ಮನಸ್ಸಿಗೆ ನೆಮ್ಮದಿ ನೀಡೋ 'ಮನೆ'ಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿದ್ದರೆ ಮಾತ್ರ ಖುಷ್ ಖುಷಿಯಾಗಿರ್ಲಿಕ್ಕೆ ಸಾಧ್ಯ. ಯಾವುದೋ ಅನಿಷ್ಟ ಶಕ್ತಿ ಮನೆಯೊಳಗೆ ಹೊಕ್ಕು ಕೊಡೋ ಕಾಟ ಅಷ್ಟಿಷ್ಟಲ್ಲ. ಅಷ್ಟಕ್ಕೂ ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸುವುದು ಹೇಗೆ?
ಎಷ್ಟೇ ದಣಿದು ಮನೆಗೆ ಬಂದರೂ, ಮನೆನೀಡುವ ನೆಮ್ಮದಿ ನಮ್ಮನ್ನು ಆವರಿಸುತ್ತದೆ. ಮನೆಯವರೊಂದಿಗೆ ಒಂದ್ನಾಲ್ಕು ಮಾತನಾಡಿ, ಹರಟೆ ಹೊಡೆದಾಗಲೇ ಜೀವನ ಸಾರ್ಥಕ ಎನಿಸುವುದು. ಅಲ್ಲದೇ ಪೋಷಕರು ಮಕ್ಕಳಿಗೆ ಅನಕೂಲವಾಗುವಂಥ ವಾತವರಣ ಸೃಷ್ಟಿಸಬೇಕು. ವೃದ್ಧರಿದ್ದರೆ ಅವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು.
ಏನು ಮಾಡಬೇಕು ಅದಕ್ಕೆ?
ಮನೆಯಲ್ಲಿರುವ ಎಲ್ಲಾ ಬಾಗಿಲು - ಕಿಟಕಿಗಳನ್ನು ಸದಾ ತೆರೆದಿಡಬೇಕು. ಮನೆಗೆ ಶುದ್ಧ ಗಾಳಿ ಮತ್ತು ಸೂರ್ಯ ಕಿರಣಗಳು ಬಿದ್ದರೆ ಎಲ್ಲಾ ದರಿದ್ರಗಳೂ ದೂರವಾಗುತ್ತದೆ.
ಬಳಸದೇ ಇರುವ ವಸ್ತು ಹಾಗೂ ಕಸವನ್ನು ಹೊರ ಹಾಕುತ್ತಿರಬೇಕು. ಆಗ ಮನೆಯ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ಮನೆಯೊಳಗೆ ಬರೀಗಾಲಲ್ಲಿ ನಡೆಯಬೇಕು. ಇದರಿಂದ ದುಷ್ಟ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ.
ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು. ಮನೆಯೊಳಗೆ ಚಪ್ಪಲಿ ಧೂಳು ಬಂದರೆ ನೆಗಟಿವ್ ಎನರ್ಜಿ ಒಳ ಬಂದಂತೆ.
ಮನೆ ಹೊರ ಪ್ರಪಂಚ ಹಾಗೂ ಪರಿಸರದೊಡನೆ ಕನೆಕ್ಟ್ ಆಗಿದ್ದರೆ, ಮನಸ್ಸಿಗೂ ಹಿತ, ದೇಹಕ್ಕೂ ಸುಖ.
ದಿನಾ ಮನೆಯನ್ನು ಗುಡಿಸಿ, ಓರೆಸಬೇಕು. ಇದರಿಂದ ದುಷ್ಟ ಶಕ್ತಿ ನಿವಾರಣೆಯಾಗುತ್ತದೆ.
ಕೈ ಹಿಡಿಯಷ್ಟು ಉಪ್ಪಿನಿಂದ ಮನೆಯನ್ನು ಆಗಾಗ ಸ್ವಚ್ಛಗೊಳಿಸಬೇಕು.
ಮನೆ ಸುತ್ತ ಅಥವಾ ಹೊರಗಡೆ ಗಿಡ ನೆಡಬೇಕು.
ವಾರಕ್ಕೊಮ್ಮೆ ಕಾಲು ಮತ್ತು ಕೈಯನ್ನು ಉಪ್ಪು ನೀರಿನಲ್ಲಿ ಕೆಲ ಕಾಲ ನೆನೆಸಿಕೊಂಡು ತೊಳೆದರ, ಒಳಿತು.