ಜಗತ್ತಿನಲ್ಲೇ ಪವಿತ್ರ ಸ್ಥಳ ಗೋಕರ್ಣ; ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀ

By Suvarna News  |  First Published Oct 22, 2022, 11:34 AM IST

ಜಗತ್ತಿನಲ್ಲೇ ಪವಿತ್ರವಾಗಿರುವ ಸ್ಥಳ ಗೋಕರ್ಣ. ಆತ್ಮಲಿಂಗಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಪರಶಿವನ ಆತ್ಮಲಿಂಗ ಕರ್ನಾಟಕದ ನಮ್ಮ ಕರಾವಳಿಯಲ್ಲಿರುವುದು ಅದೃಷ್ಟ  ಎಂದು ಬಾರ್ಕೂರು ಮಹಾಸಂಸ್ಥಾನದ ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀಗಳು ಹೇಳಿದರು. 


ಉತ್ತರ ಕನ್ನಡ (ಅ.22) : ಜಗತ್ತಿನಲ್ಲೇ ಪವಿತ್ರವಾಗಿರುವ ಸ್ಥಳ ಗೋಕರ್ಣ. ಆತ್ಮಲಿಂಗಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಪರಶಿವನ ಆತ್ಮಲಿಂಗ ಕರ್ನಾಟಕದ ನಮ್ಮ ಕರಾವಳಿಯಲ್ಲಿರುವುದು ಅದೃಷ್ಟ  ಎಂದು ಬಾರ್ಕೂರು ಮಹಾಸಂಸ್ಥಾನದ ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀಗಳು ಹೇಳಿದರು. 

ಅವರು ನಿನ್ನೆ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದರು. ಶಿವನನ್ನು ಆರಾಧಿಸಿ ಆತ್ಮಲಿಂಗವನ್ನು  ರಾವಣ ತಂದಾಗ ಆ ಅಸುರನ ಕೈಯಿಂದ ತಪ್ಪಿಸಿ ನಮ್ಮ ನಾಡಿನಲ್ಲಿ ಆತ್ಮಲಿಂಗ ಸ್ಥಾಪನೆಗೆ ಕಾರಣನಾದ ಗಣೇಶ ನೆಲೆಸಿರುವ ಪುಣ್ಯ ಕ್ಷೇತ್ರ ಸಹ ಇದಾಗಿದೆ. ಇಂತಹ ಕ್ಷೇತ್ರ  ಅಭಿವೃಧ್ದಿಯಾಗಬೇಕು ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು. 

Latest Videos

undefined

ಕುದ್ರೋಳಿ ದೇವಸ್ಥಾನ ನಿರ್ಮಾಣದ ಹಿಂದಿದೆ ಐದು ಪೈಸೆ ಭಿಕ್ಷೆಯ ಕಥೆ!

ಈ ಹಿಂದೆ ರಾಘವೇಶ್ವರ ಶ್ರೀಗಳ ಆಡಳಿತದಲ್ಲಿ ಆದ  ಅಭಿವೃದ್ಧಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಠಾಧೀಶರ ಕೈಯಲ್ಲಿ ಧಾರ್ಮಿಕ ಕ್ಷೇತ್ರವಿದ್ದರೆ ಅದರದ್ದೇ ಆದ ಪರಂಪರೆ, ಧಾರ್ಮಿಕತೆಯ ಜತೆ ಅಭಿವೃದ್ದಿಗೆ ಪೂರಕವಾಗಿರುತ್ತದೆ. ಒಂದು ವೇಳೆ ಸರ್ಕಾರ ವಹಿಸಿಕೊಂಡರೆ  ಅಭಿವೃದ್ದಿ ಕಷ್ಟ ಸಾಧ್ಯ. ಅಂತಹ ಇಚ್ಛಾ ಶಕ್ತಿಯನ್ನು ಪರಶಿವನೇ ನೀಡ ಬೇಕು. ಮಸೀದಿ, ಈದ್ಗಾ ಮೈದಾನಗಳನ್ನೆಲ್ಲಾ ಹೇಗೆ ಸರ್ಕಾರ ಆ ಸಮುದಾಯಕ್ಕೆ ವಹಿಸಿಕೊಡುತ್ತದೆಯೋ ಅದರಂತೆ ಹಿಂದೂ ದೇವಾಲಯವನ್ನು ಮಠಾಧೀಶರಿಗೆ ನೀಡಬೇಕು ಎಂದರು. 

ಈ ವೇಳೆ  ದಯಾನಂದ ಅಂಕೋಲಾ ಮತ್ತಿತರರು ಉಪಸ್ಥಿತರಿದ್ದರು. ಶ್ರೀಗಳು ಮಹಾಗಣಪತಿ ಮಂದಿರ , ತಾಮ್ರಗೌರಿ ಮಂದಿರಕ್ಕೆ ತೆರಳಿ ದರ್ಶನ ಪಡೆದರು. 

ಮಹಾಲಯ ಅಮವಾಸ್ಯೆ ವಿಶೇಷ, ಗೋಕರ್ಣದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ, ಆಹಾರ ಸಮರ್ಪಣೆ

ಮಹಾಬಲೇಶ್ವರ ಮಂದಿರದ ಆವರಣದಲ್ಲಿರುವ ನಂದಿಯ ದರ್ಶನ ಪಡೆದ ಶ್ರೀಗಳು, ಈ ಹಿಂದಿನ ಆಡಳಿತ ನಿರ್ಮಿಸಿದ ಆದಿ ಗೋಕರ್ಣದ ನೂತನ ಕಟ್ಟವನ್ನು ವೀಕ್ಷಿಸಿದರು. ಮಂದಿರ ಮೇಲುಸ್ತುವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು ಶ್ರೀಗಳನ್ನು ಗೌರವಿಸಿದರು.

click me!