
ಬೆಂಗಳೂರು: ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 2024ರಲ್ಲಿ ಬಂಧನಕ್ಕೊಳಗಾಗಿದ್ದು, ಆಗಸ್ಟ್ 2026ಕ್ಕೆ ಜೈಲಿನಲ್ಲಿ 2 ವರ್ಷಗಳು ಪೂರ್ಣಗೊಂಡಿವೆ. ಅವರು ವಾಪಸ್ ಯಾವಾಗ ಬರುತ್ತಾರೆ ಎನ್ನುವ ಬಗ್ಗೆ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಟ ರಿಲೀಸ್ ಆಗುವ ಬಗ್ಗೆ ಇದಾಗಲೇ ಕೆಲವು ಜ್ಯೋತಿಷಿಗಳು ಮಾತನಾಡಿದ್ದಾರೆ. ಇದೀಗ ಪಂಡಿತ್ ದಿನೇಶ್ ಗುರೂಜಿ ಅವರು ದರ್ಶನ್ ಅವರ ಬಿಡುಗಡೆ ಮತ್ತು ರಾಜಕೀಯ ಎಂಟ್ರಿಯ ಕುರಿತು ಮಾತನಾಡಿದ್ದು, ಜಾಲತಾಣದಲ್ಲಿ ಇದರ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ಜ್ಯೋತಿಷಿ ಹೇಳಿದ್ದೇನೆಂದರೆ, 2027 ಮಾರ್ಚ್ನಿಂದ ಜೂನ್ ಒಳಗೆ ದರ್ಶನ್ ರಿಲೀಸ್ ಆಗಿಯೇ ಆಗುತ್ತಾರೆ. ಈಗ ಅವರಿಗೆ ಗುರು ದೆಸೆ ನಡೆಯುತ್ತಿದ್ದು, ಅದು ಮಾರ್ಚ್ಗೆ ಮುಕ್ತಾಯವಾಗಿ ಶನಿ ದೆಸೆ ಆರಂಭವಾಗುತ್ತದೆ. ಶನಿ 10ನೇ ಮನೆ ತೋರಿಸುತ್ತಿದೆ. ಆ ಸಂದರ್ಭದಲ್ಲಿ, ದರ್ಶನ್ ಜೈಲಿನಲ್ಲಿ ಬಿಡುಗಡೆಯಾಗುತ್ತಾರೆ ಎಂದಿರುವ ಗುರೂಜಿ, ನಾನು ಸರಸ್ವತಿ ಆಶೀರ್ವಾದ ತೆಗೆದುಕೊಂಡು ಹೇಳುತ್ತಿದ್ದೇನೆ, ತಮಿಳುನಾಡಿನಲ್ಲಿ ದಳಪತಿ ವಿಜಯ್ ಹಾದಿಯನ್ನೇ ದರ್ಶನ್ ಹಿಡಿಯುತ್ತಾರೆ. ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದಿದ್ದಾರೆ..
ಸಿನಿಮಾದಲ್ಲಿ ಲೈಟ್ ಆಗಿ ನಟಿಸಿದರೂ, ಅವರು ದೊಡ್ಡ ದೊಡ್ಡ ರಾಜಕೀಯ ಪಕ್ಷಗಳಿಂದ ಚುನಾವಣೆಯಲ್ಲಿ ಫೈಟ್ ಮಾಡಿ ಗೆಲ್ಲುತ್ತಾರೆ. ಅವರಿಗೆ ರಾಜಕೀಯದಲ್ಲಿಯೇ ಭವಿಷ್ಯವಿದೆ. ದಳಪತಿ ವಿಜಯ್ ಹಾದಿ ಹಿಡಿಯುತ್ತಾರೆ ಎನ್ನುವ ಮೂಲಕ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವ ಛಾನ್ಸ್ ಇದೆ ಎಂದುಪರೋಕ್ಷವಾಗಿ ನುಡಿದಿದ್ದಾರೆ ಗುರೂಜಿ.
ಇದೇ ಸಮಯದಲ್ಲಿ 2018ರಲ್ಲಿ ನಟ ನೀಡಿರುವ ಸಂದರ್ಶನವೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿವೆ. ಸುವರ್ಣ ನ್ಯೂಸ್ & ಕನ್ನಡ ಪ್ರಭ ಜೊತೆ ದರ್ಶನ್ EXCLUSIVE ಮಾತುಗಳನ್ನಾಡಿದ್ದ ದರ್ಶನ್ ಅವರು ಅಂದು, ತಮ್ಮ ರಾಜಕೀಯ ಪ್ರವೇಶವನ್ನು ತಳ್ಳಿಹಾಕಿದ್ದರು. ರಾಜಕೀಯ ಸೇರುವ ಆಸಕ್ತಿ ಇಲ್ಲ ಅಂತ ಸ್ಪಷ್ಟಪಡಿಸಿದ್ದರು. ಕಂಡ ಕಂಡವರಿಗೆ ಸಲಾಮು ಹೊಡೆಯಲು ನನಗೆ ಬರೋದಿಲ್ಲ, ಸಲಾಮು ಸಂಸ್ಕೃತಿಯನ್ನು ರಾಜಕಾರಣ ಒಳಗೊಂಡಿದೆ, ಹೀಗಾಗಿ ರಾಜಕಾರಣಕ್ಕೂ ನನಗೂ ಆಗಿಬರಲ್ಲ ಅಂತ ಖಡಕ್ ಆಗಿ ಹೇಳಿದ್ದರು. ನನಗೆ ಈಗ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋಗೋದಾದ್ರೆ ಎಲ್ಲರಿಗೂ ತಿಳಿಸುವೆ. ಗುಟ್ಟಾಗಿ ರಾಜಕೀಯಕ್ಕೆ ಹೋಗುವ ಅನಿರ್ವಾಯ ನನಗಿಲ್ಲ ಅಂತ ಹೇಳಿ ರಾಜಕೀಯ ಪ್ರವೇಶದ ಬಗೆಗಿನ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು.
ಆದರೆ ಈ ಮಾತನಾಡಿ ಎಂಟು ವರ್ಷಗಳಾಗಿವೆ. ಈ ಎಂಟು ವರ್ಷಗಳಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಗಿದೆ. ಕೊ*ಲೆ ಕೇಸ್ ಅವರನ್ನು ಸುತ್ತಿಕೊಂಡಿದೆ. ಎರಡು ವರ್ಷ ಜೈಲುವಾಸವಾಗಿದೆ. ಇದಾಗಲೇ ಅವರ ಆರೋಗ್ಯದಲ್ಲಿಯೂ ಸಾಕಷ್ಟು ಏರುಪೇರು ಆಗಿದೆ. ಅವರ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗುರೂಜಿ ಮಾತು ಅವರ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಉತ್ಸಾಹ ತಂದಿದೆ. ಆದರೆ ಹಲವರು ದರ್ಶನ್ ಅವರಿಗೆ ರಾಜಕೀಯ ಬೇಡ, ನಟನೆಯಲ್ಲಿಯೇ ಮುಂದುವರೆಯಿಲಿ ಎನ್ನುತ್ತಿದ್ದಾರೆ.