ಗ್ರಹ ಗತಿಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಆ ಗ್ರಹಗಳು ತಮ್ಮ ಸ್ಥಾನವನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾಯಿಸುವುದರಿಂದ ರಾಶಿ ಫಲಗಳ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಇಂದು ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಅದೃಷ್ಟ?
19-06-18 - ಮಂಗಳವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
undefined
ನಿಜ ಜ್ಯೇಷ್ಠ ಮಾಸ
ಶುಕ್ಲ ಪಕ್ಷ
ಸಪ್ತಮಿ ತಿಥಿ
ಪೂರ್ವ ಫಲ್ಗುಣಿ ನಕ್ಷತ್ರ
ಮೇಷ ರಾಶಿ: ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿರುವ ರವಿ ಬುಧರ ಯುತಿ ನಿಮ್ಮ ಸಹೋದರರಲ್ಲಿ ಉತ್ತಮ ಬಾಂಧವ್ಯ ರೂಪಿಸಲಿದೆ. ಅಷ್ಟೇ ಅಲ್ಲ ತಂದೆಯಿಂದ ಸಹಾಯವಾಗಲಿದೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಯವೂ ಆಗಲಿದೆ. ಸುಖ ಸ್ಥಾನದಲ್ಲಿರುವ ಶುಕ್ರ ಸ್ತ್ರೀಯರಿಂದ ತೊಂದರೆಯನ್ನು ತರಲಿದ್ದಾನೆ.
ದೋಷ ಪರಿಹಾರ - ಸುಬ್ರಹ್ಮಣ್ಯನಿಗೆ ಜೇನು ಅಭಿಷೇಕ ಮಾಡಿಸಿ, ಕೆಂಪು ಹೂವನ್ನು ಸಮರ್ಪಿಸಿ ಬನ್ನಿ ಶುಕ್ರ ದೋಷ ನಿವಾರಣೆಗೆ ಕಮಲ ಪುಷ್ಪವನ್ನು ದೇವಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಿ.
ವೃಷಭ : ಧನಸ್ಥಾನದಲ್ಲಿರುವ ರವಿ-ಬುಧರು ಹಣವನ್ನು ತಂದುಕೊಡುತ್ತಾರೆ. ಹಾಸ್ಯಮಾತುಗಳಿಂದ ಸನಿಹದಲ್ಲಿರುವವರನ್ನು ಚಕಿತಗೊಳಿಸುತ್ತೀರಿ. ಕುಟುಂಬದಲ್ಲಿ ಸಾಮರಸ್ಯ, ಸ್ವಲ್ಪ ಮಟ್ಟಿಗೆ ಆರೋಗ್ಯ ಬಾಧೆಯೂ ಕಾಡಲಿದೆ. ಹೊರಗಿನ ಊಟ ಮಾಡದಿದ್ದರೆ ಒಳಿತು.
ದೋಷ ಪರಿಹಾರ: ಶನೈಶ್ಚರನಿಗೆ ಹಾಗೂ ಶುಕ್ರನಿಗೆ ಕ್ರಮವಾಗಿ 7 ಹಾಗೂ 4 ಪ್ರದಕ್ಷಿಣೆ ಹಾಕಿಬನ್ನಿ
ಮಿಥುನ: ನಿಮ್ಮ ರಾಶಿಯಿಂದ ಧನಸ್ಥಾನದಲ್ಲಿ ಶುಕ್ರ-ರಾಹುಯುತಿ ನಿಮ್ಮ ಕುಟುಂಬದಲ್ಲಿ ಕಲಹವನ್ನೂ ಧನ ಹಾನಿಯನ್ನೂ ಮಾಡಲಿದೆ. ಆದರೆ ಗುರು ದೃಷ್ಟಿಯಿಂದ ಹಾಗೇ ಸಮಾಧಾನವೂ ಆಗಲಿದೆ. ಚಿಂತಿಸುವ ಅಗತ್ಯವಿಲ್ಲ.
ದೋಷ ಪರಿಹಾರ : ಶುಕ್ರನಿಗೆ ಬಿಳಿವಸ್ತ್ರವನ್ನೂ ಹಾಗೂ ರಾಹುವಿಗೆ ಉದ್ದಿನ ಕಾಳನ್ನೂ ದಾನ ಮಾಡಿಬನ್ನಿ.
ಕಟಕ: ಕೇಂದ್ರದಲ್ಲಿರುವ ಗುರು ನಿಮ್ಮ ಸಕಲ ಸುಖವನ್ನು ಸಮೃದ್ಧಿ ಮಾಡಲಿದ್ದಾನೆ, ಪಂಚಮಾಧಿಪತಿ ಉಚ್ಛನಾಗಿದ್ದು ಮಕ್ಕಳಿಂದ, ಮಕ್ಕಳ ಪ್ರತಿಭೆಯಿಂದ ಪ್ರಶಂಸೆಗೆ ಒಳಗಾಗುವಿರಿ. ಇಂದು ಚೈತನ್ಯಶೀಲರಾಗಿರಲಿದ್ದೀರಿ
ದೋಷ ಪರಿಹಾರ: ಸ್ನಾನ ಮಾಡಿ ನಿಮ್ಮ ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ
ಸಿಂಹ: ನಿಮ್ಮ ರಾಶಿಯಲ್ಲಿರುವ ಚಂದ್ರನಿಂದ ಸುಖ ಭೋಜನ ನಿಮ್ಮಪಾಲಿಗಿದೆ. ಬರಬೇಕಿದ್ದ ಹಣವೂ ಪ್ರಾಪ್ತವಾಗಲಿದೆ. ನೆಮ್ಮದಿಯ ದಿನ, ಹೆಣ್ಣುಮಕ್ಕಳು ಸ್ವಲ್ಪ ಎಚ್ಚರದಿಂದಿರಬೇಕು.
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಹೋಗಿ 11 ಬಿಲ್ವಪತ್ರೆ ಅರ್ಪಿಸಿ ಬನ್ನಿ
ಕನ್ಯಾ: ಧನ ಸ್ಥಾನದಲ್ಲಿರುವ ಗುರುವಿನಿಂದ ಧನ ಪ್ರಾಪ್ತಿ. ಲಾಭಾಧಿಪತಿ ವ್ಯಯಕ್ಕೆ ಬಂದಿರುವುದರಿಂದ ಬಂದ ಹಣ ಖಂಡಿತ ಉಳಿಯುವುದಿಲ್ಲ. ಯೋಚಿಸಬೇಡಿ ಈ ದಿನ ಹಣ ಖರ್ಚಾದರೂ ದೇಹಕ್ಕೆ ತೊಂದರೆಯಿಲ್ಲ. ಹಣ ಮುಖ್ಯವೇ ಆದರೂ ದೇಹ ಸೌಖ್ಯ ಮುಖ್ಯ. ಹಾಗಾಗಿ ಊಟದಲ್ಲಿ ಮಿತ ಆಸಕ್ತಿ ಇದ್ದರೆ ಒಳಿತು.
ದೋಷ ಪರಿಹಾರ: ಗಳಿಸಿದ ಹಣ ಉಳಿಯುವುದಕ್ಕಾಗಿ ಕನಕಧಾರಾ ಸ್ತೋತ್ರ ಪಠಿಸಿ, ಇಲ್ಲವಾದರೆ ಸ್ವರ್ಣಾಕರ್ಷಣ ಯಂತ್ರವನ್ನ ಮಾಡಿಸಿ ನಿತ್ಯವೂ ಕುಂಕುಮಾರ್ಚನೆ ಮಾಡಿ.
ತುಲಾ: ರಾಶಿಯಲ್ಲೇ ಗುರುವು ಇರುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಲಿದೆ, ಭಾಗ್ಯ ಸ್ಥಾನದಲ್ಲಿ ಲಾಭಾಧಿಪತಿ ಇರುವುದರಿಂದ ಉಡುಗೊರೆ ಲಭ್ಯವಾಗಲಿದೆ. ಶುಭದಿನ. ಹೆಚ್ಚು ಯೋಚಿಸಿ ದಿನವನ್ನು ಹಾಳುಮಾಡಿಕೊಳ್ಳುವುದು ಬೇಡ.
ದೋಷ ಪರಿಹಾರ: ನಿಮ್ಮ ಮನೆ ದೇವರಿಗೆ 5 ತುಪ್ಪದ ದೀಪ ಹಚ್ಚಿದಲ್ಲಿ ದಿನವು ನೆಮ್ಮದಿಯಿಂದ ಕೂಡಿರುತ್ತದೆ.
ವೃಶ್ಚಿಕ: ಧನಾಧಿಪತಿ ವ್ಯಯಸ್ಥಾನದಲ್ಲಿರುವುದಲ್ಲದೆ , ಧನಸ್ಥಾನದಲ್ಲಿ ಶನಿ ಇದ್ದಾನೆ. ಒಬ್ಬ ಕಪ್ಪು ಬಣ್ಣದ ವ್ಯಕ್ತಿಯಿಂದ ಮೋಸಹೋಗುವ ಸಾಧ್ಯತೆ ಇದೆ. ಹಣ ಕಳೆದುಕೊಳ್ಳುವ ಸಾಧ್ಯತೆ, ಜಾಗರೂಕರಾಗಿದ್ದರೆ ಒಳಿತು. ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ 10 ಸಲ ಯೋಚಿಸಿ. ಗಡಿಬಿಡಿ ಮಾಡಿಕೊಳ್ಳಬೇಡಿ
ದೋಷ ಪರಿಹಾರ : ದುರ್ಗಾ ದೇವಿಗೆ ಅರ್ಚನೆ ಮಾಡಿಸಿಕೊಂಡು ಬನ್ನಿ. ಸಾಧ್ಯವಾದರೆ 3 ಕೆಂಪು ಹೂವನ್ನು ದುರ್ಗಾ ದೇವಿಗೆ ಸಮರ್ಪಿಸಿ
ಧನಸ್ಸು: ಬಾಧಾ ಸ್ಥಾನದಲ್ಲಿ ರವಿ-ಬುಧರ ಯುತಿ ದಾಂಪತ್ಯದಲ್ಲಿ ಕಲಹ ತರುವುದಲ್ಲದೆ ಹೆಚ್ಚು ಮಾತಿನಿಂದ ಕೋಪ ಬರಲಿದೆ. ಸುಮಂಗಲಿಯರು ಸ್ವಲ್ಪ ಸಮಾಧಾನವಾಗಿದ್ದರೆ ಮನೆ ಶಾಂತವಾಗಿರುತ್ತದೆ. ಗುರುಚರಿತ್ರೆ ಪಾರಾಯಣ ಮಾಡಿ ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗಲಿದೆ.
ದೋಷ ಪರಿಹಾರ : ಗುರುಗಳ ದರ್ಶನವೇ ಸಕಲ ಕಷ್ಟ ಪರಿಹಾರ ಮಾಡಲಿದೆ, ಸಾಧ್ಯವಾದರೆ 5 ಜನಿವಾರಗಳನ್ನು ದಾನ ಮಾಡಿ.
ಮಕರ : ಕರ್ಮಸ್ಥಾನದಲ್ಲಿರುವ ಗುರು ಉದ್ಯೋಗ ಲಾಭವನ್ನೂ ಉದ್ಯೋಗದಲ್ಲಿ ನೆಮ್ಮದಿಯನ್ನೂ ತರುತ್ತಾನೆ. ಸ್ವಲ್ಪಮಟ್ಟಿಗೆ ಧನ ವ್ಯಯವಾಗುವ ಸಾಧ್ಯತೆ ಇದೆ. ಸ್ವಲ್ಪ ಅಸಮಧಾನದ ದಿನ.
ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ, ಸಾಧ್ಯವಾದರೆ ಕಪ್ಪು ವಸ್ತ್ರ ದಾನ ಮಾಡಿ
ಕುಂಭ : ಇಂದು ಯಾವುದೇ ತೊಡಕಿಲ್ಲದೆ ಕೆಲಸಗಳು ನೆರವೇರುತ್ತವೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ, ನಿಮಗೇನಾದರೂ ತೊಂದರೆ ಇದ್ದರೆ ಅದು ಸ್ತ್ರೀಯರಿಂದ ಹಾಗಾಗಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಇನ್ನು ಸ್ತ್ರೀಯರಿಗೆ ಉತ್ತಮ ದಿನವಾಗಿರಲಿದೆ. ನೀವು ಹೇಳಿದ್ದೇ ನಡೆಯುತ್ತೆ ಯೋಚಿನೆ ಬಿಟ್ಟು ಕಾರ್ಯ ಸಾಧಸಿ.
ದೋಷ ಪರಿಹಾರ : ದುರ್ಗಾ ದೇವಿಗೆ ಕುಂಕುಮ ಸಮರ್ಪಣೆ ಮಾಡಿಬನ್ನಿ
ಮೀನ : ಕರ್ಮಸ್ಥಾನದಲ್ಲಿರುವ ಶನಿಯಿಂದ ನಿಮ್ಮ ಉದ್ಯೋಗದಲ್ಲಿ ತೊಡಕನ್ನುಂಟು ಮಾಡಬಹುದು. ಸುಖಸ್ಥಾನದಲ್ಲಿರುವ ಬುಧ-ರವಿಯರು ಸುಖವನ್ನು ಇಮ್ಮಡಿಗೊಳಿಸಲಿದ್ದಾರೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ
ದೋಷ ಪರಿಹಾರ : ಶನೈಶ್ಚರನಿಗೆ ಎಳ್ಳಿನ ದೀಪ ಹಚ್ಚಿಬನ್ನಿ. ಸಾಧ್ಯವಾದರೆ ತಿದಾನ ಮಾಡಿ
ಗೀತಾಸುತ. ಸಂಪರ್ಕ ಸಂಖ್ಯೆ - 9164408090