
ಶನಿ ಹಿಡಿದಿದ್ದರೆ ಎಳ್ಳು ದೀಪ ಹಚ್ಚಬೇಕೆಂದು ಗೊತ್ತು. ಅಲ್ಲದೇ ಮನೆ ದೇವರಿಗೆ ದಿನಾಲೂ ಎಳ್ಳು ದೀಪ ಹಚ್ಚುವವರು ಇದ್ದಾರೆ. ಧರ್ಮ ಶಾಸ್ತ್ರದಲ್ಲಿ ತನ್ನದೇ ಮಹತ್ವ ಪಡೆದುಕೊಂಡಿರುವ ಎಳ್ಳು ದೀಪವನ್ನು ಯಾರು, ಯಾವಾಗ, ಎಲ್ಲಿ ಹಚ್ಚಬಹುದು?
- ಮನೆಯಲ್ಲಿ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳು ನಡೆಯುವಾಗ ಯಾವುದೇ ಕಾರಣಕ್ಕೂ ಎಳ್ಳು ದೀಪಗಳನ್ನು ಹಚ್ಚಬಾರದು.
- ಮನೆಯಲ್ಲಿ ಸೂತಕ ಇರುವಾಗ ಯಾವುದೇ ಕಾರಣಕ್ಕೂ ಎಳ್ಳು ದೀಪವನ್ನು ಹಚ್ಚಬಾರದು.
- ಎಳ್ಳು ದೀಪಗಳನ್ನು ಹಚ್ಚಿದ ನಂತರ ಬರುವ ಕಪ್ಪನ್ನು ಹಣೆಗಾಗಲೀ ಅಥವಾ ಕಣ್ಣಿಗಾಗಲೀ ಹಚ್ಚಿಕೊಳ್ಳಬಾರದು.
- ಒಬ್ಬರ ಪರವಾಗಿ ಇನ್ನೊಬ್ಬರು ಎಳ್ಳು ದೀಪಗಳನ್ನು ಹಚ್ಚಬಾರದು.
- ಒಂದೇ ಕುಟುಂಬದಲ್ಲಿ ಇಬ್ಬರು ಬೇರೆ ಬೇರೆಯಾಗಿ ಎಳ್ಳು ದೀಪಗಳನ್ನು ಹಚ್ಚಬಾರದು.
- ಗಂಡ-ಹೆಂಡತಿ ಇಬ್ಬರಿಗೂ ಶನಿಕಾಟವಿದ್ದಾಗ ಇಬ್ಬರೂ ಜೊತೆಯಲ್ಲಿ ಶನೈಶ್ಚರ ಸ್ವಾಮಿಯ ದೇವಾಲಯದಲ್ಲಿ ಎಳ್ಳು ದೀಪಗಳನ್ನು ಹಚ್ಚಿ, ಶನಿಯ ಪ್ರಭಾವದಿಂದ ಮುಕ್ತಿ ಕೊಡುವಂತೆ ಪ್ರಾರ್ಥಿಸಬೇಕು.
- ಹೆಂಗಸರು ರಜಸ್ವಲೆಯರಾದಾಗ ಎಳ್ಳು ದೀಪ ಹಚ್ಚಬಾರದು.
- ಎಳ್ಳು ದೀಪಗಳನ್ನು ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಾಗಲೀ, ಸಂಬಂಧಿಕರ ಅಥವಾ ಮಿತ್ರರ ಮನೆಯಲ್ಲಾಗಲೀ ಹಚ್ಚಬಾರದು.
- ಎಳ್ಳು ದೀಪಗಳನ್ನು ಶನೈಶ್ಚರ ಸ್ವಾಮಿಯ ದೇವಾಲಯ, ನವಗ್ರಹ ದೇವಾಲಯ, ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಹಚ್ಚಬಹುದು.
- ಪ್ರತಿ ಶನಿವಾರಗಳಂದು ಎಳ್ಳೆಣ್ಣೆ ಸ್ನಾನ ಮಾಡಿ, ಶನಿದೇವರಿಗೆ ನೀಲಿಯ ಹೂವಿನಿಂದ ಪೂಜೆ ಮಾಡಿ, ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ,
- 09 ಶನಿವಾರಗಳಂದು ತಪ್ಪದೇ ನಿರಂತರವಾಗಿ ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ, ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸಿದರೆ ಕಷ್ಟ ನಿವಾರಣೆಯಾಗುತ್ತದೆ.
- ಸಾಡೇಸಾತಿ ಶನಿ ಪ್ರಭಾವ ಇರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪ ಹಚ್ಚಿ, ಶನಿವಾರ ಒಂದು ಹೊತ್ತು ಮಾತ್ರ ಊಟ ಮಾಡಿ, ಬ್ರಹಚರ್ಯ ವ್ರತ
ಪಾಲಿಸಬೇಕು.
- ಸಾಡೇಸಾತಿ ಶನಿಯ ಪ್ರಭಾವವಿರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪ ಹಚ್ಚಿ ಎಳ್ಳು, ಉದ್ದು, ಉಪ್ಪು, ಎಳ್ಳೆಣ್ಣೆ, ಜಾಜಿಕಾಯಿ ಇವುಗಳನ್ನು ದಾನ
ಮಾಡಬೇಕು.
- ಸಾಡೇಸಾತಿ ಶನಿಯ ಪ್ರಭಾವವಿರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ ಶನೈಶ್ಚರ ಸ್ವಾಮಿಯ ಅಷ್ಟೋತ್ತರ ಪಠಿಸಬೇಕು.
- ಎಳ್ಳು ದೀಪವನ್ನು ಹಚ್ಚುವುದರಿಂದ ಕೆಲಸ ಕಾರ್ಯಗಳಲ್ಲಿನ ವಿಘ್ನಗಳು ದೂರವಾಗುತ್ತವೆ.
- ಎಳ್ಳು ದೀಪದಿಂದ ಶನಿಯ ಪ್ರಭಾವ ಕಡಿಮೆಯಾಗಿ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ.
- ಎಳ್ಳು ದೀಪವನ್ನು ಹಚ್ಚಿದ ಮೇಲೆ ಆಂಜನೇಯ ಸ್ವಾಮಿ ಅಥವಾ ಗಣಪತಿಯ ದರ್ಶನ ಮಾಡುವುದರಿಂದ ಎಲ್ಲಾ ರೀತಿ ಕಷ್ಟಗಳೂ ಶಮನವಾಗುತ್ತವೆ.
- ಎಳ್ಳು ದೀಪವನ್ನು ಶನಿವಾರ ಬೆಳಿಗ್ಗೆ ಅಥವಾ ಸಾಯಂಕಾಲ ಹಚ್ಚಬಹುದು.
- ಶನೈಶ್ಚರ ಸ್ವಾಮಿ ಮುಂದೆ ಎಳ್ಳು ದೀಪವನ್ನು ಹಚ್ಚಿದರೆ, ಸಾಡೇಸಾತಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಪಂಚಮ ಶನಿಯ ಪ್ರಭಾವಕ್ಕೊಳಗಾಗಿರುವವರು
ಅಥವಾ ಶನಿ ದೆಶೆ ನಡೆಯುತ್ತಿರುವವರು ದುಷ್ಪರಿಣಾಮಗಳಿಂದ ಮುಕ್ತರಾಗಬಹುದು.
- ಶನೈಶ್ಚರ ಸ್ವಾಮಿಗೆ ಅತ್ಯಂತ ಪ್ರಿಯವಾದದ್ದು ಎಳ್ಳು. ಎಳ್ಳೆಣ್ಣೆಯ ಅಭಿಷೇಕ, ಎಳ್ಳಿನ ದಾನ, ಎಳ್ಳೆಣ್ಣೆಯ ದೀಪ ಸೇವೆ, ಎಳ್ಳಿನ ದಾನ ಇವೆಲ್ಲವೂ ವಿಶೇಷ.