Vastu Tips: ನಿಮ್ಮ ಮನೆ ಬಾಗಿಲ ಹಿಂದೆಯೂ ಬಟ್ಟೆಗಳು ನೇತಾಡ್ತಿವೆಯಾ? ಈಗ್ಲೇ ಅಭ್ಯಾಸ ಬದಲಿಸಿದ್ರೆ ಉತ್ತಮ

Published : Nov 11, 2026, 01:02 PM IST
Hang Clothes

ಸಾರಾಂಶ

ಮನೆಯ ಮುಖ್ಯ ಬಾಗಿಲಿರಲಿ ಇಲ್ಲ ರೂಮಿನ ಬಾಗಿಲುಗಳಿರಲಿ, ಬಾಗಿಲ ಹಿಂಭಾಗ ಬಟ್ಟೆಯಿಂದ ತುಂಬಿರುತ್ತೆ. ಅನೇಕರು ಬಳಸಿದ ಬಟ್ಟೆಗಳನ್ನು ಬಾಗಿಲ ಹಿಂದೆ ನೇತು ಹಾಕ್ತಾರೆ. ನಿಮ್ಮ ಮನೆಯಲ್ಲೂ ಬಾಗಿಲ ಹಿಂದೆ ಬಟ್ಟೆಗಳ ರಾಶಿಯಿದ್ರೆ ಇನ್ಮುಂದೆ ಈ ತಪ್ಪು ಮಾಡ್ಬೇಡಿ.

ಮನೆ ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ, ಪ್ರತಿಯೊಂದು ರೂಮ್‌ ಬಾಗಿಲ ಹಿಂದೆ ಬಟ್ಟೆಗಳು ನೇತಾಡ್ತಿರುತ್ವೆ. ಇದು ಬಹುತೇಕ ಎಲ್ಲರ ಮನೆಯಲ್ಲಿ ಕಾಣುವ ದೃಶ್ಯ. ವಾಸ್ತು ಶಾಸ್ತ್ರ ಮತ್ತು ಫೆಂಗ್ಶೂಯಿ ಪ್ರಕಾರ ಮನೆಯ ಬಾಗಿಲು ಕೇವಲ ಒಳಗೆ ಬಂದು ಹೊರಹೋಗುವ ದಾರಿಯಲ್ಲ. ಅದು ಮನೆಯೊಳಗೆ ಶಕ್ತಿ ಪ್ರವೇಶಿಸುವ ಪ್ರಮುಖ ಮಾರ್ಗ. ಹಾಗಾಗಿ ಮನೆಯ ಮುಖ್ಯ ಬಾಗಿಲು ಸರಿಯಾದ ಸ್ಥಿತಿಯಲ್ಲಿರುವುದು ಬಹಳ ಮುಖ್ಯ.

ಬಾಗಿಲ ಹಿಂದೆ ಬಟ್ಟೆ ನೇತಾಕಬೇಡಿ

ನಿಮ್ಮ ಮನೆಯ ಬಾಗಿಲ ಹಿಂದೆ ಬಟ್ಟೆಗಳಿದ್ದರೆ ಅದನ್ನು ಈಗ್ಲೇ ತೆಗೆಯೋದು ಉತ್ತಮ. ಬಾಗಿಲ ಹಿಂದೆ ಬಟ್ಟೆ ನೇತು ಹಾಕೋದ್ರಿಂದ ನಿಮ್ಮ ಕಷ್ವದ ಹೊರೆ ಹೆಚ್ಚಾಗ್ತಾ ಹೋಗುತ್ತೆ. ಬಾಗಿಲ ಭಾರ ಹೆಚ್ಚು ಮಾಡೋದು ಅಂದ್ರೆ ನಿಮ್ಮ ಜೀವನದ ಭಾರವನ್ನು ಹೆಚ್ಚು ಮಾಡಿದಂತೆ. ದಿನೇ ದಿನೇ ಜೀವನದ ಹೊರೆ ಹೆಚ್ಚಾಗ್ತಾ ಹೋಗುತ್ತ್ಯೆ ವಿನಃ ಕಡಿಮೆಯಾಗೋದಿಲ್ಲ. ಚಲಿಸುವಂತ ವಸ್ತು ಮನೆ ಬಾಗಿಲು. ಆದ್ರೆ ನೀವು ಅದ್ರ ಹಿಂದೆ ಬಟ್ಟೆ ಹೊರೆ ಹಾಕೋದ್ರಿಂದ ಅದ್ರ ಮೂಮೆಂಟ್‌ ಕಡಿಮೆಯಾಗುತ್ತೆ. ಮನೆಯ ಅತ್ಯಂತ ಸೂಕ್ಷ್ಮ ಜಾಗಗಳಲ್ಲಿ ಇದೂ ಒಂದಾಗಿದ್ದು, ಬಾಗಿಲ ವಾಸ್ತು ಬಹಳ ಮುಖ್ಯ.

ನೀವು ಬಾಗಿಲಿನಿಂದ ಎಲ್ಲ ಬಟ್ಟೆಗಳನ್ನು ತೆಗೆದು ನಂತ್ರ ಅದ್ರಿಂದಾಗುವ ಪರಿಣಾಮ ಗಮನಿಸ್ಬಹುದು. ಒಂದ್ವೇಳೆ ಮನೆ ಚಿಕ್ಕದಿದೆ, ಬಟ್ಟೆ ಇಡೋಕೆ ಜಾಗ ಇಲ್ಲ ಅಂದಾಗ ಕೂಡ ನೀವು ಬಾಗಿಲ ಹಿಂದೆ ಬಟ್ಟೆ ನೇತಾಕಬೇಡಿ. ಬಾತ್‌ ರೂಮ್‌ ಬಾಗಿಲ ಹಿಂದೆ ಕೂಡ ಬಟ್ಟೆ ಇಡಬೇಡಿ. ಬಟ್ಟೆಗಳನ್ನು ಇಡಲು ಪ್ರತ್ಯೇಕ ಜಾಗವನ್ನು ಆಯ್ಕೆ ಮಾಡ್ಕೊಳ್ಳಿ. ನಿಮ್ಮ ಈ ಒಂದು ಅಭ್ಯಾಸ ಇಡೀ ನಿಮ್ಮ ಜೀವನವನ್ನು ಬದಲಿಸುತ್ತದೆ. ನಿಧಾನವಾಗಿ ನಿಮ್ಮ ಮೈಂಡ್ ಹಗುರವಾಗುತ್ತದೆ. ಜೀವನದಲ್ಲಿ ನೀವು ನೆಮ್ಮದಿ ಕಾಣಲು ಶುರು ಮಾಡ್ತೀರಿ.

ಬಾಗಿಲಿನ ವಾಸ್ತು ಬಗ್ಗೆ ಗಮನ ಇರಲಿ

ಬಟ್ಟೆ ನೇತಾಕೋದು ಮಾತ್ರವಲ್ಲ, ಮನೆಯ ಬಾಗಿಲನ್ನು ತೆರೆದಾಗ ಅಥವಾ ಮುಚ್ಚುವಾಗ ಕಿರ್ಕಿರ್ ಶಬ್ದ ಬರುತ್ತಿದ್ದರೆ ಅದನ್ನು ವಾಸ್ತು ಪ್ರಕಾರ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಕಲಹ, ಮನಸ್ತಾಪ ಹಾಗೂ ತೊಂದರೆಗಳು ಉಂಟಾಗಬಹುದು. ಹಾಗೆಯೇ ಮನೆಯ ಮುಖ್ಯ ಬಾಗಿಲಿನಲ್ಲಿ ಯಾವುದೇ ರೀತಿಯ ಬಿರುಕು, ಮುರಿತ ಅಥವಾ ಕೊಳೆತ ಮರದ ಭಾಗ ಇರಬಾರದು. ಹಾಗೆಯೇ ಬಾಗಿಲು ನೆಲಕ್ಕೆ ಟಚ್‌ ಆಗಿ ಶಬ್ಧ ಬರ್ತಿದ್ದರೆ ಅದನ್ನು ಸರಿಪಡಿಸಲು ಮರೆಯಬೇಡಿ. ಈ ಶಬ್ಧ ನಿಮ್ಮಲ್ಲಿ ಚರ್ಮ ರೋಗಕ್ಕೆ ಕಾರಣವಾಗುತ್ತದೆ.

PREV
Read more Articles on
click me!

Recommended Stories

ಗುರು, ಮಂಗಳ ಹಾಗೂ ಶುಕ್ರ ಸಂಚಾರದ ಪ್ರಭಾವ: ನವೆಂಬರ್ 12ರಿಂದ ಬದಲಾಗಲಿದೆ ಈ 6 ರಾಶಿಗಳ ಅದೃಷ್ಟ!
ದೀಪಾವಳಿ ಮುಗಿಯುತ್ತಿದ್ದಂತೆಯೇ 'ಇವರನ್ನೆಲ್ಲಾ' ಜೈಲಿಗೆ ಹಾಕಿ ಎಂದ ಉರ್ಫಿ ಜಾವೇದ್‌..!