ಯಾವ ಮನೆಯಲ್ಲಿ ಯಾವ ಗ್ರಹವಿದೆ? ಯಾರಿಗೇನು ಫಲ?

First Published Jun 20, 2018, 10:57 AM IST
Highlights

ಗುರು, ಶುಕ್ರ, ಶನಿ, ರಾಹು, ಕೇತು... ತಮ್ಮ ಸ್ಥಾನಗಳನ್ನು ಆಗಾಗ ಬದಲಿಸುತ್ತಲೇ ಇರುತ್ತವೆ. ಯಾವ ಮನೆಯಲ್ಲಿ ಯಾವ ಗ್ರಹವಿದೆ? ಯಾರಿಗೇನು ಲಾಭ? ನಷ್ಟ ಅನುಭವಿಸುವುದನ್ನು ತಡೆಯಲು ದೋಷ ಪರಿಹಾರವೇನು? ಇಲ್ಲಿದೆ ಡಿಟೈಲ್ಸ್. ನಿಮ್ಮ ಜಾತಕ ನಿಮ್ಮ ಕೈಯಲ್ಲಿ.

ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಶುಕ್ಲ ಪಕ್ಷ
ಅಷ್ಟಮಿ ತಿಥಿ
ಉತ್ತರ ಫಲ್ಗುಣಿ ನಕ್ಷತ್ರ

ಮೇಷ ರಾಶಿ:  ನೋಡಿ ಇಂದು ನಿಮ್ಮ ರಾಶಿಯಿಂದ ಪಂಚಮದಲ್ಲಿ  ಚಂದ್ರನಿದ್ದಾನೆ ಹಾಗಿದ್ದಾಗ ನಿಮ್ಮ ರಾಶಿಗೆ ಎಂಥ ಫಲಗಳಿರಬಹುದು ಚಿಂತಿಸೋಣ. ಚಂದ್ರನಿಂದ ಪಂಚಮದಲ್ಲಿ ಶನಿ ಇರುವುದರಿಂದ ಮಕ್ಕಳಿಂದ ಸ್ವಲ್ಪ ತೊಂದರೆ, ಶಾಲೆಗಳಲ್ಲಿ ಮಕ್ಕಳು ಎಡವಟ್ಟು ಮಾಡಿಕೊಂಡು ಆ ಸಮಸ್ಯೆಯನ್ನ ನೀವು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯದಲ್ಲಿಯೂ ಕೂಡ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಜಾಗ್ರತೆ ಇರಲಿ.
ದೋಷ ಪರಿಹಾರ - ಆಂಜನೇಯ ಸ್ವಾಮಿಗೆ 5 ಪ್ರದಕ್ಷಿಣೆಹಾಕಿ.  

ವೃಷಭ: ಇಂದು ನೀವಂದುಕೊಂಡ ಗುರಿಯನ್ನು ಮುಟ್ಟಲು ಪ್ರಯಾಸಪಡಬೇಕಾಗುತ್ತದೆ. ಮಿತ್ರರಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ಗಂಟಲು ತೊಂದರೆ ಜೊತೆ ಅಷ್ಟಮದ ಶನಿ ನಿಮ್ಮ ಕಾಲಿಗೆ ಪೆಟ್ಟುತರಬಹುದು. ಓಡಾಡುವಾಗ ಸ್ವಲ್ಪ ಎಚ್ಚರವಹಿಸಿದರೆ ಸಾಕು. 
ದೋಷ ಪರಿಹಾರ : ಅಂಥ ಸಮಸ್ಯೆಯನ್ನು ಕಾಣಲಾರಿರಿ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ನಮಸ್ಕಾರ ಮಾಡಿ ಸಾಕು.

ಮಿಥುನ: ವ್ಯಾಪಾರ ಸ್ಥಳದಲ್ಲಿ ಏನಾದರೂ ಕಳೆದುಕೊಳ್ಳುವ ಸಂಭವವಿದೆ. ಜಾಗ್ರತೆ ಇಂದ ನೋಡಿಕೊಳ್ಳಿ, ಸಹೋದರಿಯರು ಸಹಾಯ ಮಾಡುತ್ತಾರೆ. ಪಂಚಮದಲ್ಲಿರುವ ಗುರು ನಿಮ್ಮ ಮಕ್ಕಳಿಂದ ಸಂತೋಷವನ್ನು ಕೊಡುತ್ತಾನೆ, ಶುಭ ಸುದ್ದಿಯನ್ನು ಕೇಳಲಿದ್ದೀರಿ.
ದೋಷ ಪರಿಹಾರ: ಹತ್ತಿರದ ದೇವಾಲಯದಿಂದ ಒಂದು ನಿಂಬೆಹಣ್ಣನ್ನು ಮಂತ್ರಿಸಿ ತಂದು ನಿಮ್ಮ ವ್ಯಾಪಾರ ಸ್ಥಳದಲ್ಲಿ ಕಟ್ಟಿ. ಅನೂಕೂಲವಾಗುತ್ತದೆ.

ಕಟಕ: ಇಬ್ಬರು ಹೆಣ್ಣುಮಕ್ಕಳಿಂದ ತೊಂದರೆ ಅನುಭವಿಸಲಿದ್ದೀರಿ, ಕಪ್ಪು ವ್ಯಕ್ತಿ ನಿಮ್ಮನ್ನು ಮೋಸ ಮಾಡಬಹುದು ಎಚ್ಚರದಿಂದಿರಿ ಎಲ್ಲರಿಗೂ ಈ ಸಮಸ್ಯೆ ಅನ್ವಯವಾಗುವುದಿಲ್ಲ. ಯೋಚಿಸಬೇಡಿ. ಕೆಲವರು ಜಾಗ್ರತೆಯಿಂದ ಇದ್ದರೆ ಸಾಕು. 
ದೋಷ ಪರಿಹಾರ : ಮಂತ್ರಾಕ್ಷತೆ ಜೇಬಲ್ಲಿಟ್ಟುಕೊಳ್ಳಿ, ಅರ್ಚನೆ ಮಾಡಿದ ಕುಂಕುಮ ಹಣೆಗೆ ಧರಿಸಿ ಸಹಾಯವಾಗುತ್ತದೆ.

ಸಿಂಹ: ನಿಮ್ಮ ಮಕ್ಕಳು ಎಡವಿಬೀಳುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಿಮ್ಮ ಸೊಂಟ ಭಾಗದಲ್ಲಿ ನೋವು ಕಾಣಿಸಲಿದೆ. ಮುಖ್ಯ ಸಂಗತಿ ಅಂದ್ರೆ ದೂರದ ಊರಿನಿಂದ ಒಂದು ಶುಭವಾರ್ತೆ ಕೇಳಲಿದ್ದೀರಿ 
ದೋಷ ಪರಿಹಾರ: 'ನಮಸ್ತೆ ಅಸ್ತು ಭಗವನ್ವಿಶ್ವೇಶ್ವರಾಯ ಮಹಾ ದೇವಾಯ ನಮ:’ ಈ ಮಂತ್ರವನ್ನು 11 ಬಾರಿ ಹೇಳಿಕೊಳ್ಳಿ. ಸರ್ವ ದೋಷ ನಿವಾರಣೆಯಾಗಲಿದೆ.

ಕನ್ಯಾ: ಕೆಲ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ, ಕೆಲವರು ಮನೆಯಲ್ಲಿನ ಬಂಧುಗಳಿಂದ ಕಟು ಮಾತನ್ನು ಕೇಳಲಿದ್ದೀರಿ. ನಿಮ್ಮಲ್ಲಿ ಒಂದು ಮೊಂಡು ಧೈರ್ಯ ಮೂಡಲಿದೆ. ಹೆಚ್ಚು ಯೋಚಿಸುವ ಅಗತ್ಯವೇನಿಲ್ಲ. 
ದೋಷ ಪರಿಹಾರ : ಮಾತು ಕಡಿಮೆ ಮಾಡಿ ಅದೇ ಇಂದಿನ ಪರಿಹಾರ ಮಾರ್ಗ.

ತುಲಾ: ಭಾಗ್ಯ ಸ್ಥಾನದಲ್ಲಿ ರವಿ-ಬುಧರ ಯುತಿ ಇರುವುದರಿಂದ ಬರಬೇಕಿದ್ದ ಹಣ ಖಂಡಿತಾ ಬರಲಿದೆ, ಉದ್ಯೋಗದಲ್ಲೂ ಕೀರ್ತಿ ಲಾಭವಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ ಮಾತ್ರ ತಪ್ಪಿದ್ದಲ್ಲ. ಯೋಚಿಸದಿರಿ ನಿಮಗೇ ಜಯ.
ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ 3 ಕೆಂಪು ಹೂವನ್ನು ಸಮರ್ಪಿಸಿ ಬನ್ನಿ.

ವೃಶ್ಚಿಕ: ಧನಸ್ಥಾನದಲ್ಲಿ ಶನಿ ಇದ್ದಾನೆ, ಧನಾಧಿಪತಿ ವ್ಯಯದಲ್ಲಿದ್ದಾನೆ ನಾಳೆ ಚಂದ್ರ ಕನ್ಯಾ ರಾಶಿಗೆ ಹೋಗುತ್ತಾನೆ ಇವೆಲ್ಲವನ್ನ ತಾಳೆಮಾಡಿ ನೋಡಿದರೆ ಸ್ವಲ್ಪ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನೆರಡು ಮೂರು ದಿನ ಸ್ವಲ್ಪ ಜಾಗೃತೆಯಿಂದ ಇರಿ.
ದೋಷ ಪರಿಹಾರ : ಮುಂಜಾನೆಯೇ   ಶಿವ ದೇವಸ್ಥಾನಕ್ಕೆ ಹೋಗಿ ದೇವಾಲಯದ ಕಸ ಗುಡಿಸಿ ಬನ್ನಿ. ನನಗೆ  ಗೊತ್ತು ನೀವು ಹೋಗಲ್ಲ. ಆದ್ರೆ ಸೇವೆ ಮಾಡಿಬನ್ನಿ ಆನಂತರದ ಚಮತ್ಕಾರ ನಿಮ್ಮ ಅನುಭವಕ್ಕೆ ಬರುತ್ತದೆ.

ಧನಸ್ಸು: ಸಾಡೇಸಾತ್ ನಿಮ್ಮನ್ನು ಕಾಡಿರುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆ ಆಗಿರುವುದಿಲ್ಲ ಕಾರಣ ಶನಿ ನಿಮ್ಮ ಜಾತಕದಲ್ಲಿ ಒಳ್ಳೆ ಸ್ಥಾನದಲ್ಲಿರಬಹುದು. ಇರಲಿ ಸಂತೋಷ ಆದರೆ ಧನಸ್ಥಾನದ ಕುಜ, ಕೇತು ಸ್ವಲ್ಪ ಜಗಳ ತರಲಿದ್ದಾನೆ. ಎಚ್ಚರದಿಂದಿರಿ. 
ದೋಷ ಪರಿಹಾರ: ಗಂಪತಿಗೆ ದೇವಸ್ಥಾನಕ್ಕೆ 21 ಕೆಂಪು ಹೂವನ್ನು ಸಮರ್ಪಿಸಿ ಬನ್ನಿ.

ಮಕರ: ದೇಹ ಕೃಷವಾಗಲಿದೆ, ಸ್ವಲ್ಪ ಆಯಾಸ ಸುಸ್ತನ್ನು ಅನುಭವಿಸಬೇಕಾದೀತು, ಆದರೆ ಹಾಗೇ ಚೇತರಿಕೆಯೂ ಒದಗಲಿದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ವಾಗ್ವಾದವಾಗಬಹುದು. ಸ್ವಲ್ಪ ಅನುಸರಿಸಿಕೊಮಡು ಹೋಗಿ.
ದೋಷ ಪರಿಹಾರ: ಮನೆ ದೇವರಿಗೆ ಎಳನೀರಿನ್ನು ನೈವೇದ್ಯ ಮಾಡಿ ಆ ಎಳನೀರನ್ನ ಕುಡಿದುಬಿಡಿ. ಇರುವ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ.

ಕುಂಭ: ಹೆಂಡತಿ ಮಾತಿಗೆ ಮಣಿಯಬೇಕಾಗುತ್ತದೆ. ಸಂತೋಷದಿಂದ ಒಪ್ಪಿಕೊಳ್ಳಿ, ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮದೇ ಮೇಲುಗೈ, ಗುರುವಿನ ಅನುಕೂಲವಿದೆ. ಹೆಚ್ಚು ಯೋಚಿಸುವ ಅಗತ್ಯವೇನಿಲ್ಲ.
ದೋಷ ಪರಿಹಾರ : ಅರ್ಧನಾರೀಶ್ವರ ದೇವಾಲಯವಿದ್ದರೆ ದಂಪತಿಗಳು ದರ್ಶನ ಮಾಡಿಬನ್ನಿ. ಇಲ್ಲವಾದರೆ ದೇವರ ಫೋಟೋನೋಡಿ ನಮಸ್ಕರಿಸಿ. 

ಮೀನ: ಸುಖ ಸ್ಥಾನದಲ್ಲಿರುವ ರವಿ-ಬುಧರ ಯುತಿ ಮನೆ ಸೌಖ್ಯ, ವಾಹನ ಸೌಖ್ಯ, ಬಂಧು ಸೌಖ್ಯ ತರಲಿದೆ. ನಿಮ್ಮ ಮನಸ್ಸನ್ನು ಕಾಡುವ ಯುವತಿಯಿಂದ ಸ್ವಲ್ಪ ಚಿತ್ತ ವಿಕಾರವೂ ಆಗಲಿದೆ. ದೇವಿ ದೇವಸ್ಥಾನಕ್ಕೆ ಹೋಗಿಬನ್ನಿ.
ದೋಷ ಪರಿಹಾರ : ಗುರು ಸನ್ನಿಧಿಗೆ ಹಳದಿ ವಸ್ತ್ರ ದಾನ ಮಾಡಿ. ಸಮಾಧಾನವಾಗಲಿದೆ.

- ಗೀತಾಸುತ.

click me!