7 ಗ್ರಹಗಳಿಗೆ ರಾಶಿ ಅಧಿಪತ್ಯವನ್ನು ಕೊಟ್ಟಿದ್ದಾರೆ. ಈ ರಾಹು ಕೇತುಗಳು ಛಾಯಾಗ್ರಹಗಳು. ಆದರೆ ಅವುಗಳಿಗೆ ಮನೆ ಇಲ್ಲದಿದ್ದರೂ ಅವು ಫಲ ಕೊಡುವಲ್ಲಿ ಪ್ರಭಾವ ಗ್ರಹಗಳಾಗಿವೆ. 


ಯಾವ ರಾಶಿಗೆ ಯಾರು ಅಧಿಪತಿ?
12 ರಾಶಿಗಳಿಗೆ ಅಧಿಪತಿಗಳಿದ್ದಾರೆ. ಆಯಾ ರಾಶಿಗೆ ಈ ಗ್ರಹಗಳೇ ಸ್ಥಾನಾಧಿಪತಿಗಳಾಗಿರುತ್ತಾರೆ. 



ಮೇಷ - ಕುಜ / ಮಂಗಳ
ವೃಷಭ  -  ಶುಕ್ರ 
ಮಿಥುನ  - ಬುಧ
ಕಟಕ  - ಚಂದ್ರ
ಸಿಂಹ  - ರವಿ
ಕನ್ಯಾ  - ಬುಧ
ತುಲಾ -  ಶುಕ್ರ
ವೃಶ್ಚಿಕ -  ಕುಜ / ಮಂಗಳ
ಧನಸ್ಸು -  ಗುರು
ಮಕರ -  ಶನಿ
ಕುಂಭ-  ಶನಿ
ಮೀನ -  ಗುರು

12 ರಾಶಿಗಳು, 9 ಗ್ರಹಗಳು  ಹಾಗೂ ಆ ರಾಶಿಗಳಿಗೆ ಯಾರ‍್ಯಾರು ಅಧಿಪತಿಗಳು ಅನ್ನೋದು ಅರ್ಥವಾಯ್ತು. ಮುಂದಿನ ಸಂಚಿಕೆಯಲ್ಲಿ ಈ ಗ್ರಹಗಳ ಸ್ವಭಾವ ಏನು..? ಯಾವ ರಾಶಿಯವರಿಗೆ ಎಂಥ ಸ್ವಭಾವ ಇರತ್ತೆ ಅನ್ನೋದನ್ನ ತಿಳಿಯುವುದು ಹೇಗೆ..? ಗ್ರಹಗಳ ಜೊತೆ ನಮ್ಮ ಗುಣವನ್ನು ಸಮನ್ವಯ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ನೋಡೋಣ. 

ಕಾಯ್ತಾ ಇರಿ...

- ಗೀತಾಸುತ
- ಸಂಪರ್ಕ ಸಂಖ್ಯೆ : +919164408090

PREV
click me!

Recommended Stories

ಈ ರಾಶಿಗೆ ಶನಿಯ ಮಾರಕ ಅಂಶ ಪದವಿ ನಷ್ಟ, ಸಂಪತ್ತು ನಷ್ಟ ಮತ್ತು ಆರೋಗ್ಯಕ್ಕೆ ಹಾನಿ
ಕುಂಭ ರಾಶಿಯಲ್ಲಿ ರಾಹು ಮತ್ತು ಬುಧ, ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಬೆಳ್ಳಿ, ಬೊಂಬಾಟ್‌ ಲಾಟರಿ