Job Or Business? ಜನ್ಮದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗದಲ್ಲಿದೆ ಸಕ್ಸಸ್​? ಸಂಖ್ಯಾಶಾಸ್ತ್ರಜ್ಞ ಕೊಟ್ಟ ಸಲಹೆ...

Published : Jul 16, 2025, 05:11 PM ISTUpdated : Jul 16, 2025, 05:14 PM IST
Job or Business

ಸಾರಾಂಶ

ಹುಟ್ಟಿದ ದಿನಾಂಕದ ಆಧಾರದ ಮೇಲೆ ವೃತ್ತಿಜೀವನದ ಯಶಸ್ಸನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞ ಅರವಿಂದ್ ವಿವರಿಸಿದ್ದಾರೆ. ಒಂದರಿಂದ ಒಂಬತ್ತು ಅಂಕೆಗಳಿಗೆ ಅನುಗುಣವಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಗಳಿಸುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಸಂಖ್ಯಾಶಾಸ್ತ್ರಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ವಿಭಿನ್ನ ಗುಣಗಳು ಇರುತ್ತವೆ. ಇದೇ ಕಾರಣಕ್ಕೆ ಹುಟ್ಟಿದ ದಿನಾಂಕದ ಪ್ರಕಾರ ಮದುವೆ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಅದೇ ರೀತಿ ಹುಟ್ಟಿದ ದಿನದ ಆಧಾರದ ಮೇಲೆ ನೀವು ಜಾಬ್​ ಮಾಡಿದ್ರೆ ಸಕ್ಸಸ್​ ಆಗ್ತಿರೋ ಅಥವಾ ಬಿಜಿನೆಸ್​ ಮಾಡಿದರೋ ಎನ್ನುವ ಬಗ್ಗೆ ಖ್ಯಾತ ಸಂಖ್ಯಾಶಾಸ್ತ್ರಜ್ಞ ಅರವಿಂದ್ ಅವರು ಇಲ್ಲಿ ಹೇಳಿದ್ದಾರೆ ನೋಡಿ...

ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದರೆ, ನಿಮ್ಮದು ನಂಬರ್​ 1. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ರಾಜನ ಸಂಖ್ಯೆ. ಆದ್ದರಿಂದ ನಿಮಗೆ ಬಿಜಿನೆಸ್​ ಆಗಿಬರುತ್ತದೆ.

ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದರೆ, ನಿಮ್ಮದು ನಂಬರ್​ 2. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಚಂದ್ರನ ಸಂಖ್ಯೆ. ಚಂದ್ರ 15 ದಿನ ಚಿಕ್ಕದಾಗುತ್ತಾ ಹೋಗುತ್ತಾನೆ, 15 ದಿನ ದೊಡ್ಡವನಾಗುತ್ತಾನೆ. ಚಂದ್ರನ ಗುಣ ಶೀತಲ, ಸೌಮ್ಯ. ಆದ್ದರಿಂದ ಅಂಥವರು ನೌಕರಿ ಮಾಡುವುದು ಒಳ್ಳೆಯದು.

ನೀವು ಯಾವುದೇ ತಿಂಗಳ 3, 12, 21, 30 ರಂದು ಜನಿಸಿದರೆ, ನಿಮ್ಮದು ನಂಬರ್​ 3. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಗುರುವಿನ ಸಂಖ್ಯೆ. ಗುರು ಎಂದರೆ ಜ್ಞಾನ. ಆದ್ದರಿಂದ ಇಂಥವರು ನೌಕರಿ ಅಥವಾ ಬಿಜಿನೆಸ್​ ಎರಡರಲ್ಲಿಯೂ ಸಕ್ಸಸ್​ ಕಾಣುತ್ತಾರೆ.

ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದರೆ, ನಿಮ್ಮದು ನಂಬರ್​ 4. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ರಾಹುವಿನ ಸಂಖ್ಯೆ. ಆದ್ದರಿಂದ ತುಂಬಾ ಕೋಪದ ಸಂಖ್ಯೆ. ಬಿಜಿನೆಸ್​ಗೆ ತುಂಬಾ ಉತ್ತಮರು. ಇವರು ಉದ್ಯೋಗದಲ್ಲಿ ಅಷ್ಟು ಸಕ್ಸಸ್​ ಕಾಣುವುದಿಲ್ಲ.

ನೀವು ಯಾವುದೇ ತಿಂಗಳ 5, 14, 23 ರಂದು ಜನಿಸಿದರೆ, ನಿಮ್ಮದು ನಂಬರ್​ 5. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಬುಧನ ಸಂಖ್ಯೆ. ಆದ್ದರಿಂದ ಇವರಿಗೆ ನೌಕರಿಯೇ ಉತ್ತಮ. ಬಿಜಿನೆಸ್​ ಕ್ಷೇತ್ರಕ್ಕೂ ಹೋಗಬಹುದು. ಆದರೆ ಸರಿಯಾದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.

ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದರೆ ನಿಮ್ಮದು ನಂಬರ್​ 6. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಶುಕ್ರನ ಸಂಖ್ಯೆ. ದಾವನ ಮತ್ತು ಗುರುವಿನ ಸಂಕೇತ ಆಗಿರುವುದರಿಂದ ಬಿಜಿನೆಸ್​ಗೆ ಹೇಳಿ ಮಾಡಿಸಿದ ಸಂಖ್ಯೆ ಇದು.

ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದರೆ ನಿಮ್ಮದು ನಂಬರ್​ 7. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಕೇತುವಿನ ಸಂಖ್ಯೆ. ಕೇತು ಎಂದರೆ ತಲೆ ಇಲ್ಲದವನು, ಬರೀ ದೇಹವೇ ಇರುವವನು ಎಂದರ್ಥ. ಆದ್ದರಿಂದ ಇದು ತುಂಬಾ ನಿಧಾನವಾಗಿರುವ ಗ್ರಹ. ಆದ್ದರಿಂದ ಜಾಬ್​ ಬೆಸ್ಟ್​ ಇವರಿಗೆ.

ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದರೆ ನಿಮ್ಮದು ನಂಬರ್​ 8. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಶನಿ ಗ್ರಹ. ಶನಿ ಎಂದರೆ ಅಗ್ರೆಸಿವ್​. ಆದ್ದರಿಂದ ಬಿಜಿನೆಸ್​ ಬೆಸ್ಟ್​.

ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದರೆ ನಿಮ್ಮದು ನಂಬರ್​ 9. ಈ ದಿನಾಂಕಗಳಂದು ಹುಟ್ಟಿದ ವ್ಯಕ್ತಿ ನೀವಾಗಿದ್ದರೆ, ನಿಮ್ಮದು ಮಂಗಳ ಗ್ರಹ. ಬಿಜಿನೆಸ್​ ಬೆಸ್ಟ್​.

 

 

PREV
Read more Articles on
click me!

Recommended Stories

ಎರಡು ಶಕ್ತಿಶಾಲಿ ರಾಜಯೋಗಗಳೊಂದಿಗೆ ನಾಳೆಯಿಂದ ಈ ಆರು ರಾಶಿ ಮುಟ್ಟಿದ್ದೆಲ್ಲವೂ ಚಿನ್ನ
New Year Mars Transit: ಮೀನ ರಾಶಿಗೆ ಮಂಗಳನ ಪ್ರವೇಶ: ಐದು ರಾಶಿಗೆ ಭಾಗ್ಯೋದಯ- ಆಸೆ ಈಡೇರುವ ಕಾಲ