Astrology: ಮುಂದಿನ 92 ದಿನಗಳು ಈ ನಾಲ್ಕು ರಾಶಿಗಳಿಗೆ ಸ್ವರ್ಣಯುಗ

Published : Sep 24, 2026, 06:36 PM IST
Horoscope

ಸಾರಾಂಶ

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಗ್ರಹಗಳ ಸಂಚಾರದಲ್ಲಿನ ಬದಲಾವಣೆಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರಲಿವೆ. ಈ ಮುಂದಿನ 92 ದಿನಗಳು ಸಿಂಹ, ತುಲಾ, ವೃಷಭ ಮತ್ತು ಮಕರ ರಾಶಿಗಳಿಗೆ ಭಾರೀ ಆರ್ಥಿಕ ವೃದ್ಧಿ ಹಾಗೂ ಲಾಭವನ್ನು ತಂದುಕೊಡಲಿವೆ.

ವೇಗವಾಗಿ ಸಾಗುತ್ತಿರುವ ಕಾಲಚಕ್ರದಲ್ಲಿ, ಗ್ರಹಗಳಲ್ಲಿನ ಬದಲಾವಣೆಗಳು ಮಾನವನ ಜೀವನ ಮೇಲೆ ಪ್ರಭಾವವನ್ನು ಉಂಟು ಮಾಡುತ್ತವೆ. ಈ ವರ್ಷದ ಅಂತಿಮ ಮೂರು ತಿಂಗಳು ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಗುರು, ಶುಕ್ರ, ಶನಿ, ಬುಧ ಗ್ರಹಗಳ ಸಂಚಾರದಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ. ಈ 92 ದಿನಗಳು ಕೆಲವು ರಾಶಿಗಳಿಗೆ ಲಾಭ ಹಾಗೂ ಭಾರೀ ಪ್ರಮಾಣದ ಆರ್ಥಿಕ ವೃದ್ಧಿಯನ್ನು ನೀಡುತ್ತದೆ. ಆ ದೃಷ್ಟ ರಾಶಿಗಳ ವಿವರಗಳು ಇಂತಿದೆ.

ಸಿಂಹ ರಾಶಿ

2026ರ ಕೊನೆಯ ತ್ರೈಮಾಸಿಕ ಸಿಂಹ ರಾಶಿ ಅವರಿಗೆ ಅದ್ಭುತವಾದ ತಿರುವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬದಲಾವಣೆ ಕಾಣಬೇಕು ಎಂದರೆ, ಪ್ರಮುಖ ಸಂಸ್ಥೆಗಳಿಂದ ಆಫರ್ ಬರಲಿದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆಗಳು ಸಿಗಲಿದೆ. ಹೊಸ ಜವಾಬ್ದಾರಿಗಳು ಸಿಗಲಿದೆ. ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಆರ್ಥಿಕವಾಗಿ ಬಲಗೊಳ್ಳುತ್ತಾರೆ. ಆದರೆ ಆದಾಯದೊಂದಿಗೆ ಖರ್ಚುಗಳು ಕಡಿಮೆ ಮಾಡಿಕೊಂಡರೆ ಮತ್ತಷ್ಟು ಸಂಪತ್ತು ಗಳಿಸಬಹುದು.

ತುಲಾ ರಾಶಿ

ತುಲಾ ರಾಶಿ ಅವರಿಗೆ ಈ 92 ದಿನಗಳು ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ದೂರ ಆಗಲಿದೆ. ಯಾರಿಗಾದರೂ ಸಾಲವಾಗಿ ಹಣ ನೀಡಿ, ಬಹಳ ದಿನಗಳಿಂದ ವಾಪಸ್ ಬಾರದ ಹಣ ವಾಪಸ್ ಬರುವ ಸಾಧ್ಯತೆ ಇದೆ. ಹೊಸ ಪರಿಚಯಗಳು, ಹೊಸ ವ್ಯಾಪಾರಿಗಳು ನಿಮ್ಮ ವ್ಯಾಪಾರಕ್ಕೆ ಲಾಭವನ್ನು ತಂದು ಕೊಡುತ್ತಾರೆ. ಆದರೆ ಹೊಸ ಹೂಡಿಕೆ ಮಾಡುವ ಸಂದರ್ಭದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದೆ, ಯೋಚನೆ ಮಾಡಿ ಮುಂದೆಜ್ಜೆ ಹಾಕುವುದು ಉತ್ತಮ

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ಸಮಯ ಬಹಳ ಅನುಕೂಲವಾಗಿರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪತ್ರಿಫಲ ಸಿಗುವ ಹತ್ತಿರ ಬಂದಿದೆ. ಕೆಲ ಸಮಯದಿಂದ ನೆನಗುದಿಗೆ ಬಿದ್ದಿರುವ ಕೆಲಸಗಳು ಒಂದೊಂದಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮಾಡುವವರಿಗೂ ಇದು ಅನುಕೂಲಕರ ಸಮಯ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭಗಳು ಸಿಗಲಿದೆ. ಆದರೆ ಯಾವುದೇ ವಿಚಾರದಲ್ಲಿ ಯಾರನ್ನು ಕಣ್ಣುಮುಚ್ಚಿ ನಂಬುವ ಬದಲು, ನಂಬಿಕೆ ಇದ್ದರೆ ಮಾತ್ರ ಕೆಲಸ ಮುಂದುವರಿಸಿದರೆ ಗೆಲುವು ನಿಮ್ಮದಾಗುತ್ತದೆ.

ಮಕರ ರಾಶಿ

ಕಷ್ಟಕ್ಕೆ ತಕ್ಕ ಫಲ ಸಿಗುವ ಕಾಲ ಮಕರ ರಾಶಿ ಅವರಿಗೆ ಹತ್ತಿರವಾಗಲಿದೆ. ಹಳೆಯ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ, ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳಲಿದೆ. ಉದ್ಯೋಗದಲ್ಲಿ ಈ ಹಿಂದಿನ ಉತ್ತಮ ಹುದ್ದೆ, ಗೌರವ ಸಿಗಲಿದೆ. ದೊಡ್ಡ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆದರೆ ನೀವು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು, ನಿಮ್ಮ ಜೀವನವನ್ನು ಯಶಸ್ಸಿನ ಕಡೆಗೆ ಸಾಗುವಂತೆ ಮಾಡಲಿದೆ.

PREV
Read more Articles on
click me!

Recommended Stories

ಕೇರಳ ಪದ್ಮನಾಭಸ್ವಾಮಿ ದೇಗುಲದ ಗೋಪುರದಲ್ಲಿ ದೈವಿಕ ವಿಸ್ಮಯ, ಸೂರ್ಯಾಸ್ತದ ರಮಣೀಯ ದೃಶ್ಯ ಕಂಡು ಆನಂದ್ ಮಹೀಂದ್ರಾ ಫಿದಾ!
ಪಿತೃ ಪಕ್ಷದಲ್ಲಿ ಶುಭ ಕಾರ್ಯ ಯಾಕೆ ಮಾಡಬಾರದು? ಈ ಕೆಲಸ ಮಾಡಿದ್ರಂತೂ ಮುಗಿದೇಹೋಯ್ತು!